ಮಂಡ್ಯದಲ್ಲಿ ಬಲಿಗಾಗಿ ಕಾದು ನಿಂತ ವಿದ್ಯುತ್ ಕಂಬ: ಜನರ ಜೀವದ ಜೊತೆ ಸೆಸ್ಕಾಂ ಚೆಲ್ಲಾಟ

ಮಂಡ್ಯ ನಗರದ ಇಂದಿರಾ ಬಡಾವಣೆಯ 1ನೇ ಕ್ರಾಸ್‌ನಲ್ಲಿ ವಿದ್ಯುತ್ ಕಂಬ ಶಿಥಿಲವಾಗಿದ್ದು, ಜನರ ಜೀವದ ಜೊತೆ ಸೆಸ್ಕಾಂ ಚೆಲ್ಲಾಟ ಆಡುತ್ತಿದೆ.
 

First Published Nov 7, 2022, 3:17 PM IST | Last Updated Nov 7, 2022, 3:17 PM IST

ಇಂದಿರಾ ಬಡಾವಣೆಯ ವಿದ್ಯುತ್ ಕಂಬದ ಕಾಂಕ್ರೀಟ್ ಸವೆದು ಕಬ್ಬಿಣ ಕಾಣುವ ಮಟ್ಟಿಗೆ ಶಿಥಿಲವಾಗಿದೆ. ಹೈ ವೊಲ್ಟೇಜ್ ವಿದ್ಯುತ್ ಸರಬರಾಜು ಮಾಡುವ ತಂತಿಗಳನ್ನು ಈ ಕಂಬಕ್ಕೆ ಅಳವಡಿಸಲಾಗಿದ್ದು, ಒಂದು ವೇಳೆ ಈ ಕಂಬ ಉರುಳಿದ್ರೆ ದೊಡ್ಡ ಅವಘಡವೇ ನಡೆದು ಹೋಗುತ್ತೆ. ಕಂಬದ ಕೆಳಗೆ ಹಲವು ಮನೆಗಳಿದ್ದು, ಮಕ್ಕಳು, ಹಿರಿಯರು ಸೇರಿದಂತೆ ನೂರಾರು ಜನರು ವಾಸವಿದ್ದಾರೆ. ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಈ ವಿದ್ಯುತ್ ಕಂಬ ವಾಲಿದೆ. ಇಲ್ಲಿನ ನಿವಾಸಿಗಳು ಕಂಬ ಬೀಳದ ಹಾಗೇ ಮರದ ದಿನ್ನೆಯನ್ನು ವಿದ್ಯುತ್ ಕಂಬಕ್ಕೆ ಆಸರೆಯಾಗಿ ನಿಲ್ಲಿಸಿದ್ದಾರೆ. ಸೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ರೆ ತುಂಡಾಗಿ ಬಿದ್ದಿದ್ದ ತಂತಿಗೆ ಕಾಟಚಾರಕ್ಕೆ ತ್ಯಾಪೆ ಹಾಕುವ ಕೆಲಸ ಮಾಡಿ ಕೈ ತೊಳೆದುಕೊಂಡಿದ್ದಾರೆ. ಆದರೆ ತಾತ್ಕಾಲಿಕ ವ್ಯವಸ್ಥೆ ಬದಲು ಶಾಶ್ವತ ಪರಿಹಾರ ನೀಡಿ, ನಮಗೆ ನೆಮ್ಮದಿ ಬದುಕು ನೀಡಿ ಎಂದು ನಿವಾಸಿಗಳೆಲ್ಲ ಅಧಿಕಾರಿ, ಜನಪ್ರತಿನಿಧಿಗಳಿಗೆ ಶಾಪ ಹಾಕ್ತಿದ್ದಾರೆ.

BBK Electronics: ಚೀನೀ ಮೋಸ, ಐದು ಮೊಬೈಲ್ ಬ್ರಾಂಡ್​ಗಳಿಗೆ ಒಂದೇ ಕಂಪನಿ!

Video Top Stories