Asianet Suvarna News Asianet Suvarna News

ಹಾಸನದಲ್ಲಿ ಕೊರೋನಾಗೆ 30 ಬಲಿ: ಆಕ್ಸಿಜನ್, ವೆಂಟಿಲೇಟರ್‌ ಇಲ್ಲ: ರೇವಣ್ಣ ಆರೋಪ!

ಹಾಸನದಲ್ಲಿ ಕೊರೋನಾಗೆ 30 ಮಂದಿ ಬಲಿಯಾಗಿದ್ದಾರೆ. ಈ ಜಿಲ್ಲೆಗೆ ಇನ್ನೂ ವೆಂಟಿಲೇಟರ್‌ಗಳು ಪೂರೈಕೆಯಾಗದಿರುವುದೇ ಈ ಪ್ರಾಣಹಾನಿಗೆ ಕಾರಣವಾಗಿದೆ. ಅಲ್ಲದೇ ಇಲ್ಲಿ ಆಕ್ಸಿಜನ್ ಕೂಡಾ ಪೂರೈಕೆಯಾಗುತ್ತಿಲ್ಲ ಎಂದು ಶಾಸಕ ಎಚ್‌. ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಾಸನ(ಮೇ.17): ಹಾಸನದಲ್ಲಿ ಕೊರೋನಾಗೆ 30 ಮಂದಿ ಬಲಿಯಾಗಿದ್ದಾರೆ. ಈ ಜಿಲ್ಲೆಗೆ ಇನ್ನೂ ವೆಂಟಿಲೇಟರ್‌ಗಳು ಪೂರೈಕೆಯಾಗದಿರುವುದೇ ಈ ಪ್ರಾಣಹಾನಿಗೆ ಕಾರಣವಾಗಿದೆ. ಅಲ್ಲದೇ ಇಲ್ಲಿ ಆಕ್ಸಿಜನ್ ಕೂಡಾ ಪೂರೈಕೆಯಾಗುತ್ತಿಲ್ಲ ಎಂದು ಶಾಸಕ ಎಚ್‌. ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕುಲಕರ್ಣಿ ಬಂಧನ ದ್ವೇಷದ ರಾಜಕಾರಣ, ಮುಂದೊಂದು ದಿನ ತಿರುಗುಬಾಣವಾಗಲಿದೆ: ರೇವಣ್ಣ

ಹಾಸನದಲ್ಲಿ ಶೇ. 50 ಮಂದಿ ಆಕ್ಸಿಜನ್ ಸಿಗದೇ ಕೊನೆಯುಸಿರೆಳೆದಿದ್ದಾರೆ ಎಂದೂ ಆರೋಪಿಸಿರುವ  ರೇವಣ್ಣ ಇಂದು 29 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದಿದ್ದಾರೆ.

ಶಾಸಕರ ಈ ಆರೋಪದ ಮಧ್ಯೆ ರಾಜ್ಯ ಸರ್ಕಾರ ಅತ್ತ ಪಿಎಂ ಕೇರ್ಸ್‌ ನಿಧಿಯಡಿಯಲ್ಲಿ ಕಳುಹಿಸಿಕೊಟ್ಟಿರುವ ವೆಂಟಿಲೇಟರ್‌ಗಳನ್ನು ಬಳಸದೇ ಧೂಳು ಹಿಡಿಯಲು ಬಿಟ್ಟಿದೆ ಎಂಬುವುದು ಉಲ್ಲೇಖನೀಯ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories