ಹಾಳು ಕೊಂಪೆಯಾದ ಡಾ.ರಾಜ್‌ಕುಮಾರ್ ಹೆಸರಿನ ಪಾರ್ಕ್: ಮರು ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹ

ಬೆಂಗಳೂರು ಅಂದ್ರೇ ಗಾರ್ಡನ್ ಸಿಟಿ, ಉದ್ಯಾನ ನಗರಿ ಅಂತಾನೆ ಕರೀತಾರೆ. ಇದರ ಜೊತೆಗೆ ರಾಜಧಾನಿಯ ಅಂದ ಹೆಚ್ಚಿಸಲು ಪಾಲಿಕೆ ಪ್ರತಿ ವಾರ್ಡ್ನಲ್ಲೂ ಒಂದೊಂದು ಪಾರ್ಕ್ ನಿರ್ಮಾಣ ಮಾಡಿದೆ. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪಾರ್ಕ್ ಹಳ್ಳ ಹಿಡಿಯುತ್ತಿವೆ. ಅದರಲ್ಲೂ ಕನ್ನಡದ ಮೇರು ನಟನ ಹೆರಿನಲ್ಲಿನ ಪಾರ್ಕ್ ಅವ್ಯವಸ್ಥೆ ಕಂಡು ಈಗ ಕನ್ನಡ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ.
 

First Published Nov 3, 2023, 11:27 AM IST | Last Updated Nov 3, 2023, 11:27 AM IST

ಇದು ಬೆಂಗಳೂರಿನ ಹೃದಯ ಭಾಗ ಗಾಂಧಿನಗರದಲ್ಲಿರೋ ಪಾರ್ಕ್. ಮೇರು ನಟ ಡಾ ರಾಜ್ಕುಮಾರ್ (Dr Rajkumar) ಹೆಸರಲ್ಲಿ ನಿರ್ಮಾಣವಾಗಿರೋ ಈ ಪಾರ್ಕ್ ಈಗ ಇದೇನು ಪಾರ್ಕೋ. ಇಲ್ಲಾ ಡಂಪಿಂಗ್ಯಾರ್ಡೋ ಅನ್ನೋ ಅನುಮಾನ ಹುಟ್ಟಿಸುತ್ತಿದೆ. ಕಣ್ಣು ಹಾಯಿಸಿದಲ್ಲೆಲ್ಲ ಕಬ್ಬಿಣದ ರಾಡ್, ಪೈಪ್ , ಬ್ಯಾರಲ್ಗಳು ಕಾಣೀಸುತ್ತವೆ. ಪಾರ್ಕ್ಲ್ಲಿರೋ ಆಟಿಕೆ, ವ್ಯಾಯಮದ ವಸ್ತುಗಳನ್ನೆಲ್ಲಾ ಮೂಲೆಗೆಸೆದು.. ಪಾರ್ಕ್ ತುಂಬಾ ರಸ್ತೆ, ಬ್ರಿಡ್ಜ್, ಕಟ್ಟಡ ನಿರ್ಮಾಣಕ್ಕೆ ಬಳಸೋ ವಸ್ತುಗಳೇ ಕಾಣಿಸುತ್ತವೆ. ಇನ್ನು ಸಂಜೆಯಾದ್ರೆ ಸಾಕು ಕಾಂಟ್ರಾಕ್ಟರ್ಗಳಿಗೆ ಸೇರಿದ ವಾಹನಗಳನ್ನೂ ಇಲ್ಲೇ ಪಾರ್ಕ್ ಮಾಡ್ತಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಜನೋಪಯೋಗಿ ಪಾರ್ಕ್ (Park)ಹಾಳು ಕೊಂಪೆಯಾಗಿದೆ. ನಾಗರಿಕರಿಗೆ ಉಪಯೋಗವಾಗಬೇಕಿದ್ದ ಉದ್ಯಾನವನನ ಇನ್ಯಾರದ್ದೋ ಖಾಸಗಿ ಸ್ವತ್ತಿನಂತೆ ಬಳಕೆಯಾಗ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಪಾರ್ಕ್ ಮರು ನಿರ್ಮಾಣ ಮಾಡುವಂತೆ  ಸ್ಥಳೀಯರು, ಕನ್ನಡ ಸಂಘಟನೆಗಳು ಆಗ್ರಹಿಸುತ್ತಿವೆ. ಬೆಂಗಳೂರಿನ(Bengaluru) ಕೆಲ ಶಾಸಕರು, ಬಿಬಿಎಂಪಿ ಗೆ ಸಂಬಂಧ ಪಟ್ಟ ಅಧಿಕಾರಿಗಳು ಸರ್ಕಾರದ ಆಸ್ತಿಯನ್ನ ಖಾಸಗಿ ಕಾಂಟ್ರಾಕ್ಟರ್ ಗಳಿಗೆ ಬಾಡಿಗೆ ನೀಡಿ ಹಣ ಪೀಕುತ್ತಿದ್ದಾರೆ ಅನ್ನೋ ಆರೋಪವೂ ಇದೆ. ಇನ್ನೂ ಪಾರ್ಕ್ನ ಮೂಲೆ ಮೂಲೆಗಳಲ್ಲೂ ಮದ್ಯದ ಬಾಟಲಿಗಳು ಕಾಣಿಸುತ್ತಿವೆ. ಸಂಜೆಯಾಗುತ್ತಲೆ ಈ ಪಾರ್ಕ್ ಕುಡುಕರು, ಪುಂಡ ಪೋಕರಿಗಳ ಅಡ್ಡೆಯಾಗುತ್ತಿದೆ. ಕೂಡಲೇ ಪಾರ್ಕ್ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಡಾ. ರಾಜ್‌ಕುಮಾರ್ ಕನ್ನಡದ ಮೇರು ನಟ. ಅವರ ಹೆಸರಲ್ಲಿರೋ ಈ ಪಾರ್ಕ್ ಈ ರೀತಿ ಅವಯವಸ್ಥೆ ಆಗರವಾಗಿದ್ದು ಸಹಜವಾಗೇ ಕನ್ನಡಾಭಿಮಾನಿಗಳನ್ನ ಕೆರಳಿಸಿದೆ. ಒಂದು ತಿಂಗಳಲ್ಲಿ ಡಾ.ರಾಜ್ ಪಾರ್ಕ್ ಮರು ನಿರ್ಮಾಣ ಆಗದಿದ್ದರೆ ಹೋರಾಟದ ಹಾದಿ ಹಿಡಿಯ ಬೇಕಾಗುತ್ತೆ ಎಂದು ಕನ್ನಡ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇದನ್ನೂ ವೀಕ್ಷಿಸಿ:  ಭದ್ರಾ ಉಪಕಾಲುವೆಗಾಗಿ 20 ಎಕರೆ ಜಮೀನು ಖರೀದಿ: ದಶಕಗಳೇ ಕಳೆದ್ರೂ ಸ್ವಾಧೀನಕ್ಕೆ ಪಡೆಯದ ತಾಲೂಕು ಆಡಳಿತ

Video Top Stories