Asianet Suvarna News Asianet Suvarna News

ದಿಲ್ಲಿಯಲ್ಲಿ ಸೋಂಕಿನ ಪ್ರಮಾಣ ಶೇ.75ರಷ್ಟು ಇಳಿಕೆ: ಹೀಗಾಗಿದ್ದು ಹೇಗೆ? ಇಲ್ಲಿದೆ ವಿವರ

ಕೊರೋನಾ 2ನೇ ಅಲೆ ವೇಳೆ ಭಾರೀ ಹೊಡೆತ ತಿಂದಿದ್ದ ಮೆಟ್ರೋನಗರಿಗಳ ಪೈಕಿ ಒಂದಾದ ದೆಹಲಿಯಲ್ಲಿ ಕೊನೆಗೂ ಸೋಂಕು ನಿಯಂತ್ರಣಕ್ಕೆ ಬಂದಿದೆ. ಅದರಲ್ಲೂ ಕಳೆದ 15 ದಿನಗಳ ಅಂಕಿಅಂಶಗಳಿಗೆ ಹೋಲಿಸಿದರೆ ಶನಿವಾರ ಹೊಸ ಸೋಂಕಿನ ಪ್ರಮಾಣದಲ್ಲಿ ಶೇ.75ರಷ್ಟುಭಾರೀ ಇಳಿಕೆಯಾಗಿದೆ

ನವದೆಹಲಿ(ಮೇ.16): ಕೊರೋನಾ 2ನೇ ಅಲೆ ವೇಳೆ ಭಾರೀ ಹೊಡೆತ ತಿಂದಿದ್ದ ಮೆಟ್ರೋನಗರಿಗಳ ಪೈಕಿ ಒಂದಾದ ದೆಹಲಿಯಲ್ಲಿ ಕೊನೆಗೂ ಸೋಂಕು ನಿಯಂತ್ರಣಕ್ಕೆ ಬಂದಿದೆ. ಅದರಲ್ಲೂ ಕಳೆದ 15 ದಿನಗಳ ಅಂಕಿಅಂಶಗಳಿಗೆ ಹೋಲಿಸಿದರೆ ಶನಿವಾರ ಹೊಸ ಸೋಂಕಿನ ಪ್ರಮಾಣದಲ್ಲಿ ಶೇ.75ರಷ್ಟುಭಾರೀ ಇಳಿಕೆಯಾಗಿದೆ. ಮೇ 1ರಂದು ದಿಲ್ಲಿಯಲ್ಲಿ 25219 ಪ್ರಕರಣ ದಾಖಲಾಗಿದ್ದರೆ, ಮೇ 15ರಂದು ಅದು ಕೇವಲ 6430ಕ್ಕೆ ಇಳಿದಿದೆ. ಸೋಂಕು ನಿಯಂತ್ರಣ ಸಂಬಂಧ ರಾತ್ರಿ ಕರ್ಫ್ಯೂ, ಲಾಕ್ಡೌನ್‌ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದೇ ಈ ಭಾರೀ ಬದಲಾವಣೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಸೋಂಕು, ಸಾವು ಅತೀ ಹೆಚ್ಚು ಇದ್ದ ಅಮೆರಿಕದಲ್ಲಿ ಪರಿಸ್ಥಿತಿ ಬಹುತೇಕ ನಿಯಂತ್ರಣ!

ಏ.20ರ ಆಸುಪಾಸಿನಲ್ಲಿ ದಿಲ್ಲಿಯಲ್ಲಿ ಗರಿಷ್ಠ ದೈನಂದಿನ ಸೋಂಕಿನ ಪ್ರಮಾಣ 28000ದವರೆಗೂ ತಲುಪಿತ್ತು. ಆದರೆ ಈ ವೇಳೆ ಸರ್ಕಾರ ಲಾಕ್ಡೌನ್‌ ಸೇರಿದಂತೆ ಕಠಿಣ ಕ್ರಮ ಕೈಗೊಂಡ ಪರಿಣಾಮ ಹಂತಹಂತವಾಗಿ ಹೊಸ ಸೋಂಕಿತರ ಪ್ರಮಾಣ ಇಳಿಕೆಯಾಗಿದ್ದು, ಇದೀಗ 1 ತಿಂಗಳ ಕನಿಷ್ಠ ಪ್ರಮಾಣಕ್ಕೆ ತಲುಪಿದೆ.

ಸೋಂಕು, ಸಾವು ಅತೀ ಹೆಚ್ಚು ಇದ್ದ ಅಮೆರಿಕದಲ್ಲಿ ಪರಿಸ್ಥಿತಿ ಬಹುತೇಕ ನಿಯಂತ್ರಣ!

ಆದರೆ ವೈರಸ್‌ಗೆ ಬಲಿಯಾಗುತ್ತಿರುವ ಸಂಖ್ಯೆಯಲ್ಲಿ ಮಾತ್ರ ಇಳಿಕೆಯಾಗದಿರುವುದು ಮಾತ್ರವೇ ಆತಂಕಕ್ಕೆ ಕಾರಣವಾಗಿದೆ. ಈಗಲೂ ರಾಜಧಾನಿಯಲ್ಲಿ ನಿತ್ಯವೂ 300- 400 ಜನರು ಸೋಂಕಿಗೆ ಬಲಿಯಾಗುತ್ತಿದ್ದಾರೆ. ಆಕ್ಸಿಜನ್‌, ರೆಮ್‌ಡೆಸಿವಿರ್‌, ವೆಂಟಿಲೇಟರ್‌ ಸಮಸ್ಯೆ ಇತ್ಯರ್ಥವಾದ ಹೊರತಾಗಿಯೂ ಸಾವಿನ ಪ್ರಮಾಣದಲ್ಲಿ ಇನ್ನೂ ಗಣನೀಯ ಇಳಿಕೆ ದಾಖಲಾಗದಿರುವುದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿದೆ.