ಮೋದಿ ಮಾಡಿದ್ದೇ ಸರಿ ಎಂದ ಮನಮೋಹನ್ ಸಿಂಗ್..! ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ಆತಿಥ್ಯ..!

ಜಿ 20 ಶೃಂಗಸಭೆಯಲ್ಲಿ ಅಧಿಕವಾಯ್ತು ಭಾರತದ ಹಿರಿಮೆ
ರಾಜತಾಂತ್ರಿಕ ಸಭೆಯನ್ನ ಹಬ್ಬವನ್ನಾಗಿಸಿದ ನರೇಂದ್ರ ಮೋದಿ
ಹೆಜ್ಜೆ ಹೆಜ್ಜೆಯಲ್ಲೂ ಕಾಣಸಿಗುತ್ತೆ ಭಾರತದ ಅಸ್ಮಿತೆಯ ಘಮಲು

First Published Sep 10, 2023, 12:31 PM IST | Last Updated Sep 10, 2023, 12:31 PM IST

ಕೆಲವನ್ನ ನೋಡಿದ್ರೆ ಹಿಂದೆಂದೂ ಆಗಿರ್ಲಿಲ್ಲಾ, ಮುಂದೆಂದೂ ಆಗೋದಿಲ್ಲ ಅನ್ನೋ ಭಾವನೆ ಬಂದು ಬಿಡುತ್ತೆ. ಭಾರತದಲ್ಲಿ(India) ನಡೀತಾ ಇರೋ ಜಿ20 ಶೃಂಗಸಭೆಯೂ (G20 Summit) ಆ ಪಟ್ಟಿಗೆ ಸೇರುತ್ತೆ. ರಾಜತಾಂತ್ರಿಕ ಸಭೆಯನ್ನ ಒಂದು ಉತ್ಸವದ ರೀತಿಯಲ್ಲೇ ಮಾಡಲಾಗಿದೆ. ಭಾರತದ ವೈಭವದ ವಿರಾಟ ರೂಪ ಕಂಡಿದೆ. ಇಡೀ ಜಗತ್ತು ಭಾರತವನ್ನ ನೋಡುವ ರೀತಿಯೇ ಬದಲಾಗಿದೆ. ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಭಾರತದ ಶ್ರೇಷ್ಟತೆಯ ದರ್ಶನವಾಗ್ತಾ ಇದೆ. ನಮ್ಮ ಭಾರತ.. ನವ ಭಾರತ.. ಜಾಗತಿಕ ಮಟ್ಟದಲ್ಲಿ ಊಹೆಗೂ ಮೀರಿದಂತೆ ಬೆಳಿತಾ ಇರೋ ಸಮರ್ಥ ದೇಶವಾಗಿದೆ. ಜಗತ್ತಿನ ತುಂಬೆಲ್ಲಾ ಆರ್ಥಿಕ, ರಾಜತಾಂತ್ರಿಕ ಸಮಸ್ಯೆಗಳು ಕುಣಿತಾ ಇರುವಾಗ ಭಾರತದ ಮಾತ್ರ ತನ್ನ ಜಿಡಿಪಿಯನ್ನ ಹೆಚ್ಚಿಸಿಕೊಂಡು ಚೀತಾ ವೇಗದಲ್ಲಿ ಮುಂದೆ ಸಾಗ್ತಾ –ಇದೆ. ಈ ಹಿಂದೆ ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಇದ್ದ ಸ್ಥಾನಮಾನವೇ ಬೇರೆ ಈಗ ಸಿಕ್ತಾ ಇರೋ ಆ ಕಿಮ್ಮತ್ತೇ ಬೇರೆ. ಭಾರತದಲ್ಲಿ ಈಗ ಜಿ 20 ಸಮ್ಮೇಳನದ ಸಂಭ್ರಮ ಕಾಣಿಸ್ತಾ ಇದೆ. ಭಾರತ ಅತಿಥಿ ದೇವೋ ಭವ ಎನ್ನುವ ಸಂಸ್ಕಾರ ಹೊಂದಿರೋ ನೆಲ. ಇಲ್ಲಿ ಅತಿಥಿಯಾಗಿ ಬಂದವರಿಗೆ ಸಿಗೋ ಸತ್ಕಾರ ಇದೆಯಲ್ಲಾ ಅದು ಜಗತ್ತಿನ ಯಾವ ಮೂಲೆಯಲ್ಲೂ ಸಿಗೋದಿಲ್ಲಾ. ಜಿ 20 ಸಮ್ಮೇಳನದ ಅತಿಥಿ ಸತ್ಕಾರ ನೋಡಿ ವಿಶ್ವ ನಾಯಕರೇ ಹುಬ್ಬೇರಿಸಿದ್ದಾರೆ. ಅದೆಂತಾ ವೈಭವ..ಅದೆಂತಾ ರಾಜತ್ವ..ನೋ ಡೌಟ್..ಭಾರತ ಅಂದ್ರೆ ಬಾಸ್ ಆಫ್ ಆಲ್.

ಇದನ್ನೂ ವೀಕ್ಷಿಸಿ:  ಮಹಾತ್ಮ ಗಾಂಧಿ ಸಮಾಧಿಗೆ ವಿಶ್ವ ಗಣ್ಯರಿಂದ ನಮನ: ಖಾದಿ ಶಾಲು ಹಾಕಿ ಸ್ವಾಗತ ಕೋರಿದ ಮೋದಿ