ಮುಂಬೈ[ಜ.05]: ನತಾಶಾ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದು ಹಾರ್ದಿಕ್‌ ಪಾಂಡ್ಯ ನಮಗೇ ಹೇಳಿರಲಿಲ್ಲ. ಹೀಗಂತ, ಸತ್ವಃ ಪಾಂಡ್ಯ ತಂದೆ ಹಿಮಾಂಶು ಹೇಳಿದ್ದಾರೆ. 

27ರ ಹರೆಯದ ನತಾಶಗೆ ಮನಸೋತ 26ರ ಪಾಂಡ್ಯ; ಇಲ್ಲಿದೆ ಕ್ರಿಕೆಟ್ ಬಾಲಿವುಡ್ ಲವ್ ಸ್ಟೋರಿ!

‘ನತಾಶಾ ಜತೆ ಡೇಟಿಂಗ್‌ ವಿಷಯ ತಿಳಿದಿತ್ತು. ಹಲವು ಬಾರಿ ಆಕೆಯನ್ನು ಭೇಟಿ ಮಾಡಿದ್ದೇವೆ. ಆದರೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಸುಳಿವೇ ಇರಲಿಲ್ಲ’ ಎಂದು ಹಿಮಾಂಶು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 

ಜನವರಿ 01ರಂದು ಹಾರ್ದಿಕ್‌ ಹಾಗೂ ಸರ್ಬಿಯಾ ನಟಿ ನತಾಶಾ ಸ್ಟ್ಯಾಂಕೋವಿಚ್‌ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಹಾರ್ದಿಕ್-ನತಾಶಾ ಎಂಗೇಜ್‌ಮೆಂಟ್: ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ

ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದು, ಶ್ರೀಲಂಕಾ ವಿರುದ್ಧದ ಸರಣಿಗೂ ಆಯ್ಕೆಯಾಗಿಲ್ಲ. ಆದಾಗಿಯೂ ನ್ಯೂಜಿಲೆಂಡ್ ಪ್ರವಾಸಕ್ಕೆ ಪಾಂಡ್ಯ ಭಾರತ ’ಎ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.