Asianet Suvarna News Asianet Suvarna News

ಹೊಸವರ್ಷಕ್ಕೆ ಹೊಸ ಕಾನ್ಸೆಪ್ಟ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಿವಣ್ಣ

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಸದ್ಯ ಭಜರಂಗಿ 2 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಶಿವಣ್ಣ ಹೊಸವರ್ಷಕ್ಕೆ ಡೀಫರೆಂಟ್‌ ಕಾನ್ಸೆಪ್ಟ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ವರ್ಷ ಮೂರು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಶಿವಣ್ಣ ಅವರ ಹೊಸ ವರ್ಷದ ಹೊಸ ಸಿನಿಮಾ ಫೈನಲ್ ಆಗಿದೆ.

First Published Dec 18, 2019, 2:41 PM IST | Last Updated Dec 18, 2019, 2:41 PM IST

ಬೆಂಗಳೂರು(ಡಿ.18): ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಸದ್ಯ ಭಜರಂಗಿ 2 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಶಿವಣ್ಣ ಹೊಸವರ್ಷಕ್ಕೆ ಡೀಫರೆಂಟ್‌ ಕಾನ್ಸೆಪ್ಟ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ವರ್ಷ ಮೂರು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಶಿವಣ್ಣ ಅವರ ಹೊಸ ವರ್ಷದ ಹೊಸ ಸಿನಿಮಾ ಫೈನಲ್ ಆಗಿದೆ. ಶಿವರಾಜ್‌ ಕುಮಾರ್‌ ಕಾಲಿವುಡ್‌ ಫೇಮಸ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಅಭಿನಯಿಸುತ್ತಿದ್ದಾರೆ.

'ಕಾಳಿದಾಸ ಕನ್ನಡ ಮೇಷ್ಟ್ರಿ'ಗೆ ವಿದೇಶದಿಂದಲೂ ಬಂತು ಆಹ್ವಾನ!

ಹೊಸ ಸಿನಿಮಾದ ಹೆಸರು ಆರ್‌ಡಿ ಎಕ್ರ್ಸ್. ಆರ್‌ಡಿ ಎಕ್ರ್ಸ್ ಟೈಟಲ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಶಿವರಾಜ್‌ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವಾಸಂ ನಿರ್ಮಾಣ ಮಾಡಿದ ಸತ್ಯಜ್ಯೋತಿ ಮೂವಿಸ್‌ನವರು ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಈ ಚಿತ್ರವನ್ನು ಕಾಲಿವುಡ್ ಡೈರೆಕ್ಟರ್‌ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಇದೆ. ಆದರೆ ಯಾರು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಆರ್‌ಡಿ ಎಕ್ರ್ಸ್ ಎಂಬ ಹಸೆರು ಬಾಂಬ್‌ಗೆ ಬಳಸಲಾಗುತ್ತದೆ. ಹಾಗಾಗಿ ಇದು ಭಯೋತ್ಪಾದನೆ ಕುರಿತ ಸಿನಿಮಾ ಎನ್ನಲಾಗುತ್ತಿದೆ.

ಸೆನ್ಸಾರ್ ಪರೀಕ್ಷೆ ಪಾಸ್ ಆದ ಶ್ರೀಮನ್ನಾರಾಯಣ!

Video Top Stories