Asianet Suvarna News Asianet Suvarna News

ಲಂಚಕ್ಕಾಗಿ ಕಿರುಕುಳ ನೀಡಿದ್ದ ಇಓ ಭೈರಪ್ಪ ಅಮಾನತು: ಕೈದಿಗಳಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಎಫ್‌ಡಿಎ ಸಸ್ಪೆಂಡ್!

*ಲಂಚಕ್ಕಾಗಿ ಪಿಡಿಒಗಳಿಗೆ ಇಓ ಭೈರಪ್ಪ ಕಿರುಕುಳ
*ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರ್ಮಕಾಂಡ 
*ಏಷ್ಯಾನೆಟ್ ಸುವರ್ಣನ್ಯೂಸ್ ನಿರಂತರ ವರದಿ
*ಇಓ ಭೈರಪ್ಪ ಅಮಾನತು: ಎಫ್‌ಡಿಎ  ಸಸ್ಪೆಂಡ್

ಬೆಂಗಳೂರು (ಫೆ.04): ಜನಸೇವೆ ಮಾಡಿ ಅಂದ್ರೆ ಸಿಕ್ಕಷ್ಟು ಬಾಚಿಕೊಳ್ಳೋದೆ ಈತನ ಕೆಲಸ. ಹೌದು! ಪ್ರತಿ ಕೆಲಸಗಳಿಗೂ ಪಿಡಿಒಗಳಿಂದ ಪರ್ಸಂಟೇಜ್ ಲೆಕ್ಕದಲ್ಲಿ ವಸೂಲಿ ಮಾಡುತ್ತಿದ್ದ ಶ್ರೀರಂಗಪಟ್ಟಣ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಇಓ ಭೈರಪ್ಪ ಕರ್ಮಕಾಂಡ ಬಯಲಾಗಿದೆ. ಪಿಡಿಒ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಭೈರಪ್ಪ ತಿಂಗಳಲ್ಲಿ ನಡೆಯುವ ವ್ಯವಹಾರಗಳ ಮೇಲೆ 3% ಕಮಿಷನ್ ಪಡೆಯುತ್ತಿದ್ದರು. ಆದರೆ ಲಂಚಬಾಕ ಇಓ ವಿರುದ್ದ ಕಳೆದ ಡಿಸೆಂಬರ್‌ನಲ್ಲಿ ಸಾಕ್ಷಿ ಸಮೇತ ದೂರು ನೀಡಿದರೂ ಮಂಡ್ಯ ಸಿಇಒ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಆದರೆ ಈಗ ಏಷ್ಯಾನೆಟ್ ಸುವರ್ಣ ನ್ಯೂಸ್‌ ವರದಿ ಬೆನಲ್ಲೇ ಭ್ರಷ್ಟ ಅಧಿಕಾರಿ ಅಮಾನತು ಮಾಡಲಾಗಿದೆ  

ಇದನ್ನೂ ಓದಿ: Bengaluru Parappana Agrahara ಜೈಲಲ್ಲಿ ಮತ್ತೊಂದು ಕರ್ಮಕಾಂಡ: ಸಿಬ್ಬಂದಿಯಿಂದಲೇ ಕೈದಿಗಳಿಗೆ ಡ್ರಗ್ಸ್‌!

ಇನ್ನು ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ಕುರಿತು ಸರಣಿ ವರದಿಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಬಿತ್ತರ ಮಾಡುತ್ತಿದೆ. ಜೈಲಿನಲ್ಲಿ ಶಂಕಿತ ಉಗ್ರನಿಗೆ ಸಿಗುತ್ತಿರುವ ರಾಜಾತಿಥ್ಯ ಸೇರಿದಂತೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ವರದಿ ನೀಡಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ನ್ಯಾಯಮೂರ್ತಿ ದಿಢೀರ್ ಭೇಟಿ ನೀಡಿದ್ದರು. ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದ ರಾಜಾತಿಥ್ಯದ ಬಗ್ಗೆ ವಿಚಾರಣೆ ನಡೆದಿರುವಾಗಲೇ, ಕೈದಿಗಳಿಗೆ ಡ್ರಗ್ಸ್‌ ಪೂರೈಸಲು ಯತ್ನಿಸಿದ ಕೇಂದ್ರ ಕಾರಾಗೃಹ ಆಡಳಿತ ವಿಭಾಗದ ಪ್ರಥಮ ದರ್ಜೆ ಸಹಾಯಕನೊಬ್ಬ (ಎಫ್‌ಡಿಎ) ಸಿಕ್ಕಿಬಿದ್ದಿದ್ದಾನೆ.ಇದರ ಬೆನ್ನಲ್ಲೇ ಈಗ ಆತನನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶಿಸಲಾಗಿದೆ.

Video Top Stories