Asianet Suvarna News Asianet Suvarna News

ಒಂದಾದ ಡಿ.ಕೆ. ಸುರೇಶ್-ತೇಜಸ್ವಿ ಮಾದರಿ ಕಾರ್ಯ, ಆಸ್ಪತ್ರೆ ಪುನಾರಂಭ

* ರಾಜಕಾರಣವೇ ಬೇರೆ, ಜನರ ಒಳಿತಿಗೆ ಕೆಲಸ ಮಾಡುವುದೇ ಬೇರೆ
* ಯುವ ಸಂಸದರಿಂದ ಬೆಂಗಳೂರಿನಲ್ಲೊಂದು ಮಾದರಿ ಕಾರ್ಯ
* ಒಂದಾದ ಬಿಜೆಪಿ ಎಂಪಿ ತೇಜಸ್ವಿ ಸೂರ್ಯ ಮತ್ತು ಕೈ ಸಂಸದ ಡಿಕೆ ಸುರೇಶ್ 
* ವಿಲ್ಸನ್ ಗಾರ್ಡನ್ ನ ಮಹಾಬೋಧಿ ಆಸ್ಪತ್ರೆಗೆ ಪುನಶ್ಚೇತನ

ಬೆಂಗಳೂರು ( ಮೇ  10) ಕೊರೋನಾ ಸಂಕಷ್ಟದ ಕಾಲದಲ್ಲಿ ನಡೆಯುವ ಇಂಥ ಮಾದರಿ ಪ್ರಯತ್ನಗಳನ್ನು ನಿಜವಾಗಿಯೂ ಸ್ವಾಗತಿಸಬೇಕು. ರಾಜಕಾರಣದ ಸಿದ್ಧಾಂತಗಳು ಬೇರೆ.. ಜನರ ಒಳಿತಿಗೆ ದುಡಿಯುವುದೇ ಬೇರೆ. ಸಂಸದರು ಅಂಥದ್ದೊಂದು ಕೆಲಸ ಮಾಡಿದ್ದಾರೆ.

ಯಾರಿಗೆ ಆಕ್ಸಿಜನ್ ಬೆಡ್ ಬೇಕಾಗುತ್ತದೆ?  ಧೈರ್ಯ ಕಳೆದುಕೊಳ್ಳದಿರಿ

ಸಂಸದ ತೇಜಸ್ವಿ ಸೂರ್ಯ ಹಾಗೂ ಕಾಂಗ್ರೆಸ್ ಪಕ್ಷದ ಸಂಸದ ಡಿ.ಕೆ.ಸುರೇಶ್ ತಮ್ಮ ರಾಜಕೀಯ ಭಿನ್ನಾಭಿಪ್ರಾಯ ಮರೆತು ಒಂದಾಗಿ ಬೆಂಗಳೂರಿನಲ್ಲಿ ಮುಚ್ಚಿದ್ದ ಆಸ್ಪತ್ರೆಯೊಂದನ್ನು ಪುನಾರಂಭ ಮಾಡಿದ್ದಾರೆ. ಕಳೆದ 7 ವರ್ಷಗಳಿಂದ ಮುಚ್ಚಲಾಗಿದ್ದ ವಿಲ್ಸನ್ ಗಾರ್ಡನ್‌ನ ಮಹಾಬೋಧಿ ಆಸ್ಪತ್ರೆಗೆ ಪುನಶ್ಚೇತನ ನೀಡಿದ್ದು ವಿವರಗಳನ್ನು ಅವರೇ ನೀಡಿದ್ದಾರೆ. 

 

Video Top Stories