Asianet Suvarna News Asianet Suvarna News

ವೇದಿಕೆಯಲ್ಲೇ ಬಿದ್ರು ಅಕ್ಷಯ್, 'ಗುಡ್‌ನ್ಯೂಸ್‌'ಗೆ ಸಿಕ್ತು ಬಿಟ್ಟಿ ಪ್ರಮೋಷನ್..!

ಸಿನಿಮಾ ಪ್ರಮೋಷನ್‌ಗಾಗಿ ನಟ, ನಟಿಯರು ಏನೇನು ಮಾಡುತ್ತಾರೆ..? ಎದ್ದರೂ, ಬಿದ್ದರೂ ಎಲ್ಲವೂ ಸುದ್ದಿಯೇ. ಹಿಂದಿ ಸಿನಿಮಾ ಗುಡ್‌ ನ್ಯೂಸ್‌ ಪ್ರಮೋಷನ್‌ಗಾಗಿ ನಟ ಅಕ್ಷಯ್ ಕುಮಾರ್ ವೇದಿಕೆಯಲ್ಲೇ ಬಿದ್ದು ಬಿಟ್ಟಿದ್ದಾರೆ.

ಬೆಂಗಳೂರು(ಡಿ.18): ಸಿನಿಮಾ ಪ್ರಮೋಷನ್‌ಗಾಗಿ ನಟ, ನಟಿಯರು ಏನೇನು ಮಾಡುತ್ತಾರೆ..? ಎದ್ದರೂ, ಬಿದ್ದರೂ ಎಲ್ಲವೂ ಸುದ್ದಿಯೇ. ಹಿಂದಿ ಸಿನಿಮಾ ಗುಡ್‌ ನ್ಯೂಸ್‌ ಪ್ರಮೋಷನ್‌ಗಾಗಿ ನಟ ಅಕ್ಷಯ್ ಕುಮಾರ್ ವೇದಿಕೆಯಲ್ಲೇ ಬಿದ್ದು ಬಿಟ್ಟಿದ್ದಾರೆ. ಫಿಲ್ಮ್‌ ಪ್ರಮೋಷನ್‌ಗಾಗಿ ನಟ ದಿಲ್‌ಜಿತ್‌ ಅವರು ಅಕ್ಷಯ್ ಕುಮಾರ್ ಅವರನ್ನು ವೇದಿಕೆಯಲ್ಲಿ ಎತ್ತಿಕೊಂಡಿದ್ದಾರೆ. ಆದರೆ ಅಕ್ಷಯ್ ಅವರ ಭಾರ ತಾಳಲಾರದೆ ವೇದಿಕೆಯಲ್ಲೇ ಬಿಟ್ಟು ಬಿಟ್ಟು ಬಿಟ್ಟಿದ್ದಾರೆ.

ಹೊಸವರ್ಷಕ್ಕೆ ಹೊಸ ಕಾನ್ಸೆಪ್ಟ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ

ಕೆಳಗೆ ಬಿದ್ದ ಅಕ್ಷಯ್ ಕುಮಾರ್ ಕೋಪ ಮಾಡಿಕೊಳ್ಳದೆ ನಗುತ್ತಲೇ ಎದ್ದಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಈ ವಿಡಿಯೋ ಮಾತ್ರ ಟಿಕ್‌ಟಾಕ್‌ನಲ್ಲಿ ಫುಲ್‌ ವೈರಲ್‌ ಆಯ್ತು. ಹಾಗೇ ಸಿನಿಮಾಗೆ ಕೂಡಾ ಒಳ್ಳೆಯ ಪ್ರಮೋಷನ್ ಸಿಕ್ಕಿದೆ.