'ಕಾಫಿ' ಪಾಠ ನೆನಪಿಸಿಕೊಂಡ KL ರಾಹುಲ್..!

ಕಾಫಿ ವಿತ್ ಕರುಣ್ ಕಾರ್ಯಕ್ರಮದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜತೆ ಭಾಗವಹಿಸಿ ಬ್ಯಾಡ್ ಇಂಪ್ರೇಶನ್ ಬರುವಂತೆ ಮಾಡಿತ್ತು. ಬಳಿಕ ಟೀಂ ಇಂಡಿಯಾದಿಂದಲೂ ಈ ಇಬ್ಬರು ಆಟಗಾರರು ಕಿಕೌಟ್ ಆಗಿದ್ದರು. ಮಾತ್ರವಲ್ಲ ಕ್ರಿಕೆಟ್ ಹಾಗೂ ಮಹಿಳಾ ಅಭಿಮಾನಿಗಳ ಕೆಂಗಣ್ಣಿಗೂ ರಾಹುಲ್ ಗುರಿಯಾಗಿದ್ದರು. 

First Published Jun 20, 2020, 6:23 PM IST | Last Updated Jun 20, 2020, 6:23 PM IST

ಬೆಂಗಳೂರು(ಜೂ.20): ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವ ಮಾತು ಕನ್ನಡಿಗ ಕೆ.ಎಲ್ ರಾಹುಲ್‌ಗೆ ಸರಿಯಾಗಿಯೇ ಅನ್ವಯಿಸುತ್ತೆ. ಒಂದು ಕಹಿ ಘಟನೆ ರಾಹುಲ್ ಬದುಕನ್ನು ಬದಲಿಸುವಲ್ಲಿ ಮಹತ್ವದ ಪಾತ್ರವನ್ನೇ ವಹಿಸಿದೆ.

ಕಾಫಿ ವಿತ್ ಕರುಣ್ ಕಾರ್ಯಕ್ರಮದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜತೆ ಭಾಗವಹಿಸಿ ಬ್ಯಾಡ್ ಇಂಪ್ರೇಶನ್ ಬರುವಂತೆ ಮಾಡಿತ್ತು. ಬಳಿಕ ಟೀಂ ಇಂಡಿಯಾದಿಂದಲೂ ಈ ಇಬ್ಬರು ಆಟಗಾರರು ಕಿಕೌಟ್ ಆಗಿದ್ದರು. ಮಾತ್ರವಲ್ಲ ಕ್ರಿಕೆಟ್ ಹಾಗೂ ಮಹಿಳಾ ಅಭಿಮಾನಿಗಳ ಕೆಂಗಣ್ಣಿಗೂ ರಾಹುಲ್ ಗುರಿಯಾಗಿದ್ದರು. 

ಐಪಿಎಲ್ ಆರಂಭಕ್ಕೆ ಭಾರತೀಯನಿಂದಲೇ ಅಡ್ಡಗಾಲು..!

ಆ ಒಂದು 'ಕಾಫಿ' ಘಟನೆಯ ಬಳಿಕ ನನ್ನ ಯೋಚನಾ ಲಹರಿಯೇ ಬದಲಾಯಿತು ಎಂದು ಸ್ವತಃ ಕೆ.ಎಲ್. ರಾಹುಲ್ ಹೇಳಿದ್ದಾರೆ. ಕ್ರಿಕೆಟ್‌ನಲ್ಲಿ ಇತ್ತೀಚಿಗಿನ ನನ್ನ ಉತ್ತಮ ಪ್ರದರ್ಶನಕ್ಕೆ ಅಂದಿನ ಕೆಟ್ಟ ಘಟನೆಯೇ ಕಾರಣ. ಅಮಾನತಿನಿಂದ ಆದ ಅಪಮಾನ, ನಿರಾಸೆಯಿಂದ ನಾನು ಪಾಠ ಕಲಿತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.