ಸೌಂದರ್ಯಕ್ಕಾಗಿ ಸರ್ಜರಿ.. ನಟಿ ಅಲಿಯಾ ಭಟ್‌ಗೆ ಪ್ಯಾರಾಲಿಸಿಸ್? ನಿಜಾನಾ ಈ ಗಾಸಿಪ್?

ಇತ್ತೀಚಿಗೆ ಬಿ ಟೌನ್ ಆಲಿಯಾ ಭಟ್ ಬಗ್ಗೆ ಹರಡಿರೋ ಒಂದು ಗಾಸಿಪ್ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಸೌಂದರ್ಯಕ್ಕಾಗಿ ಮಾಡಿಸಿಕೊಂಡ ಸರ್ಜರಿಯ ಅಡ್ಡಪರಿಣಾಮದಿಂದ ಆಲಿಯಾ ಮುಖಕ್ಕೆ ಪ್ಯಾರಾಲಿಸಿಸ್ ಆಗಿದೆ ಅಂತ ವೈದ್ಯರೊಬ್ಬರು ಕೊಟ್ಟಿರೋ ಹೇಳಿಕೆ ಫ್ಯಾನ್ಸ್​ಗೆ ಶಾಕ್ ತಂದಿದೆ. 
 

First Published Oct 27, 2024, 5:04 PM IST | Last Updated Oct 27, 2024, 5:04 PM IST

ಇತ್ತೀಚಿಗೆ ಬಿ ಟೌನ್ ಆಲಿಯಾ ಭಟ್ ಬಗ್ಗೆ ಹರಡಿರೋ ಒಂದು ಗಾಸಿಪ್ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಸೌಂದರ್ಯಕ್ಕಾಗಿ ಮಾಡಿಸಿಕೊಂಡ ಸರ್ಜರಿಯ ಅಡ್ಡಪರಿಣಾಮದಿಂದ ಆಲಿಯಾ ಮುಖಕ್ಕೆ ಪ್ಯಾರಾಲಿಸಿಸ್ ಆಗಿದೆ ಅಂತ ವೈದ್ಯರೊಬ್ಬರು ಕೊಟ್ಟಿರೋ ಹೇಳಿಕೆ ಫ್ಯಾನ್ಸ್​ಗೆ ಶಾಕ್ ತಂದಿದೆ. ಹಾಗಾದ್ರೆ ನಿಜಕ್ಕೂ ಆಲಿಯಾಗೆ ಏನಾಗಿದೆ..? ಈ ಗಾಸಿಪ್ ಬಗ್ಗೆ ಆಲಿಯಾ ಹೆಳಿದ್ದೇನು..?  ಬಾಲಿವುಡ್ ಬೆಡಗಿ ಆಲಿಯಾ ಭಟ್ ಬಗ್ಗೆ ಒಂದು ಶಾಕಿಂಗ್ ಸುದ್ದಿ ಹರಿದಾಡ್ತಾ ಇದೆ. ಇತ್ತೀಚಿಗೆ ಕಾಸ್ಮೆಟಿಕ್ ಸರ್ಜನ್ ಒಬ್ಬರು ಆಲಿಯಾ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟಿದ್ರು. ಆಲಿಯಾ ಭಟ್ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳೋದಕ್ಕೆ ಬೋಟಾಕ್ಸ್ ಸರ್ಜರಿಗೆ ಒಳಗಾಗಿದ್ರು. ಅದರ ಅಡ್ಡ ಪರಿಣಾಮದಿಂದ ಆಕೆಯ ಮುಖದ ಒಂದು ಭಾಗಕ್ಕೆ ಪಾಶ್ವವಾಯು ಆಗಿದೆ ಅಂತ ಸಾಯಿ ಗಣಪತಿ ಅನ್ನೋ ವೈದ್ಯರು ಸ್ಟೇಟ್ ಮೆಂಟ್ ಕೊಟ್ಟಿದ್ರು. 

ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದೆ. ಮಗುವಾದ ಬಳಿಕ ಮತ್ತೆ ನಟನೆಗೆ ಮರಳಿರೋ ಆಲಿಯಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಾ ಇದ್ದಾರೆ. ಎರಡು ವಾರಗಳ ಹಿಂದಷ್ಟೇ ಆಲಿಯಾ ನಟನೆಯ ಜಿಗ್ರಾ ಸಿನಿಮಾ ತೆರೆಗೆ ಬಂದಿದೆ. ಆಲಿಯಾ ಪಬ್ಲಿಸಿಟಿ ಇವೆಂಟ್​​ಗಳಲ್ಲಿ ಌಕ್ಟಿವ್ ಆಗಿದ್ರು. ಅಂಥದ್ರಲ್ಲಿ ಆಲಿಯಾಗೆ ಏನಾಯ್ತು ಅಂತ ಫ್ಯಾನ್ಸ್ ಆತಂಕಿತರಾಗಿದ್ದಾರೆ. ಹೌದು ಇತ್ತೀಚಿಗೆ ಅಲಿಯಾ ಮುಖಚರ್ಯೆಯಲ್ಲಿ ಬದಲಾವಣೆ ಕಾಣ್ತಾ ಇದೆ. ಆಲಿಯಾ ಮಾತನಾಡೋವಾಗ ಬಾಯಿ ಹೊರಳಿದಂತೆ ಕಾಣ್ತಾ ಇದೆ. ಇದನ್ನೇ ಇಟ್ಟುಕೊಂಡು ಆಕೆಯ ಮುಖದ ಒಂದು ಭಾಗ ಸರ್ಜರಿ ಅಡ್ಡಪರಿಣಾಮದಿಂದ ನಿಷ್ಕ್ರೀಯ ಆಗಿಬಿಟ್ಟಿದೆ ಅಂತ ಕಾಸ್ಮೆಟಿಕ್ ಸರ್ಜನ್ ಸಾಯಿ ಗಣಪತಿ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ನಟಿಯರು ಹೀಗೆ ಸೌಂದರ್ಯ ವರ್ಧನೆಗೆ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗೋದು ಹೊಸತೇನಲ್ಲ. 

ಆಲಿಯಾ ಕೂಡ ಇಂಥಾ ಸರ್ಜರಿಗೆ ಒಳಗಾಗಿರಬಹುದು. ಆದ್ರೆ ಆಕೆಗೆ ಪ್ಯಾರಾಲಿಸಿಸ್ ಆಗಿದೆ ಅಂತ ಹೇಳಿರೋದು ಅಪ್ಪಟ ಸುಳ್ಳು. ಈ ಬಗ್ಗೆ ಖುದ್ದು ಆಲಿಯಾ ರಿಯ್ಯಾಕ್ಟ್ ಮಾಡಿದ್ದು, ತನ್ನ ಬಗ್ಗೆ ಮಾತನಾಡಿದವರಿಗೆ ಟಾಂಗ್ ಕೊಟ್ಟಿದ್ದಾರೆ. ‘ಸೌಂದರ್ಯವರ್ಧಕ ಚಿಕಿತ್ಸೆ ಪಡೆಯುವವರ ಬಗ್ಗೆ ನನಗೆ ಯಾವುದೇ ದೂರು ಅಥವಾ ಬೇಸರ ಇಲ್ಲ. ನಿಮ್ಮ ದೇಹ ನಿಮ್ಮ ಇಷ್ಟ. ಆದರೆ ನನ್ನ ಬಗ್ಗೆ ಹಬ್ಬಿಸಲಾಗುತ್ತಿರುವ ಸುದ್ದಿಗಳು ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ನನ್ನದು ಸೊಟ್ಟ ನಗೆ, ವಿಚಿತ್ರ ರೀತಿಯ ಮಾತುಗಾರಿಕೆ ಎಂದೆಲ್ಲ ಹೇಳುತ್ತಿದ್ದಾರೆ. ಒಬ್ಬ ವ್ಯಕ್ತಿಯ ಮುಖದ ಬಗ್ಗೆ ಹೀಗೆಲ್ಲ ಮಾತನಾಡಲು ಹೇಗೆ ಸಾಧ್ಯ? ಇದು ಅವಶ್ಯಕತೆ ಇಲ್ಲ ಸೂಕ್ಷ್ಮ ವಿಮರ್ಶೆ. ಈ ಸುಳ್ಳುಗಳಿಗೆ ‘ಸೈಂಟಿಫಿಕ್’ ವ್ಯಾಖ್ಯೆಗಳನ್ನು ಸಹ ನೀಡುತ್ತಿದ್ದೀರಿ. ನನಗೆ ಪಾರ್ಶ್ವವಾಯು ಆಗಿದೆಯೇ? ನೀವೇನು ತಮಾಷೆ ಮಾಡುತ್ತಿದ್ದೀರಾ? ಇಂಥಹಾ ಒಂದು ಗಂಭೀರ ಹೇಳಿಕೆಯನ್ನು ಯಾವುದೇ ಸಾಕ್ಷಿ, ವಿಚಾರಣೆ ಇಲ್ಲದೆ ನೀವು ನೀಡಿದ್ದೀರಿ’. 

‘ಇದನ್ನೆಲ್ಲ ನೀವು ಮಾಡುತ್ತಿರುವುದು ಏಕೆ? ಜನಪ್ರಿಯತೆಗೆ? ಕ್ಲಿಕ್ ಬೇಟ್​ಗೆ? ಹಣ ಮಾಡಲು? ಇದರಿಂದ ಯುವ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ. ಮಹಿಳೆಯ ದೇಹ, ಮುಖ, ಖಾಸಗಿ ಜೀವನ, ನಮ್ಮ ‘ಉಬ್ಬು-ತಗ್ಗು’ಗಳ ಬಗ್ಗೆ ಚರ್ಚೆ ಮಾಡುವ ಹೀನ ಮನಸ್ಥಿತಿಯವರ ಬಗ್ಗೆ ನಾವು ದನಿ ಎತ್ತಲೇ ಬೇಕಿದೆ. ನಮ್ಮ ದೇಹ ವಿಮರ್ಶೆಯ, ಚರ್ಚೆಯ ವಸ್ತು ಆಗಿಬಿಟ್ಟಿದ್ದೆಯೇ? ವ್ಯಕ್ತಿಗಳ ಭಿನ್ನತೆಯನ್ನು, ವ್ಯಕ್ತಿತ್ವವನ್ನು ನಾವು ಸಂಭ್ರಮಿಸಬೇಕಿದೆ, ಅದರ ಹೊರತಾಗಿ ಹೀಗೆ ಜಡ್ಜ್​ಮೆಂಟಲ್ ಆಗುವುದು ವಿಮರ್ಶೆ, ಟೀಕೆ ಮಾಡುವುದು ಹಾನಿಕಾರಕ, ಅದು ಸಾಕಾಗಿ ಹೋಗಿದೆ’.  ಹೌದು ಇಂಥದ್ದೊಂದು ಸುದೀರ್ಘ ಪೋಸ್ಟ್ ಹಾಕಿರೋ ಆಲಿಯೋ ನಿಮ್ಮ ಲಾಭಕ್ಕಾಗಿ ನಟಿಯರ ದೇಹದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬೇಡಿ ಅಂತ ಗರಂ ಆಗಿದ್ದಾರೆ. ಸದ್ಯ ಈ ಗಾಸಿಪ್​ನಿಂದ ಶಾಕ್ ಆಗಿದ್ದ ಫ್ಯಾನ್ಸ್, ಆಲಿಯಾ ಭಟ್ ಪೋಸ್ಟ್ ನೋಡಿ ನಿರಾಳವಾಗಿದ್ದಾರೆ.