Asianet Suvarna News Asianet Suvarna News

ಕೃಷ್ಣಾನಗರಿ ಉಡುಪಿಯಲ್ಲಿ ಭಾರೀ ಮಳೆ; ಪ್ರವಾಹ ಭೀತಿ

ಕರಾವಳಿ ಭಾಗದಲ್ಲಿ ವರುಣರಾಯನ ಅಬ್ಬರ ಜೋರಾಗಿದೆ. ಸ್ವಲ್ಪ ಸಮಯ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಕೃಷ್ಣಾ ನಗರಿ ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಭೀತಿಯೂ ಉಂಟಾಗಿದೆ. 

ಬೆಂಗಳೂರು (ಸೆ. 20): ಕರಾವಳಿ ಭಾಗದಲ್ಲಿ ವರುಣರಾಯನ ಅಬ್ಬರ ಜೋರಾಗಿದೆ. ಸ್ವಲ್ಪ ಸಮಯ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಕೃಷ್ಣಾ ನಗರಿ ಉಡುಪಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಭೀತಿಯೂ ಉಂಟಾಗಿದೆ. 

ಕಳ್ಳತನ ಮಾಡಿದ ಮಾಂಗಲ್ಯ ಸರ ವಾಪಸ್; ಬೈಕ್ ಮೇಲೆ ಹಸು ಕೂರಿಸಿಕೊಂಡು ಹೋದ ಭೂಪ!

ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣರಾಯನ ಅಬ್ಬರಕ್ಕೆ ಜನ ಸಾಕಪ್ಪಾ ಸಾಕು ಅಂತಿದ್ದಾರೆ. ಕಳೆದ 20 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದ್ದು ಕಲ್ಸಂಕ, ಬೈಲಕೆರೆ, ಕೃಷ್ಣಮಠದ ಪರಿಸರ ಮುಳುಗಡೆಯಾಗಿದೆ. 2 ದಿನಗಳ ಕಾಲ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಸ್ತೆಗಳು ಕೆರೆಯಂತಾಗಿದೆ. ಯಾರೂ ಮನೆಯಿಂದ ಆಚೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. 

Video Top Stories