Asianet Suvarna News Asianet Suvarna News

Arunachal Pradesh Teen : ನಾಪತ್ತೆ ಆಗಿದ್ದ ಯುವಕ 9 ದಿನಗಳ ಬಳಿಕ ಚೀನಾ ಸೇನೆಯಿಂದ ಹಸ್ತಾಂತರ


ಚೀನಾ ಸೇನೆಯಿಂದ ಯುವಕನ ಹಸ್ತಾಂತರ
ಆಕಸ್ಮಿಕವಾಗಿ ಅರುಣಾಚಲ ಪ್ರದೇಶ ಗಡಿ ದಾಟಿದ್ದ ಹುಡುಗ
ಟ್ವಿಟರ್ ಮೂಲಕ ಖಚಿತಪಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು

Arunachal Pradesh Teen who went missing in LAC with China has been handed over to the Indian Army san
Author
Bengaluru, First Published Jan 28, 2022, 4:30 AM IST

ನವದೆಹಲಿ (ಜ.28): ಆಕಸ್ಮಿಕವಾಗಿ ಅರುಣಾಚಲ ಪ್ರದೇಶ (Arunachal Pradesh)ಗಡಿ ಚೀನಾಕ್ಕೆ ಪ್ರವೇಶಿಸಿ ಅಲ್ಲಿ ಯೋಧರಿಂದ ಬಂಧಿಸಲ್ಪಟ್ಟಿದ್ದ ಭಾರತ ಯುವಕನನ್ನು ಚೀನಾ ಸೇನೆ ಗುರುವಾರ ಭಾರತೀಯ ಯೋಧರಿಗೆ ಹಸ್ತಾಂತರಿಸಿದೆ. ಜ.18ರಂದು ಭಾರತೀಯ ಗಡಿ (Indian Border) ಪ್ರದೇಶಕ್ಕೆ ಅಕ್ರಮವಾಗಿ ನುಸುಳಿದ್ದ ಚೀನಾದ ಸೈನಿಕರು ಯುವಕ ಮಿರಾಂ ತರೋಣ್‌ ಎಂಬಾತನನ್ನು ಅಪಹರಿಸಿತ್ತು ಎಂದು ಅರುಣಾಚಲದ ಬಿಜೆಪಿ ಸಂಸದರೊಬ್ಬರು ದೂರಿದ್ದರು.
 

ಯುವಕನ ಪೋಷಕರು ಸಹ ಇದನ್ನು ದೃಢಪಡಿಸಿದ್ದರು. ಅದರ ಬೆನ್ನಲ್ಲೇ ಚೀನಾ ಸೇನೆಯೊಂದಿಗೆ ಹಾಟ್‌ಲೈನ್‌ ಸ್ಥಾಪಿಸಿದ್ದ ಭಾರತೀಯ ಸೇನೆ ಯುವಕನ ಸುರಕ್ಷಿತ ಬಿಡುಗಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿತ್ತು. ಚೀನಾದ ಪಿಎಲ್‌ಎ ಅರುಣಾಚಲ ಪ್ರದೇಶದ ಮಿರಾಂ ತರೋಣ್‌ ನನ್ನು(Miram Taron ) ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ವೈದ್ಯಕೀಯ ಪರೀಕ್ಷೆ ಸೇರಿದಂತೆ ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ" ಎಂದು  ರಿಜಿಜು ಟ್ವೀಟ್ ಮಾಡಿದ್ದಾರೆ.

ಚೀನಾದ ಪೀಪಲ್ ಲಿಬರೇಶನ್ ಆರ್ಮಿ, ಅಥವಾ ಪಿಎಲ್‌ಎ,ಮಿರಾಂ ತರೋಣ್‌ ಅವರನ್ನು ಭಾರತದ ಕಡೆಗೆ ವಾಪಸು ಕಳುಹಿಸಲಾಗುವುದು ಎಂದು ಇದಕ್ಕೂ ಮುನ್ನ ತಿಳಿಸಿತ್ತು.ಪರ್ವತ ಪ್ರದೇಶದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಅವರನ್ನು ಸ್ವದೇಶಕ್ಕೆ ಕರೆತರಲು ವಿಳಂಬವಾಗಿತ್ತು.
 


ಮತ್ತೆ ಅಸ್ಸಾಂ-ಅರುಣಾಚಲ ಗಡಿ ವಿವಾದ: ರಸ್ತೆ ನಿರ್ಮಾಣ
ಉತ್ತರ ಲಖೀಂಪುರ:
ಅಸ್ಸಾಂ (Assam) ಮತ್ತು ಅರುಣಾಚಲ ಪ್ರದೇಶದ ನಡುವಿನ ಗಡಿ ವಿವಾದ ಮತ್ತೆ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಅರುಣಾಚಲ ಪ್ರದೇಶ ಸರ್ಕಾರ ಅಸ್ಸಾಂ ಗಡಿಯ ವ್ಯಾಪ್ತಿಯಲ್ಲಿ ಬರುವ ಮಿಂಗ್‌-ಮಾಂಗ್‌ ಹಿಮ್‌ ಗ್ರಾಮದ ಬಳಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ರಸ್ತೆ ಕಾಮಗಾರಿ ಆರಂಭಿಸಿದೆ. ಆದರೆ ಇದು ತಮ್ಮ ರಾಜ್ಯಕ್ಕೆ ಸೇರಿದ ಜಾಗ ಎಂದು ಅಸ್ಸಾಂನ ಗಡಿ ಭಾಗದ ಜನರು ಬುಧವಾರ ರಸ್ತೆ ನಿರ್ಮಾಣಕ್ಕೆ ಅಡ್ಡಿ ಮಾಡಿದ್ದಾರೆ. ಈ ವೇಳೆ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಬೆದರಿಸುವ ಯತ್ನ ಮಾಡಿದ್ದಾನೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗದೇ ಇದ್ದರೂ, ಈ ಗಡಿ ವಿವಾದ ಮತ್ತೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.

ಸದ್ಯ ಸ್ಥಳದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ತಹಬದಿಗೆ ಬಂದಿದ್ದು, ಯಾವುದೇ ಅನಾಹುತ ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಜೊತೆಗೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಅಧಿಕಾರಿಗಳು ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಸುದೀರ್ಘವಾಗಿ ನೆನೆಗುದಿಗೆ ಬಿದ್ದಿದ್ದ ಉಭಯ ರಾಜ್ಯಗಳ ಗಡಿ ಬಿಕ್ಕಟ್ಟು ಇತ್ಯರ್ಥಕ್ಕಾಗಿ ಅಸ್ಸಾಂ ಮತ್ತು ಅರುಣಾಚಲದ ಮುಖ್ಯಮಂತ್ರಿಗಳಾದ ಹಿಮಂತಾ ಬಿಶ್ವಾ ಶರ್ಮಾ (Himanta biswa sarma) ಮತ್ತು ಪೇಮಾ ಖಂಡು (pema khandu)ಅವರು ಪರಸ್ಪರ ಭೇಟಿಯಾಗಿದ್ದ ಕೆಲವೇ ದಿನಗಳ ಬೆನ್ನಲ್ಲೇ, ಈ ಘಟನೆ ನಡೆದಿದೆ.

 

ಅಕ್ರಮ ಹಣ ವಗ: ಕಾರ್ವಿ ಸಿಎಂಡಿ, ಸಿಎಫ್‌ಒ ಬಂಧನ
ನವದೆಹಲಿ:
ಕಾರ್ವಿ ಸ್ಟಾಕ್‌ ಬ್ರೋಕರಿಂಗ್‌ ಲಿಮಿಟೆಡ್‌ (ಕೆಎಸ್‌ಬಿಎಲ್‌) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಪಾರ್ಥಸಾರಥಿ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಜಿ. ಕೃಷ್ಣ ಹರಿ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಈಗಾಗಲೇ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಜೈಲಿನಲ್ಲಿದ್ದ ಇವರನ್ನು ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬಂಧಿಸಿ ಹೈದರಾಬಾದ್‌ ಕೋರ್ಟ್‌ ಮುಂದೆ ಹಾಜರುಪಡಿಸಿದ್ದು, ಜ.25ರಂದು ಕೋರ್ಟು ಇವರನ್ನು ಜ.27ರಿಂದ 30ರವರೆಗೆ ಇ.ಡಿ. ಒಪ್ಪಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಇತರ ಕೆಲವು ಬಂಡವಾಳ ಹೂಡಿಕೆದಾರರು ಇವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದರು. ಗ್ರಾಹಕರ ಷೇರುಗಳನ್ನು ಕಾರ್ವಿ ಸ್ಟಾಕ್‌ ಬ್ರೋಕಿಂಗ್‌ ಕಂಪನಿಯು ಅಕ್ರಮವಾಗಿ ಬೇರೆ ಕಡೆ ವರ್ಗಾಯಿಸಿದೆ. ಬ್ಯಾಂಕ್‌ಗಳಲ್ಲಿ ಹಾಗೂ ಹಣಕಾಸೇತರ ಸಂಸ್ಥೆಗಳಲ್ಲಿ ಸಾಲ ಪಡೆದುಕೊಂಡು ಅಕ್ರಮವಾಗಿ ಒತ್ತೆ ಇರಿಸಿದೆ. ಬಳಿಕ ಆ ಬ್ಯಾಂಕ್‌ಗಳಿಗೆ ಸಾಲದ ಹಣ ಕೂಡ ಕಟ್ಟದೇ ಕಟಬಾಕಿಯಾಗಿದೆ ಎಂದು ದೂರಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇವರನ್ನು ಇ.ಡಿ. ಬಂಧಿಸಿದೆ. ಕಳೆದ ವರ್ಷವೇ ಪಾರ್ಥಸಾರಥಿ ಅವರಿಗೆ ಸೇರಿದ 700 ಕೋಟಿ ರು. ಮೌಕ್ಯದ ಷೇರುಗಳನ್ನು 2000 ಕೋಟಿ ರು. ಮೌಲ್ಯದ ಅಕ್ರಮಕ್ಕೆ ಸಂಬಂಧಿಸಿದಂತೆ ಇ.ಡಿ. ಜಪ್ತಿ ಮಾಡಿತ್ತು.

Follow Us:
Download App:
  • android
  • ios