Asianet Suvarna News Asianet Suvarna News

1 ಕೋಟಿ ರುಪಾಯಿಯ ದುಬಾರಿ ವಾಚ್‌ ಕಟ್ಟಿದ ಹಾರ್ದಿಕ್ ಪಾಂಡ್ಯ..!

ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಹಾರ್ದಿಕ್ ಪಾಂಡ್ಯ ಹೊಸವರ್ಷದ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸರ್ಬಿಯಾದ ನಟಿ ಸ್ಟ್ಯಾಂಕೋವಿಚ್ ಅವರೊಂದಿಗೆ ಪಾಂಡ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. 

ಮುಂಬೈ(ಜ.21): ದುಬಾರಿ ಜೀವನ ಶೈಲಿಗೆ ಹೆಸರುವಾಸಿಯಾಗಿರುವ ಭಾರತ ಕ್ರಿಕೆಟ್‌ ತಂಡದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ಗುರುವಾರ ಬರೋಬ್ಬರಿ 1.10 ಕೋಟಿ ರುಪಾಯಿ ಬೆಲೆಬಾಳುವ ವಾಚ್‌ ಕಟ್ಟಿಕೊಂಡು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. 

ಪಾಂಡ್ಯ ನಿಶ್ಚಿತಾರ್ಥದ ಬಗ್ಗೆ ತಂದೆಗೇ ಗೊತ್ತಿರಲಿಲ್ಲ!

ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಹಾರ್ದಿಕ್ ಪಾಂಡ್ಯ ಹೊಸವರ್ಷದ ದಿನದಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸರ್ಬಿಯಾದ ನಟಿ ಸ್ಟ್ಯಾಂಕೋವಿಚ್ ಅವರೊಂದಿಗೆ ಪಾಂಡ್ಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. 

ಟಿ20ಯಲ್ಲೂ ಕನ್ನಡಿಗ ರಾಹುಲ್‌ ವಿಕೆಟ್ ಕೀಪರ್‌!

ಪಾಂಡ್ಯ ಧರಿಸಿದ್ದ ಕೈಗಡಿಯಾರ ಪಟೆಕ್‌ ಫಿಲಿಪ್‌ ಸಂಸ್ಥೆಯ ನೌಟಿಲಸ್‌ ಪೆರ್ಪೆಚೆಯಲ್‌ ಕಾಲೆಂಡರ್‌ 5740/1ಜಿ ಮಾಡೆಲ್‌ ಎಂದು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹಬ್ಬಿದೆ. ಹಾರ್ದಿಕ್‌ರ ದುಬಾರಿ ವಾಚ್‌ನ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Video Top Stories