Asianet Suvarna News Asianet Suvarna News

ಕೋವಿಡ್‌ನಿಂದ ಗುಣಮುಖರಾದವರಿಗೆ ಬ್ಲಾಕ್‌ ಫಂಗಸ್ ಅಟ್ಯಾಕ್ ಸಾಧ್ಯತೆ, ಗಾಬರಿ ಬೇಡ.!

- ಕೋವಿಡ್‌ನಿಂದ ರೋಗನಿರೋಧಕ ಶಕ್ತಿ ಕುಂದಿದವರಿಗೆ  ಬ್ಲಾಕ್‌ ಫಂಗಸ್‌ ಅಟ್ಯಾಕ್ 

- ಕಣ್ಣಿನಲ್ಲಿ ನೋವು, ಒಂದು ಕಡೆ ಮುಖ ಊದಿಕೊಳ್ಳುವಿಕೆ, ತಲೆ ನೋವು, ಜ್ವರ, ಮೂಗು ಕಟ್ಟುವಿಕೆ ಇವು ಸೋಂಕಿನ ಲಕ್ಷಣ

-  ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ಬ್ಲಾಕ್‌ ಫಂಗಸ್‌ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. 

ಬೆಂಗಳೂರು (ಮೇ. 10): ಕೊರೊನಾ ಸೋಂಕಿನಿಂದ ಗುಣಮುಖರಾದೆವು, ಕೊರೊನಾ ಗೆದ್ದೆವು ಎಂದು ನಿರಾಳವಾಗುವಂತಿಲ್ಲ. ಇದು ಇಷ್ಟಕ್ಕೆ ಮುಗಿಯುವಂತಿಲ್ಲ. ಕೋವಿಡ್‌ನಿಂದ ರೋಗನಿರೋಧಕ ಶಕ್ತಿ ಕುಂದಿದವರಿಗೆ  ಬ್ಲಾಕ್‌ ಫಂಗಸ್‌ ಎಂದು ಕರೆಯಲ್ಪಡುವ ಶೀಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿದೆ.  ಈ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿಹೀನತೆಗೆ ಕಾರಣವಾಗಲಿದೆ. ಒಂದು ವೇಳೆ ಈ ಸೋಂಕು ಮೆದುಳಿಗೆ ವ್ಯಾಪಿಸಿದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಮನೆಯವರಿಗೆ ಕೊರೊನಾ ಬರುತ್ತದೆಂದು ಹೆದರಿ ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ

ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ಬ್ಲಾಕ್‌ ಫಂಗಸ್‌ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕಣ್ಣಿನಲ್ಲಿ ನೋವು, ಒಂದು ಕಡೆ ಮುಖ ಊದಿಕೊಳ್ಳುವಿಕೆ, ತಲೆ ನೋವು, ಜ್ವರ, ಮೂಗು ಕಟ್ಟುವಿಕೆ ಇವು ಸೋಂಕಿನ ಲಕ್ಷಣಗಳಾಗಿವೆ.