ಬೆಂಗ್ಳೂರು ಬಳಿಕ ಚಿತ್ರದುರ್ಗದಲ್ಲೂ ಬೆಡ್ ಖಾಲಿ: ಆಸ್ಪತ್ರೆ ಆವರಣದಲ್ಲೇ ಕುಳಿತ ಸೋಂಕಿತರು
ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್‌ಗಳು ಭರ್ತಿ| ಬೆಡ್ ಸಿಗದಿದ್ದರಿಂದ ಆಂಬುಲೆನ್ಸ್‌ನಲ್ಲೇ ಜೀವ ಬಿಗಿ ಹಿಡಿದು ಕುಳಿತ ಸೋಂಕಿತ ಮಹಿಳೆ| ಆಸ್ಪತ್ರೆ ಮುಂದೆ ಬೆಡ್ ಇಲ್ಲ ಅಂತ ಬೋರ್ಡ್ ಹಾಕಿದ ಅಧಿಕಾರಿಗಳು| ಬೆಡ್‌ಗಾಗಿ ಸೋಂಕಿತರ ಪರದಾಟ|
ಚಿತ್ರದುರ್ಗ(ಮೇ.01): ಬೆಂಗಳೂರು ಅಷ್ಟೇ ಅಲ್ಲ ಚಿತ್ರದುರ್ಗದಲ್ಲೂ ಕೂಡ ಬೆಡ್‌ಗಳು ಫುಲ್ ಆಗಿವೆ. ಹೌದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ಬೆಡ್‌ಗಳು ಭರ್ತಿಯಾದ ಪರಿಣಾಮ ಕೊರೋನಾ ಸೊಂಕಿತರು ಆಸ್ಪತ್ರೆಯ ಆವರಣದಲ್ಲೇ ಕುಳಿತಿದ್ದಾರೆ. ಸೋಂಕಿತ ಮಹಿಳೆಯೊಬ್ಬಳು ಬೆಡ್ ಸಿಗದಿದ್ದರಿಂದ ಆಂಬುಲೆನ್ಸ್‌ನಲ್ಲೇ ಜೀವ ಬಿಗಿ ಹಿಡಿದು ಕುಳಿತಿದ್ದಾಳೆ. ಆಸ್ಪತ್ರೆ ಮುಂದೆ ಬೆಡ್ ಇಲ್ಲ ಅಂತ ಅಧಿಕಾರಿಗಳು ಬೋರ್ಡ್ ಹಾಕಿದ್ದಾರೆ. ಇದರಿಂದ ಸೋಂಕಿತರು ಹಾಗೂ ಅವರ ಕುಟುಂಬಸ್ಥರು ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ.
ಮುಂದಿನ ತಿಂಗಳು ಹಸೆಮಣೆ ಏರಬೇಕಿದ್ದ ವರ ಕೋವಿಡ್‌ನಿಂದ ಸಾವು
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona