BIG 3: ಸೆಲ್ಫಿ ಕ್ರೇಜ್‌ಗೆ ಹಲವಾರು ಬಲಿ, ಮಲ್ಪೆಯ ಸೈಂಟ್ ಮೇರಿಸ್‌ನಲ್ಲಿ ಜೀವಗಳಿಗಿಲ್ವಾ ಬೆಲೆ?
ಸೆಲ್ಫಿ ತೆಗೆಯುವ ಹುಚ್ಚು ಉಡುಪಿ ಸಮೀಪದ ಸೈಂಟ್ ಮೇರಿಸ್ ದ್ವೀಪದಲ್ಲಿ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿದೆ. ಆದರೆ ಇಷ್ಟೆಲ್ಲಾ ದುರಂತ ನೆಡದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ
ಉಡುಪಿ (ಜೂ. 13): ಮಲ್ಪೆಯ ಸೈಂಟ್ ಮೇರಿಸ್ ದ್ವೀಪವನ್ನು ( St Mary's Island) ಭೂಲೋಕದ ಸ್ವರ್ಗ ಅಂತಾನೆ ಕರೀತಾರೆ. ಶಿಲ್ಪಿಯ ಅಪೂರ್ವ ಕೆತ್ತನೆಯಂತೆ ಕಾಣುವ ಇಲ್ಲಿನ ಕಲ್ಲು ಗೋಪುರಗಳು, ತೀರದ ಉದ್ದಕ್ಕೂ ಹರಡಿರುವ ಚಿಪ್ಪು ರಾಶಿ, ಮಂದವಾದ ಅಲೆಗಳ ಭೂಸ್ಪರ್ಶ, ಇವೆಲ್ಲವನ್ನೂ ಕಾಣುವುದು ಒಂದು ಅಪೂರ್ವ ಅನುಭವ. ಒಮ್ಮೆ ದ್ವೀಪದೊಳಗೆ ಕಾಲಿಟ್ಟರೆ ಸಾಕು ಪ್ರವಾಸಿಗರು ರೋಮಾಂಚನಗೊಳ್ಳುತ್ತಾರೆ. ಅದರಲ್ಲೂ ಸಮುದ್ರವನ್ನು ಮೊದಲಬಾರಿ ಕಾಣುವ ಜನರಂತೂ ಅಪಾಯದ ಅರಿವಿಲ್ಲದೆ ನೀರಿಗೆ ಇಳಿದು ಬಿಡುತ್ತಾರೆ.
ದ್ವೀಪದಲ್ಲಿ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಅನ್ನೋದು ಬಹುತೇಕರ ಆಸೆಯಾಗಿರುತ್ತದೆ. ಆದರೆ ಇತ್ತೀಚೆಗೆ ಸೆಲ್ಫಿ ಹುಚ್ಚಿಗೆ ನೀರಿಗಿಳಿದ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಆತಂಕಕಾರಿಯಾಗಿವೆ. ಸೆಲ್ಫಿ ತೆಗೆಯುವ ಹುಚ್ಚು ಉಡುಪಿ ಸಮೀಪದ ಸೈಂಟ್ ಮೇರಿಸ್ ದ್ವೀಪದಲ್ಲಿ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿದೆ. ಆದರೆ ಇಷ್ಟೆಲ್ಲಾ ದುರಂತ ನೆಡದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ
ಇದನ್ನೂ ನೋಡಿ: ಬಾಗಲಕೋಟೆಯ ಬಾದಾಮಿಯಲ್ಲಿ ಕುರಿ-ಕೋಳಿ, ಜಾನುವಾರು ಸಾಕೋ ಶೆಡ್‌ನಲ್ಲಿ ಮಕ್ಕಳಿಗೆ ಶಿಕ್ಷಣ!