ವಿಪಕ್ಷಗಳ ‘ಇಂಡಿಯಾ’ ಕೂಟದಲ್ಲಿ ಭಾರೀ ಬೆಳವಣಿಗೆ: ಮೋದಿ ವಿರುದ್ಧ ಸಾರಥ್ಯಕ್ಕೆ ಸಜ್ಜಾಗ್ತಾರಾ ಸೋನಿಯಾ..?

ಮುಂಬೈನಲ್ಲಿ ನಡೆಯುವ 3ನೇ ಸಭೆಯಲ್ಲಿ ಮಹತ್ವದ ಘೋಷಣೆ ಸಾಧ್ಯತೆ
ಮುಂಬೈ ಸಭೆಯಲ್ಲೇ ಸಲಹಾ ಸಮಿತಿ ಸದಸ್ಯರ ನೇಮಕ ಫೈನಲ್ ಸಾಧ್ಯತೆ
ಮುಂಬೈನಲ್ಲಿ ಆಗಸ್ಟ್‌ 31ರಿಂದ ಎರಡು ದಿನಗಳ ಕಾಲ I.N.D.I.A ಸಭೆ

First Published Aug 7, 2023, 12:03 PM IST | Last Updated Aug 7, 2023, 12:03 PM IST

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂಡಿಯಾ(I.N.D.I.A) ಕೂಟದಲ್ಲಿ ಭಾರೀ ಬೆಳವಣಿಗೆಗಳು ಆಗುತ್ತಿವೆ. ಮೋದಿ ವಿರುದ್ಧ ಸಾರಥ್ಯಕ್ಕೆ ಸೋನಿಯಾ ಗಾಂಧಿ(Sonia Gandhi) ಸಜ್ಜಾಗುತ್ತಾರೆ ಎನ್ನಲಾಗ್ತಿದೆ. ಮುಂಬೈನಲ್ಲಿ ನಡೆಯುವ 3ನೇ ಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. UPA ಸಾರಥ್ಯ ವಹಿಸಿದ್ದ ಅನುಭವವನ್ನು ಸೋನಿಯಾ ಗಾಂಧಿ ಹೊಂದಿದ್ದಾರೆ. ಹೀಗಾಗಿ ಸೋನಿಯಾಗೆ I.N.D.I.A ಕೂಟದ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. 11 ಸದಸ್ಯರ ಸಲಹಾ ಸಮಿತಿ ಸಂಚಾಲಕ ಸ್ಥಾನಕ್ಕೆ ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿ ಮಾಡಲು ಕಾಂಗ್ರೆಸ್ (Congress) ಸಮ್ಮತಿ ನೀಡಿದೆ. ಕಾಂಗ್ರೆಸ್ ಪಾಳಯದಲ್ಲಿನ ಚರ್ಚೆಗೆ 26 ಮಿತ್ರ ಪಕ್ಷಗಳ ಒಪ್ಪಿಗೆ ಸಿಗುತ್ತಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಕಾಂಗ್ರೆಸ್‌ ಸಾರಥ್ಯವನ್ನು ಮಮತಾ, ಕೇಜ್ರಿವಾಲ್ ಒಪ್ಪಿಕೊಳ್ತಾರಾ..?, ಮುಂಬೈನಲ್ಲಿ(Mumbai) ನಡೆಯುವ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಹೊರ ಬೀಳಲಿದೆ. ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1 ರಂದು 3ನೇ ಸಭೆ ನಡೆಯಲಿದೆ.

ಇದನ್ನೂ ವೀಕ್ಷಿಸಿ:  ಬಿಲ್ಡಪ್‌ಗಾಗಿ ಅಮಾಯಕನ ಹೆಣ ಹಾಕಿದ ಕಿರಾತಕರು: ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಹೋದವರಿಗೆ ಗುಂಡೇಟು !