Asianet Suvarna News Asianet Suvarna News

News Hour: ಬಿಜೆಪಿ, ಕಾಂಗ್ರೆಸ್‌ ನಡುವೆ 'ಸೈಲೆಂಟ್‌' ರಾಜಕೀಯ!

ಸೈಲೆಂಟ್‌ ಸುನೀಲನ ವಿಚಾರವಾಗಿ ರಾಜ್ಯ ರಾಜಕಾರಣ ವೈಲೆಂಟ್‌ ಆಗಿದೆ. ಬಿಜೆಪಿ ಪಕ್ಷಕ್ಕೆ ಸೇರಿ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವ ಬಯಕೆಯಲ್ಲಿದ್ದ ಸೈಲೆಂಟ್ ಸುನೀಲ ಅದಕ್ಕಾಗಿ ರಕ್ತದಾನದ ಶಿಬಿರದ ಹೆಸರಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು.

ಬೆಂಗಳೂರು (ನ.29): ರೌಡಿ ಶೀಟರ್‌ ಸೈಲೆಂಟ್‌ ಸುನೀಲನ ರಾಜಕೀಯದ ಆಸೆಗೆ ಬಹುತೇಕ ತಣ್ಣೀರು ಬಿದ್ದಿದೆ. ರಕ್ತದಾನದ ಶಿಬಿರದ ಹೆಸರಲ್ಲಿ ಸೈಲೆಂಟ್‌ ಸುನೀಲ ಇತ್ತೀಚೆಗೆ ತನ್ನ ಶಕ್ತಿ ಪ್ರದರ್ಶನ ಮಾಡಿದ್ದರು. ಬಿಜೆಪಿಯ ಪ್ರಭಾವಿ ಸಚಿವರು ಹಾಗೂ ಸಂಸದರನ್ನು ಅವರು ಕಾರ್ಯಕ್ರಮಕ್ಕ ಆಹ್ವಾನ ಮಾಡಿದ್ದರು.

ಭಾನುವಾರ ಚಾಮರಾಜಪೇಟೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್‌ ಕೂಡ ಹಾಜರಿದ್ದರು. ಈಗ ಈ ವಿಚಾರವೀಗ ರಾಜಕೀಯದ ದಾಳವಾಗಿ ಪರಿಣಮಿಸಿದೆ. ಫೈಟರ್‌ ರವಿ ಬಳಿಕ ಈಗ ಸೈಲೆಂಟ್‌ ಸುನೀಲ, ರೌಡಿ ಶೀಟರ್‌ಗಳನ್ನು ಬಿಜೆಪಿ ಸೇರಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ತಿರುಗೇಟು ನೀಡಿದೆ.

ಮಂಗಳೂರಿನ 3 ದೇವಸ್ಥಾನ ಸೇರಿ 6 ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು, ತನಿಖೆಯಲ್ಲಿ ಬಹಿರಂಗ!

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಯಾವುದೇ ಕಾರಣಕ್ಕೂ ಸೈಲೆಂಟ್‌ ಸುನೀಲನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅಪರಾಧ ಹಿನ್ನಲೆಯುಳ್ಳವರ ಜೊತೆ ಬಿಜೆಪಿ ಎಂದಿಗೂ ಇರೋದಿಲ್ಲ. ಸೈಲೆಂಟ್‌ ಸುನೀಲನ ಜೊತೆ ವೇದಿಕೆ ಹಂಚಿಕೊಂಡಿದ್ದ ವಿಚಾರವಾಗಿ ವರದಿ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.