ಇಸ್ರೇಲ್ ಪ್ರಧಾನಿ ಹತ್ಯೆ ಪ್ರಯತ್ನಕ್ಕೆ ಪ್ರತೀಕಾರಕ್ಕೆ ತಯಾರಿ, ಅಮೆರಿಕಾ ಕೊಟ್ಟ ಸಲಹೆ ಏನು?

ಹಮಾಸ್ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರಕ್ಕೆ ಹಮಾಸ್ ಮಾತ್ರವಲ್ಲ ಹಿಜ್ಬೊಲ್ಲಾ ಸೇರಿದಂತೆ ಕೆಲ ಉಗ್ರ ಸಂಘಟನೆಗಳು ಭಾರಿ ಕಸರತ್ತು ನಡೆಸುತ್ತಿದೆ. ಈ ಪೈಕಿ ಹಿಬ್ಜೊಲ್ಲ ನಡೆಸಿದ ಪ್ರಯತ್ನ ವಿಫಲಗೊಂಡಿದೆ. ಆದರೆ ಈ ದಾಳಿಗೆ ಪ್ರತೀಕಾರವಾಗಿದೆ. ತಿರುಗೇಟು ನೀಡಲು ಸಜ್ಜಾಗಿರುವ ಇಸ್ರೇಲ್‌ಗೆ ಅಮೆರಿಕ ನೀಡಿದ ಸಲಹೆ ಏನು?

First Published Oct 21, 2024, 2:34 PM IST | Last Updated Oct 21, 2024, 2:37 PM IST

ಇಸ್ರೇಲ್ ಹೋರಾಟ ತೀವ್ರಗೊಳ್ಳುತ್ತಿದೆ. ಟಾರ್ಗೆಟ್ ಲಿಸ್ಟ್‌ನಲ್ಲಿದ್ದ ಒಬ್ಬೊಬ್ಬೊರನ್ನೇ ಹುಡುಕಿ ಹತ್ಯೆ ಮಾಡುತ್ತಿರುವ ಇಸ್ರೇಲ್ ಇದೀಗ ಹಮಾಸ್ ಮುಖ್ಯಸ್ಥ ಯಾಹ್ಯ ಸಿನ್ವರ್ ಕತೆ ಮುಗಿಸಿದೆ. ಆದರೆ ಇಸ್ರೇಲ್ ವಿರುದ್ದ ಎಗರಿಬಿದ್ದ ಹಿಜ್ಬೊಲ್ಲ ಉಗ್ರ ಪಡೆ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹತ್ಯೆಗೆ ಪ್ರಯತ್ನ ನಡೆಸಿದೆ. ಇದು ಇಸ್ರೇಲ್ ಆಕ್ರೋಶ ಹೆಚ್ಚಿಸಿದೆ. ಇದೀಗ ಪ್ರತೀಕಾರಕ್ಕೆ ಸಜ್ಜಾಗಿರುವ ಇಸ್ರೇಲ್‌ಗೆ ಅಮೆರಿಕ ಮಹತ್ವದ ಸಲಹೆ ನೀಡಿದೆ. ಈ ಸಲಹೆ ಬಳಿಕ ಇಸ್ರೇಲ್ ಮೌನವಾಯಿತಾ? ಅಷ್ಟಕ್ಕೂ ಅಮೆರಿಕ ನೀಡಿದ ಸಲಹೆ ಏನು?