ಸುಂದರಿಯನ್ನ ಕೊಂದವನೂ ಈಗ ಬದುಕಿಲ್ಲ..! ಹೇಗಿದ್ದವು ಗಗನ ಸಖಿಯ ಕೊನೆ ಕ್ಷಣಗಳು..!

ಟ್ರೈನ್ನಿಂಗ್ ಮುಗಿಸಿ ಹಾರುವ ಕನಸು ಕಂಡಿದ್ಲು..!
ಹಂತಕನ ಸುಳಿವು ಕೊಟ್ಟಿತ್ತು ಸಿಸಿ ಕ್ಯಾಮರ..!
ಕತ್ತು ಸೀಳಿ ಕೊಂದವನು ಎಸ್ಕೇಪ್ ಆಗಿದ್ದ..!

First Published Sep 10, 2023, 12:48 PM IST | Last Updated Sep 10, 2023, 12:48 PM IST

ಅವಳು ಫ್ಲೈಟ್‌ನಲ್ಲಿ ಮಿಠಾಯಿ ಕೊಡೋ ಹುಡುಗಿ.. ಅಪರೂಪದ ಸುಂದರಿ.. ಏರ್ ಹಾಸ್ಟೆಸ್(Air Hostess) ಆಗುವ ಕನಸು ಕಂಡಿದ್ದ ಆಕೆ ಅದೇ ಕನಸಿನ ಬೆನ್ನು ಹತ್ತಿ ಅದಕ್ಕಾಗಿ ಬೇಕಾದ ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದ್ಲು. 6 ತಿಂಗಳ ಟ್ರೈನಿಂಗ್‌ ಕೂಡ ಮುಗಿಯೋ ಹಂತಕ್ಕೆ ಬಂದಿತ್ತು. ಆದ್ರೆ ಹೀಗಿರುವಾಗ್ಲೇ ಆ ಸುಂದರಿ ತನ್ನದೇ ಪ್ಲ್ಯಾಟ್‌ನಲ್ಲಿ(Flat) ಹೆಣವಾಗಿ ಸಿಕ್ಕಿದ್ದಾಳೆ. ಅವಳನ್ನ ಹಂತಕರು ಕತ್ತು ಸೀಳಿ ಕೊಲೆ (Murder) ಮಾಡಿದ್ರು. ರೂಪಲ್ ವಾಸವಿದ್ದ ಅಪಾರ್ಟ್ಮೆಂಟ್‌ನಲ್ಲಿ ಕ್ಲಿನಿಂಗ್‌ ಕೆಲಸ ಮಾಡ್ತಿದ್ದವನೇ ಅವಳ ಕಥೆ ಮುಗಿಸಿದ್ದ. ಯಾರೂ ಇಲ್ಲದ ಹೊತ್ತಲ್ಲಿ ಕಳ್ಳ ಬೆಕ್ಕಿನಂತೆ ಮನೆ ಒಳಗೆ ನುಗ್ಗಿ ರೂಪಲ್ ಕತ್ತು ಸೀಳಿದ್ದ.  ಅವಳು ತನ್ನ ಪಾಡಿಗೆ ಏರ್ ಹೋಸ್ಟೆಸ್ ಟ್ರೇನ್ನಿಂಗ್, ಮನೆ ಅಂತ ಇದ್ದವಳು.. ಆಕೆಗೆ ಹೊರಗಡೆ ಯಾರೂ ಶತ್ರುಗಳು ಇರಲಿಲ್ಲ. ಆದ್ರೆ ಅವಳಿಗೆ ಆಗದೇ ಇದ್ದ ಏಕೈಕ ಜೀವ ಅಂದ್ರೆ ಅದು ಆಕೆ ವಾಸವಿದ್ದ ಫ್ಲ್ಯಾಟ್‌ಗೆ ಕ್ಲೀನ್ನಿಂಗ್ ಅಂತ ಬರ್ತಿದ್ದ ಈ ವಿಕ್ರಮ. ಕ್ಲೀನ್ನಿಂಗ್ಗೆ ಅಂತ ಪ್ರತೀ ನಿತ್ಯ ಮನೆಗೆ ಬರ್ತಿದ್ದ ವಿಕ್ರಮ್ಗೆ ರೂಪಲ್ ಅವಮಾನಿಸುತ್ತಿದ್ಲು. ಆತ ಕೂಡ ಅವಳ ಅವಮಾನದ ಮಾತುಗಳಿಂದ ರೋಸಿ ಹೋಗಿದ್ದ. ನೋಡೋವರೆಗೂ ನೋಡಿದ ಆದ್ರೆ ಆವತ್ತು ಮನೆಯಲ್ಲಿ ಅವಳೊಬ್ಬಳೇ ಇದ್ದಾಳೆ ಅನ್ನೋದನ್ನ ತಿಳಿದ ಕಿರಾತಕ ಆತ ಆ ಮನೆಗೆ ಹೋಗುವಾಗ ಒಂದು ಚಾಕುವನ್ನ ಕೂಡ ತೆಗೆದುಕೊಂಡು ಹೋದ. ಸೈಲೆಂಟ್ ಆಗಿ ಅವಳ ಕಥೆ ಮುಗಿಸಿದ. ಆದ್ರೆ ರೂಪಲ್ ಕಥೆ ಮುಗಿದು ಒಂದು ವಾರದಲ್ಲೇ ವಿಕ್ರಮ್ ಕಥೆ ಕೂಡ ಅಂತ್ಯಗೊಂಡಿತ್ತು.

ಇದನ್ನೂ ವೀಕ್ಷಿಸಿ:  ಮೋದಿ ಮಾಡಿದ್ದೇ ಸರಿ ಎಂದ ಮನಮೋಹನ್ ಸಿಂಗ್..! ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ಆತಿಥ್ಯ..!