Asianet Suvarna News Asianet Suvarna News

'ಟೋಬಿ' ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?: ದಾಖಲೆ ಬರೆದ ರಾಜ್ ಬಿ ಶೆಟ್ಟಿ ಸಿನಿಮಾ!

ಸ್ಯಾಂಡಲ್‌ವುಡ್‌ ಸಿನಿ ಪ್ರೇಕ್ಷಕರ ಗ್ಯಾರಂಟಿ ಸ್ಟಾರ್ ರಾಜ್ ಬಿ ಶೆಟ್ಟಿ.. ಇವ್ರ ಸಿನಿಮಾಗಳು ಬಂದ್ರೆ ಎಂಟರ್ಟೈನ್ಮೆಂಟ್ ಪೀಕ್ ಲೆವೆಲ್ ತಲುಪುತ್ತೆ. ಥಿಯೇಟರ್ನಲ್ಲಿ ಸಖತ್ ಮಜಾ ಮಾಡ್ಬಹುದು ಇದಕ್ಕೆ ರಾಜ್ ಬಿ ಶೆಟ್ಟಿಗೆ ಎಂಟರ್ಟೈನ್ಮೆಂಟ್‌ನ ಅದಿಪತಿ ಅಂತ ಕರಿಬಹುದು.

ಸ್ಯಾಂಡಲ್‌ವುಡ್‌ ಸಿನಿ ಪ್ರೇಕ್ಷಕರ ಗ್ಯಾರಂಟಿ ಸ್ಟಾರ್ ರಾಜ್ ಬಿ ಶೆಟ್ಟಿ.. ಇವ್ರ ಸಿನಿಮಾಗಳು ಬಂದ್ರೆ ಎಂಟರ್ಟೈನ್ಮೆಂಟ್ ಪೀಕ್ ಲೆವೆಲ್ ತಲುಪುತ್ತೆ. ಥಿಯೇಟರ್ನಲ್ಲಿ ಸಖತ್ ಮಜಾ ಮಾಡ್ಬಹುದು ಇದಕ್ಕೆ ರಾಜ್ ಬಿ ಶೆಟ್ಟಿಗೆ ಎಂಟರ್ಟೈನ್ಮೆಂಟ್‌ನ ಅದಿಪತಿ ಅಂತ ಕರಿಬಹುದು. ಈಗ ಬಂದಿರೋ ಟೋಬಿ ಮಾರಿ ಮಾರಿ ಮಾರಿಗೆ ದಾರಿ ಸಿನಿಮಾ ಕೂಡ ಭರ್ಜರಿ ಮನೋರಂಜನೆ ಕೊಡುತ್ತಿದೆ. ಟೋಬಿ ಮೊದಲ ಹೆಜ್ಜೆ ಹೇಗಿದೆ ಅಂದ್ರೆ ಕನ್ನಡ ಬಾಕ್ಸಾಫೀಸ್ನಲ್ಲಿ ರಾಜ್ ಬಿ ಶೆಟ್ಟಿ ದಂಡಯಾತ್ರೆ ಶುರುವಾಗಿದ್ದು ಫಸ್ಟ್ ದಿ ಫಸ್ಟ್ ಡೈಂ ಫಸ್ಟ್ ಡೇನೇ ರೆಕಾರ್ಡ್ ಬರೆದಿದ್ದಾರೆ. ಟೋಬಿಯಾಗಿರೋ ರಾಜ್ ಬಿ ಶೆಟ್ಟಿ ಟ್ಯಾಲೆಂಟ್ ಬಗ್ಗೆ ಪ್ರತಿ ಸಿನಿ ಅಭಿಮಾನಿಗೂ ಗೊತ್ತು. ರಾಜ್ ಬಿ ಶೆಟ್ಟಿ ಯಾವ್ ಸಿನಿಮಾ ಬಂದ್ರು ಅಲ್ಲಿ ಸ್ಕೋರ್ ಮಾಡೇ ಮಾಡ್ತಾರೆ. ಟೋಬಿಯಲ್ಲಿ ಮಾತೇ ಬರದ ಮೂಕನ ರೋಲ್ ಮಾಡಿರೋ ರಾಜ್ ಬಿ ಶೆಟ್ಟಿಗೆ ಭೇಷ್ ಅನ್ನೋ ಹೊಗಳಿಗೆ ಸಿಕ್ತಿದೆ. 

ಇವ್ರ ಸಿನಿಮಾಗಳು ಬಿಡುಗಡೆ ಆಗಿ ಎರಡು ಮೂರು ದಿನ ಆದ ಮೇಲೆ ಬಾಕ್ಸಾಫೀಸ್ ಕಲೆಕ್ಷನ್ ಸರ್ ಅಂತ ಏರೋದನ್ನ ನೋಡಿದ್ದೇವೆ. ಆದ್ರೆ ಟೋಬಿ ಹಾಗಲ್ಲ. ಈ ಹಿಂದೆ ಬಂದಾ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್. ಯಾಕಂದ್ರೆ ಟೋಬಿ ಫಸ್ಟ್ ಡೇನೇ 3 ಕೋಟಿ ಕಲೆಕ್ಷನ್ ಮಾಡಿದೆ. ಅಷ್ಟೆ ಅಲ್ಲ ಹತ್ತಿಪ್ಪತ್ತು ವರ್ಷದಿಂದ ಚಿತ್ರರಂಗದಲ್ಲಿದ್ದು ಸೂಪರ್ ಸ್ಟಾರ್ ಆಗಿ ಮಾಸ್ ಹೀರೋನ ಸಿನಿಮಾ ಬಂದ್ರೆ ಚಿತ್ರಮಂದಿರಗಳಲ್ಲಿ ಹೇಗೆ ಪ್ರೇಕ್ಷಕರು ತುಂಬಿ ತುಳುಕುತ್ತಾರೋ. ಡೊಳ್ಳು ಕುಣಿತಾ, ತಮಟೆ ಸದ್ದು ಕೇಳಿ ಓಪನಿಂಗ್ ಪಡೆಯುತ್ತೋ ಹಾಗೆ ರಾಜ್ ಬಿ ಶೆಟ್ಟಿಯ ಟೋಬಿಗೂ ವೆಲ್ ಕಮ್ ಸಿಕ್ಕಿದೆ. ಟೋಬಿ ಎರಡನೇ ದಿನವೂ ಥಿಯೇಟರ್ಗಳು ಫಾಸ್ಟ್ ಫಿಲ್ಲಿಂಗ್ ಆಗುತ್ತಿದೆ. ಈ ಮೂಲಕ ರಾಜ್ ಬಿ ಶೆಟ್ಟಿ ಸ್ಯಾಂಡಲ್ವುಡ್ ಬಾಕ್ಸಾಫೀಸ್ ಅದಿಪತಿಗಳ ಲೀಸ್ಟ್ ಸೇರಿದ್ದಾರೆ. 

Video Top Stories