Asianet Suvarna News Asianet Suvarna News

ಇತ್ತ ಕೋಟ ಶ್ರೀನಿವಾಸ್ ಪೂಜಾರಿ ಪ್ರಮಾಣವಚನ, ಅತ್ತ ಮನೆಯಲ್ಲಿ ಪತ್ನಿ ಭಾವುಕ

Aug 4, 2021, 6:30 PM IST

ಉಡುಪಿ, (ಆ.04): ಕೆಲವರು ಕಷ್ಟದಿಂದ ಭಾವುಕರಾದ್ರೆ, ಇನ್ನೂ ಕೆಲವರು ಹೆಚ್ಚು ಸಂತೋಷವಾದ್ರೆ ಭಾವುಕರಾಗ್ತಾರೆ. ಅದರಂತೆ ಪತಿ ಮೂರನೇ ಬಾರಿ ಸಚಿವರಾದ ಖುಷಿಯಲ್ಲಿ ಪತ್ನಿ ಬಾವುಕರಾಗಿರುವ ಪ್ರಸಂಗ ಜರುಗಿದೆ.

 ಮದುವೆ ಫೊಟೊಗ್ರಫಿ ಮಾಡಿಕೊಂಡಿದ್ದ ಕೋಟಾ ಇಂದು 2ನೇ ಬಾರಿ ರಾಜ್ಯದ ಮಂತ್ರಿ

ಹೌದು...ಈ ಹಿಂದೆ 2013ರಲ್ಲಿ ಸಚಿವರಾಗಿದ್ದ  ಕೋಟಾ ಶ್ರೀನಿವಾಸ ಪೂಜಾರಿ ಬಳಿಕ 2028ರಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಮುಜರಾಯಿ, ಮೀನುಗಾರಿಕಾ ಖಾತೆ ನಿರ್ವಹಿಸಿದ್ರು, ಇದೀಗ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲೂ ಸಹ ಅವಕಾಶ ಸಿಕ್ಕಿದೆ. ಈ ಖುಷಿಯಲ್ಲಿ ಅವರ ಪತ್ನಿ ಶಾಂತಾ ಅವರು ಭಾವುಕರಾಗಿದ್ದಾರೆ.