Asianet Suvarna News Asianet Suvarna News

ಆಟವಾಡುತ್ತಿದ್ದ ಮಗುವನ್ನು ಕಿಡ್ನಾಪ್‌ ಮಾಡಿದ ಕೋತಿ

  • ಮಗುವನ್ನು ಹೊತ್ತೊಯ್ಯಲು ಯತ್ನಿಸಿದ ಕೋತಿ
  • ಬೊಬ್ಬೆ ಕೇಳಿ ಓಡಿಬಂದು ರಕ್ಷಿಸಿದ ಯುವಕ
  • ಕೋತಿಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ

ರಸ್ತೆಯಲ್ಲಿ ತನ್ನಷ್ಟಕ್ಕೆ ತಾನು ಆಟವಾಡುತ್ತಿದ್ದ ಮಗುವನ್ನು ಕೋತಿಯೊಂದು ಎಳೆದೊಯ್ದ ಘಟನೆ ಚೀನಾದಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಮಗು ತನ್ನಷ್ಟಕ್ಕೆ ಆಟವಾಡುತ್ತಿತ್ತು. ಈ ವೇಳೆ ಹಿಂದಿನಿಂದ ಬಂದ ಕೋತಿ ಮಗುವಿನ ತಲೆಗೆ ಒಂದೇಟು ಹೊಡೆದು ದರ ದರನೇ ಮಗುವನ್ನು ಎಳೆದೊಯ್ಯುತ್ತಿದೆ. ಈ ವೇಳೆ ಮಗು ಜೋರಾಗಿ ಕೂಗಿದ್ದು, ಮಗುವಿನ ಬೊಬ್ಬೆ ಕೇಳಿ ಯಾರೋ ಓಡಿ ಬಂದು ಮಗುವಿನ ರಕ್ಷಣೆ ಮಾಡಿದ್ದಾರೆ. ಈ ವೇಳೆ ಕೋತಿ ಆತನ ಮುಖಕ್ಕೂ ಪರಚಿದೆ ಎಂದು ತಿಳಿದು ಬಂದಿದೆ. ಈಗ ಕೋತಿಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.