Asianet Suvarna News Asianet Suvarna News

ಸಿಂದಗಿ ಬೈ ಎಲೆಕ್ಷನ್‌ ಅಖಾಡದಲ್ಲಿ ದೇವೇಗೌಡ್ರು, ದಣಿವರಿಯದ ನಾಯಕ..!

ಸಿಂದಗಿ, ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮೂರು ಪಕ್ಷದ ನಾಯಕರಿಂದ ಪ್ರಚಾರದ ಭರಾಟೆ ಜೋರಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರು  ಜೆಡಿಎಸ್‌ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮತಯಾಚನೆ ಮಾಡಿದರು. 

ಬೆಂಗಳೂರು (ಅ. 20): ಸಿಂದಗಿ, ಹಾನಗಲ್ ಉಪಚುನಾವಣಾ ಕಣ ರಂಗೇರಿದೆ. ಮೂರು ಪಕ್ಷದ ನಾಯಕರಿಂದ ಪ್ರಚಾರದ ಭರಾಟೆ ಜೋರಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರು  ಜೆಡಿಎಸ್‌ ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮತಯಾಚನೆ ಮಾಡಿದರು. ‘ನಾನು ಸತ್ತರೂ ಪ್ರಾದೇಶಿಕ ಪಕ್ಷ ಉಳಿಯಬೇಕು’ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಬೈ ಎಲೆಕ್ಷನ್ ಬಳಿಕ ಈ ಮೆಂಟಲ್‌ಗಳಿಗೆ ಉತ್ತರಿಸುತ್ತೇವೆ: ಡಿಕೆಶಿ

ಸಿಂದಗಿ ಉಪಚುನಾವಣೆಯಲ್ಲಿ ನಾವು ತೋರಿಕೆಗಾಗಿ ಚುನಾವಣೆ ಮಾಡುತ್ತಿಲ್ಲ. ಯಾವ ಪಕ್ಷದ ಏಜೆಂಟ್‌ರಾಗಿ ಕೆಲಸ ಮಾಡುವ ದುಸ್ಥಿತಿ ಬಂದಿಲ್ಲ. ನಾವು ಸಮರ್ಥರಿದ್ದೇವೆ. ಪಕ್ಷದ ಅಭ್ಯರ್ಥಿ ನಾಜಿಯಾ ಅಂಗಡಿ ಅವರನ್ನು ಗೆಲ್ಲಿಸುತ್ತೇವೆ. ಆದ್ದರಿಂದ ಜೆಡಿಎಸ್‌ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ದೇವೇಗೌಡರ ಪ್ರಚಾರ ಹೇಗಿತ್ತು..? ಇಲ್ಲಿದೆ ವರದಿ

Video Top Stories