Asianet Suvarna News Asianet Suvarna News

Terrorists Killed in J&K: ಜೈಶ್‌ ಕಮಾಂಡರ್‌ ಝಾಹೀದ್‌ ವಾನಿ ಸೇರಿ ಐವರು ಉಗ್ರರ ಹತ್ಯೆಗೈದ ಸೇನೆ!

*ಜೈಶ್‌ ಕಮಾಂಡರ್‌ ಝಾಹೀದ್‌ ವಾನಿ ಹತ್ಯೆಗೈದ ಸೇನೆ
*ಪುಲ್ವಾಮದಲ್ಲಿ ನಾಲ್ವರು, ಬುದ್ಮಾಂಗ್‌ನಲ್ಲಿ ಓರ್ವ ಉಗ್ರನ ಹತ್ಯೆ
*ಬೆಳ್ಳಂ ಬೆಳಗ್ಗೆ ಖುಷಿ ಸುದ್ದಿ ಕೊಟ್ಟ ಭಾರತೀಯ ಸೇನೆ

ನವದೆಹಲಿ (ಜ. 30): ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬುದ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಐವರು ಭಯೋತ್ಪಾದಕರನ್ನು ಹತ್ಯೆ (Terrorist Killed) ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾದ ಭಯೋತ್ಪಾದಕರು ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ್ದರು ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Arunachal Pradesh Teen : ನಾಪತ್ತೆ ಆಗಿದ್ದ ಯುವಕ 9 ದಿನಗಳ ಬಳಿಕ ಚೀನಾ ಸೇನೆಯಿಂದ ಹಸ್ತಾಂತರ

ಹತ್ಯೆಯಾದವರಲ್ಲಿ ಜೆಇಎಂ ಕಮಾಂಡರ್ ಜಾಹಿದ್ ವಾನಿ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಸೇರಿದ್ದಾರೆ ಎಂದು ಕುಮಾರ್ ತಿಳಿಸಿದ್ದು ಇದು ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಎಂದು ಹೇಳಿದ್ದಾರೆ. ಈ ತಿಂಗಳ 11 ಎನ್‌ಕೌಂಟರ್‌ಗಳಲ್ಲಿ ಪಾಕಿಸ್ತಾನದ ಎಂಟು ಸೇರಿದಂತೆ ಒಟ್ಟು 21 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಶನಿವಾರ ಸಂಜೆ ಪುಲ್ವಾಮಾದ ನೈರಾ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

Video Top Stories