ಟಿ20ಯಲ್ಲೂ ಕನ್ನಡಿಗ ರಾಹುಲ್ ವಿಕೆಟ್ ಕೀಪರ್!
ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ ಪಂತ್‌ಗೆ ಶಾಕ್ ನೀಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಆಕ್ಲೆಂಡ್(ಜ.24): ಏಕದಿನ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಥಾನವನ್ನು ಪಡೆದಿರುವ ಕರ್ನಾಟಕದ ಕೆ.ಎಲ್.ರಾಹುಲ್‌ಗೆ ಟಿ20 ಮಾದರಿಯಲ್ಲೂ ಹೆಚ್ಚುವರಿ ಜವಾಬ್ದಾರಿ ನೀಡುವುದಾಗಿ ನಾಯಕ ವಿರಾಟ್ ಕೊಹ್ಲಿ ಖಚಿತಪಡಿಸಿದ್ದಾರೆ. ಈ ಮೂಲಕ ಪಂತ್‌ಗೆ ನಾಯಕ ಶಾಕ್ ಕೊಟ್ಟಿದ್ದಾರೆ.
ಇಂಡೋ-ಕಿವೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ‘ರಾಹುಲ್ ಕೀಪಿಂಗ್ ಮಾಡಿದರೆ ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್ ಇಲ್ಲವೇ ಆಲ್ರೌಂಡರ್‌ನನ್ನು ಆಡಿಸಲು ಅವಕಾಶ ಸಿಗಲಿದೆ. ವಿಕೆಟ್ ಕೀಪರ್ ಆಗಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಟಿ20ಯಲ್ಲೂ ಅವರನ್ನೇ ಮುಂದುವರಿಸಲಿದ್ದೇವೆ’ ಎಂದರು.
ಅಭ್ಯಾಸದ ವೇಳೆ ರಾಹುಲ್ ಹೆಚ್ಚಿನ ಸಮಯವನ್ನು ಕೀಪಿಂಗ್ ಮಾಡುವುದರಲ್ಲೇ ಕಳೆದರು. ಇದೇ ವೇಳೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ವಿರಾಟ್ ಸುಳಿವು ನೀಡಿದರು. ರಾಹುಲ್ ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಆಡಲಿದ್ದು, ಟಿ20ಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದರು. ಇದರೊಂದಿಗೆ ಪೃಥ್ವಿ ಶಾ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಬಿಡುವಿಲ್ಲದೆ ವೇಳಾಪಟ್ಟಿ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ!
ಆಸ್ಪ್ರೇಲಿಯಾ ವಿರುದ್ಧ ಏಕದಿನ ಸರಣಿ ಮುಗಿದ ಮರುದಿನವೇ ನ್ಯೂಜಿಲೆಂಡ್‌ಗೆ ವಿಮಾನ ಹತ್ತಿದ ಭಾರತ ತಂಡ, ಮಂಗಳವಾರ ತಲುಪಿತು. ಬುಧವಾರ ವಿಶ್ರಾಂತಿ ಪಡೆದ ಆಟಗಾರರು, ಗುರುವಾರ ಅಭ್ಯಾಸ ನಡೆಸಿದರು.
ಬಿಡುವಿಲ್ಲದ ವೇಳಾಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ಕೊಹ್ಲಿ, ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಮುಂದೊಂದು ದಿನ ನೇರವಾಗಿ ಕ್ರೀಡಾಂಗಣಕ್ಕೆ ಬಂದಿಳಿದು ಆಡಬೇಕಾದ ಸಂದರ್ಭ ಬರಬಹುದು’ ಎಂದಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿರುವ ಬೇಡಿಕೆಗಳನ್ನು ಒಪ್ಪಿಕೊಂಡಿರುವ ವಿರಾಟ್, ಕ್ರಿಕೆಟ್ ಇರುವುದೇ ಹೀಗೆ ಎಂದಿದ್ದಾರೆ.