ಡಿಕೆ- ಎಚ್ಡಿಕೆ ಮಧ್ಯೆ ‘ಕಥಾನಾಯಕ’ ಕಾಳಗ! ಮಹಿಳಾ ಅಧಿಕಾರಿಗಳು SIT ಮುಂದೆ ಹೇಳಿದ್ದೇನು?
ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪದಿಂದ ಜೆಡಿಎಸ್ಗೆ ಮುಜುಗರ ಆಗಿದ್ದಂತೂ ಸತ್ಯ. ಇದೇ ವಿಚಾರ ಇಟ್ಟುಕೊಂಡು ರಾಜಕೀಯ ನಾಯಕರೂ ಕೆಸರೆರಚಾಟಕ್ಕೆ ಇಳಿದಿದ್ದಾರೆ.
ಬೆಂಗಳೂರು(ಮೇ.09): ದಿನಕೊಂದು ಟ್ವಿಸ್ಟ್... ಕ್ಷಣಕ್ಕೊಂದು ಅಪ್ಡೇಟ್ ಇದು ಪ್ರಜ್ವಲ್ ರೇವಣ್ಣ ಕಾಮಕಾಂಡದ ಸದ್ಯದ ಒನ್ಲೈನ್ ಸ್ಟೋರಿ.. ಅಪ್ಪ ಜೈಲಿನಲ್ಲಿ.. ಮಗ ಫಾರೀನ್ನಲ್ಲಿದ್ರೂ ಬೆಂಗಳೂರಿನಲ್ಲಿ ಪೆನ್ಡ್ರೈವ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಇವತ್ತು ರೇವಣ್ಣನ SIT ಕಸ್ಟಡಿ ಅವಧಿ ಮುಕ್ತಾಯವಾದ್ರೆ.. ಪ್ರಜ್ವಲ್ ರೇವಣ್ಣ ಕೋರಿದ್ದ 7 ದಿನ ಅವಕಾಶವೂ ಮುಗಿದಿತ್ತು.. ಆದ್ರೆ ರೇವಣ್ಣ ಜೈಲಿಗೆ ಹೋದ್ರೆ ಮಗ ಪ್ರಜ್ವಲ್ ಮಾತ್ರ ಮತ್ತೆ ಭಾರತಕ್ಕೆ ಬರುವ ಮನಸ್ಸು ಮಾತ್ರ ಮಾಡಿಲ್ಲ.. ಇದೆಲ್ಲದ್ರ ಜೊತೆಗೆ ಇನ್ನಿಬ್ಬರು ಸಂತ್ರಸ್ಥೆಯರು ಇವತ್ತು ಪ್ರಜ್ವಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗಾದ್ರೆ ಸದ್ಯ ಪ್ರಜ್ವಲ್ ರಾಸಲೀಲೆ ಪ್ರಕರಣ ಈಗ ಎಲ್ಲಿಗೆ ಬಂದು ನಿಂತಿದೆ. ಪೆನ್ಡ್ರೈವ್ ಕಹಾನಿಯ ಕಂಪ್ಲೀಟ್ ಡಿಟೇಲ್ಸೇ ಇವತ್ತಿನ ಎಫ್ಐಆರ್.
ಹೀಗೆ ದಿನಕ್ಕೊಂದು ದೂರು ಸದ್ಯ ಪ್ರಜ್ವಲ್ ವಿರುದ್ಧ ದಾಖಲಾಗ್ತಿದೆ. ಅಪ್ಪ ಜೈಲು ಪಾಲಾದ್ರೆ ಮಗ ಇನ್ನೂ ಭಾರತದ ಕಡೆ ತಲೆ ಹಾಕಿ ಸಹ ಮಲಗಿಲ್ಲ. ಇನ್ನೂ ಆತ ಬಂದ್ರೆ ಆತನ ಕೇರ್ ಆಫ್ ಅಡ್ರೆಸ್ಸೂ ಸಹ ಪರಪ್ಪನ ಅಗ್ರಹಾರವೇ.. ಇನ್ನೂ ಪ್ರಕರಣದ ಅಪ್ಡೇಟ್ಸ್ ಇಷ್ಟಾದ್ರೆ ಎಂದಿನಂತೆ ರಾಜಕಾರಣಿಗಳ ಟಾಕ್ ವಾರ್ ಮುಂದುವರೆದಿತ್ತು.
News Hour: ಕೇಸ್ ಮಾಡಿದ ಪುತ್ರ ಜರ್ಮನಿಗೆ, ಕಿಡ್ನಾಪ್ ಮಾಡಿದ ಅಪ್ಪ ಜೈಲಿಗೆ!
ಪ್ರಜ್ವಲ್ ರಾಸಲೀಲೆ ಕೇಸ್ನಲ್ಲಿ ತನಿಖೆ ಎಷ್ಟರ ಮಟ್ಟಿಗೆ ಪಾರದರ್ಶಕವಾಗಿ ನಡೆಯುತಿದ್ಯೋ ಗೊತ್ತಿಲ್ಲ ಆದ್ರೆ ರಾಜಕಾರಣಿಗಳ ಹೇಳಿಕೆಗಳು, ಪ್ರತ್ಯಾರೋಪಗಳು ಮಾತ್ರ ಭರ್ಜರಿಯಾಗಿ ನಡೆಯುತ್ತಿದೆ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಪೆನ್ಡ್ರೈವ್ ಫೈಟ್ ಇಡೀ ಕರ್ನಾಟಕ ರಾಜಕಾರಣವನ್ನೇ ಹೊಸ ದಿಕ್ಕಿಗೆ ಕೊಂಡೊಯ್ಯುತ್ತಿದೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪದಿಂದ ಜೆಡಿಎಸ್ಗೆ ಮುಜುಗರ ಆಗಿದ್ದಂತೂ ಸತ್ಯ. ಇದೇ ವಿಚಾರ ಇಟ್ಟುಕೊಂಡು ರಾಜಕೀಯ ನಾಯಕರೂ ಕೆಸರೆರಚಾಟಕ್ಕೆ ಇಳಿದಿದ್ದಾರೆ. ಆದ್ರೆ ಇದೆಲ್ಲದ್ರ ನಡುವೆ ಎಲ್ಲರಿಗೂ ಇರುವ ಅತೀ ದೊಡ್ಡ ಪ್ರಶ್ನೆ ಅಂದ್ರೆ ಪ್ರಜ್ವಲ್ ಯಾವಾಗ ಭಾರತಕ್ಕೆ ಬರ್ತಾನೆ ಅಂತ. ಇದಕ್ಕೆಲ್ಲಾ ಕಾಲಾನೇ ಉತ್ತರ ನೀಡಲಿದೆ.