ಉತ್ತರಕಾಂಡ ಟೀಸರ್ ಹವಾ: ಚಡ್ಡಿಲ್ಲಿ ಕೂರಿಸಿದ್ದಕ್ಕೆ ಸ್ಟೇಷನ್‌ಗೆ ಬಾಂಬ್ ಇಟ್ಟ ಡಾಲಿ

ನಟ ರಾಕ್ಷಸ ಧನಂಜಯ್ ಈಗ ಡಾಲಿ ಅಲ್ಲ. ಗಬ್ರು ಸತ್ಯ ಆಗಿದ್ದಾರೆ. ಈ ಗಬ್ರು ಸತ್ಯಾ ಅಂತಿಂತಾ ಸೈತಾನ ಅಲ್ಲ. ಚಡ್ಡಿಯಲ್ಲಿ ಕೂರಿಸಿ ಮಷ್ಗಿರಿ ಮಾಡಿದ್ದ ಪೊಲೀಸ್ಗೆ ಸ್ಟೇಷನ್ನಲ್ಲಿ ಬಾಂಬ್ ಇಟ್ಟು ಉಡಾಯಿಸಿದ ಆಸಾಮಿ. 

First Published Aug 26, 2023, 11:22 AM IST | Last Updated Aug 26, 2023, 12:06 PM IST

ಧನಂಜಯ್, ಕನ್ನಡ ಚಿತ್ರರಸಿಕರ ನಯಾ ಮಾಸ್ ಐಕಾನ್. ಮಾಸ್ ಕ್ಲಾಸ್ ಪ್ರೇಕ್ಷಕರ ಫಸ್ಟ್ ಕ್ಲಾಸ್ ಆ್ಯಕ್ಟರ್. ಡಾಲಿ ಹೆಸ್ರು ಕೇಳಿದ್ರೆ ಬಾಕ್ಸಾಫೀಸ್ಗೆ ಹೊಸ ಭಯ ಶುರುವಾಗುತ್ತೆ. ಯಾಕಂದ್ರೆ ಕತ್ತಲಲ್ಲಿ ಮಿಂಚು ಜಳಪಿಸೋ ಹಾಗೆ ಬೆಳ್ಳಿತೆರೆಯ ಕತ್ತಲಲ್ಲಿ ಭರ್ಜರಿಯಾಗಿ ಮಿಂಚಿ ಮೆರೆದಾಡುತ್ತಿದ್ದಾರೆ ಧನಂಜಯ್. ಶಿವಣ್ಣನ ಟಗರು ಸಿನಿಮಾದಲ್ಲಿ ಬೀಯರ್ ಬಾಟೆಲ್ ಒಡೆದು ಲಾಂಗ್ ಹಿಡಿದು ರಕ್ತದ ಕೋಡಿಯನ್ನೇ ಹರಿಸಿದ್ದ ಡಾಲಿ ಈಗ ಅದಕ್ಕೂ ಒಂದು ಕೈ ಮುಂದೆ ಹೋಗಿದ್ದಾರೆ. ಅದು ಉತ್ತರ ಕಾಂಡ ಸಿನಿಮಾದಲ್ಲಿ. ನಟ ರಾಕ್ಷಸ ಧನಂಜಯ್ ಈಗ ಡಾಲಿ ಅಲ್ಲ. ಗಬ್ರು ಸತ್ಯ ಆಗಿದ್ದಾರೆ. ಈ ಗಬ್ರು ಸತ್ಯಾ ಅಂತಿಂತಾ ಸೈತಾನ ಅಲ್ಲ. ಚಡ್ಡಿಯಲ್ಲಿ ಕೂರಿಸಿ ಮಷ್ಗಿರಿ ಮಾಡಿದ್ದ ಪೊಲೀಸ್ಗೆ ಸ್ಟೇಷನ್ನಲ್ಲಿ ಬಾಂಬ್ ಇಟ್ಟು ಉಡಾಯಿಸಿದ ಆಸಾಮಿ. 

ಈ ಗಬ್ರು ಸತ್ಯನ ಖದರ್ ನೋಡಿ ಡಾಲಿ ಪ್ರತಿಯೊಬ್ಬ ಅಭಿಮಾನಿಯೂ ಫುಲ್ ಸೈಕ್ ಆಗ್ತಿದ್ದಾರೆ. ಕಲರ್ ಕಲರ್ ಶರ್ಟ್, ಮುರಿದ ಕನ್ನಡಕ, ಬಾಯಲ್ಲೊಂದು ಸಿಗರೇಟ್ ಹಚ್ಚಿಕೊಂಡು ಪಕ್ಕಾ ಪೋಲಿ, ಪರೋಡಿ, ಚಾಲಾಕಿ ಗಬ್ರು ಸತ್ಯನಾಗಿ ಉತ್ತರ ಕಾಂಡ ಸಿನಿಮಾದಲ್ಲಿ ಡಾಲಿ ಮೋಡಿ ಮಾಡ್ತಾರೆ. ಡಾಲಿ ಸಿನಿ ಟ್ರ್ಯಾಕ್ ಭಾರಿ ಮಸ್ತ್ ಐತೆ. ಅತ್ಲಾಗೆ ರೌಡಿನೂ ಹೌದು, ಇತ್ಲಾಗೆ ಮನೆ ಮಗನೂ ಹೌದು ಅನ್ನೋ ತರದ ಪಾತ್ರ ಮಾಡ್ತಾರೆ. ಟಗರುನಲ್ಲಿ ಲಾಂಗ್ ಹಿಡಿದು ರಾಕ್ಷಸನಾಗಿದ್ದ ಡಾಲಿ ಬಡವಾ ರಾಸ್ಕಲ್ನಲ್ಲಿ ಮಿಡಲ್ಕ್ಲಾಸ್ ಕುಟುಂಬದ ಚಿನ್ನದಂತ ಹುಡುಗನಾಗಿದ್ರು. ಈಗ ಉತ್ತರ ಕಾಂಡದಲ್ಲಿ ಉತ್ತರ ಕರ್ನಾಟಕದ ಪಕ್ಕಾ ಲೋಕಲ್ ಬಾಯ್ ಆಗಿ ಜವಾರಿ ಭಾಷೆಯಲ್ಲೇ ಡೈಲಾಗ್ ಬಿಟ್ಟಿದ್ದಾರೆ. 

ಈ ಹಿಂದೆ ಬಂದ ಹೊಸ್ಸಳ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಖಡಕ್ ಪೊಲೀಸ್ ಆಫೀಸ್ ರೋಲ್ ಮಾಡಿದ್ರು. ಈಗ ರೌಡಿ ಗಬ್ರು ಸತ್ಯನಾಗಿ 'ಕರ್ನಾಟಕದ್ ಮನಿ ಮಗ' ಯಾರ್ಲಾ ಕೇಳಿದ್ದಾರೆ. ಈ ಗಬ್ರು ಸತ್ಯನ ಪಾತ್ರ ಸಖತ್ ಸೈಕ್ ಆಗಿದ್ದು, ಚರಣ್ ರಾಜ್ ಮ್ಯೂಸಿಕ್‌ ಗಬ್ರು ಸತ್ಯನ ಹಾವಳಿಗೆ ಮತ್ತಷ್ಟು ಖದರ್ ಕೊಟ್ಟಿದೆ. 'ರತ್ನನ್ ಪ್ರಪಂಚ'ಕ್ಕೆ ನಿಮ್ಮನ್ನ ಕರೆದುಕೊಂಡು ಹೋಗಿದ್ದ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾಲಿ ಮತ್ತೆ ಉತ್ತರ ಕರ್ನಾಟಕ ಮಂದಿ ಹಾರ್ಟ್ ಟಚ್ ಮಾಡಿದ್ದಾರೆ. ಒಂದ್ಕಡೆ ಧನಂಜಯ್ ತನ್ನ ಹುಟ್ಟುಹಬ್ಬವನ್ನ ಫಸ್ಟ್ ಟೈಂ ದೊಡ್ಡದಾಗಿ ಫ್ಯಾನ್ಸ್ ಜೊತೆ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. 

ಇನ್ನೊಂದು ಕಡೆ ಸ್ಯಾಂಡಲ್‌ವುಡ್ ಮಂದಿ ನಟರಾಕ್ಷಸನ ಜೊತೆ ಹೊಸ ಹೊಸ ಪ್ರಾಜೆಕ್ಟ್‌ ಅನೌನ್ಸ್ ಮಾಡಿದ್ದಾರೆ. ನಟ ಧನು ಹುಟ್ಟು ಹಬ್ಬದ ಬಳುವಳಿಯಾಗಿ ಉತ್ತರ ಕಾಂಡದ ಗಬ್ರು ಸತ್ಯಾ ಟೀಸರ್ ರಿಲೀಸ್ ಆಗಿತ್ತು. ಇದರ ಜೊತೆಗೆ 'ಬಡವ ರಾಸ್ಕಲ್' ನಲ್ಲಿ ಸಕ್ಸಸ್ ಕೊಟ್ಟ ಟೀಂ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದು 'ಅಣ್ಣ From Mexico' ಅಂತ ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾ ಟೈಟಲ್‌ ಹಾಗೂ ಪೋಸ್ಟರ್‌ನಿಂದಲೇ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಒಟ್ಟಿನಲ್ಲಿ ಈಗ ಡಾಲಿ ಮಾಸ್ ಹೀರೋ ಆಗಿ ದರ್ಬಾರ್ ಮಾಡೋಕತ್ಯಾನ.