ಮತ್ತೊಮ್ಮೆ ಜಾಮೀನು ಕೋರಿ ರಾಗಿಣಿ ದ್ವಿವೇದಿ ಅರ್ಜಿ
ನಟಿ ರಾಗಿಣಿ ದ್ವಿವೇದಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಾಳೆ ಸಿಸಿಎಚ್ 33 ನೇ ಕೋರ್ಟ್‌ನಲ್ಲಿ ವಿಚಾರಣೆ ಸಾಧ್ಯತೆ ಇದೆ.
ಬೆಂಗಳೂರು (ಸೆ. 10): ನಟಿ ರಾಗಿಣಿ ದ್ವಿವೇದಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಾಳೆ ಸಿಸಿಎಚ್ 33 ನೇ ಕೋರ್ಟ್‌ನಲ್ಲಿ ವಿಚಾರಣೆ ಸಾಧ್ಯತೆ ಇದೆ.
ರಕ್ತದ ಮಾದರಿ ತೆಗೆದುಕೊಳ್ಳಲು ಸಂಜನಾ ರಂಪಾಟ: ಇದರ ಹಿಂದೆ ಯಾರಿರಬಹುದು?
ಈಗಾಗಲೇ ಒಂದು ಸಲ ಅರ್ಜಿ ಸಲ್ಲಿಸಿದ್ದು, ಜಾಮೀನು ನೀಡಲು ಕೋರ್ಟ್ ನಿರಾಕರಿಸಿತ್ತು. 8 ದಿನಗಳ ಕಾಲ ಸಿಸಿಬಿ ಕಸ್ಟಡಿಯನ್ನು ಮುಂದುವರೆಸಲು ಸೂಚಿಸಿತ್ತು. ರಾಗಿಣಿ ತಂದೆ ಮುಂಬೈನಿಂದ ವಕೀಲರನ್ನು ಕರೆಸಿ, ಮತ್ತೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಾಳೆ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಜಾಮೀನು ಸಿಗುತ್ತಾ ಎಂದು ಕಾದು ನೋಡಬೇಕಿದೆ.