ಕೊರೋನಾ ಗೆದ್ದ ದತ್ತು ಕೇಂದ್ರದ 14 ಮಕ್ಕಳು; ಮೂರನೇ ಅಲೆ ಎದುರಿಸಲು ಭರವಸೆಯ ಬೆಳಕು
ಉಡುಪಿಯ ಮಮತೆಯ ತೊಟ್ಟಿಲು' ಎನ್ನುವ ದತ್ತು ಕೇಂದ್ರದಲ್ಲಿ 14 ಮಕ್ಕಳು ಸೇರಿ 21 ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಇದೀಗ ಅಲ್ಲಿನ ಮಕ್ಕಳು ಗುಣಮುಖರಾಗಿದ್ದಾರೆ.
ಉಡುಪಿ (ಜೂ. 16): ಕೋರೋನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚಾಗಿ ಬಾಧಿಸಬಹುದು ಅಂತಾರೆ ತಜ್ಞರು, ಬಾಧಿತ ಮಕ್ಕಳ ನಿರ್ವಹಣೆ ಮುಂದಿನ ದಿನಗಳಲ್ಲಿ ಒಂದು ಸವಾಲಾದರೂ ಆಶ್ಚರ್ಯವಿಲ್ಲ. ಆದ್ರೆ ಗಾಬರಿ ಬೇಡ, ಉಡುಪಿಯ ದತ್ತು ಸ್ವೀಕಾರ ಕೇಂದ್ರದ ಮಾಡೆಲ್ ಮುಂದಿನ ದಿನಗಳಲ್ಲಿ ನಮಗೆ ಭರವಸೆ ತುಂಬಬಹುದು.
2 ತಿಂಗಳಲ್ಲಿ ಬೆಂಗಳೂರಿನಲ್ಲಿ ಏಳೂವರೆ ಲಕ್ಷ ಕೋವಿಡ್ ಕೇಸ್ ದಾಖಲು
ಯಾಕಂದ್ರೆ ಈ ಕೇಂದ್ರದ 14 ಮಕ್ಕಳು ಸೇರಿದಂತೆ 21 ಮಂದಿಗೆ ಒಂದೇ ಕಾಲದಲ್ಲಿ ಕೊರೋನಾ ಬಂದು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಕೊರೋನಾ ಗೆದ್ದ ಮಕ್ಕಳ ಬಗ್ಗೆ ತಜ್ಞರು ಏನಂತಾರೆ? ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ..