Asianet Suvarna News Asianet Suvarna News

ಪ್ಯಾನ್ ಇಂಡಿಯಾದಲ್ಲಿ ಸೌತ್ ಸಿನಿಮಾಗಳದ್ದೇ ಸೌಂಡು..ಸಿಕ್ವೇಲ್‌ನಿಂದ ಚಿತ್ರಗಳು ಆಗಲಿವೆಯಾ ಸಕ್ಸಸ್..?

ಕನ್ನಡದಲ್ಲೂ ಪ್ಯಾನ್ ಇಂಡಿಯಾದಲ್ಲೂ ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ರಾಕಿ ಕೆ.ಜಿ.ಎಫ್ ಸಿನಿಮಾ ಮೂಲಕ ಪ್ಯಾನ್ ಸ್ಟಾರ್ ಆಗ್ಬಿಟ್ರು. ಈ ಸಿನಿಮಾವನ್ನ ಎರಡು ಪಾರ್ಟ್‌ನಲ್ಲಿ ಮಾಡಿ ಗೆಲ್ಲೋದು ಹೇಗೆ ಅಂತ ಹೊಸ ಫಾರ್ಮುಲಾ ಹೇಳಿಕೊಟ್ರು. ಈಗ ಚಾಪ್ಟರ್ ತ್ರಿ ಕೂಡ ಬರೊದಕ್ಕೆ ಭರ್ಜರಿ ತಯಾರಿ ನಡೀತಾ ಇದೆ. 

ರಾಕಿ ಈಗ ಸೌತ್‌ನ ಬಿಗ್ ಸ್ಟಾರ್ಸ್‌ ರೋಲ್ ಮಾಡೆಲ್. ಯಾಕಂದ್ರೆ ಯಶ್(Rocking Star Yash) ಸಕ್ಸಸ್ ಫಾರ್ಮುಲಾವ್ನೇ ಫಾಲೋ ಮಾಡ್ತಿದ್ದಾರೆ ಸೌತ್ ಸ್ಟಾರ್ಸ್. ರಾಕಿ ಭಾಯ್ ಕೆಜಿಎಫ್‌ನಲ್ಲಿ ಚಿನ್ನದ ಖಜಾನೆ ಲೂಟಿ ಹೊಡೆಯೊದಕ್ಕೆ ಹೊರಟಿದ್ದ. ಅದೇ ರೀತಿ  ಪುಷ್ಪಾ ದಿ ರೈಸ್‌ನಲ್ಲಿ(Pushpa), ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ಮರಗಳ್ಳತನ ಮಾಡಿ ಹಣ ಮಾಡೋದಕ್ಕೆ ಹೊರಟಿದ್ದ. ಈಗ ಕೆಜಿಎಫ್‌ನಂತೆಯೇ(KGF), ಎರಡು ಪಾರ್ಟ್‌ನಲ್ಲಿ ಪುಷ್ಪಾ ಸಿನಿಮಾ ಸಿದ್ಧವಾಗಿದೆ. ಅದೇ ರೀತಿ ಜ್ಯೂನಿಯರ್ ಎನ್‌ಟಿಆರ್ ಕೂಡ ಇನ್ನೊಂದು ಹಿಟ್ ಸಿನಿಮಾ ಕೊಡದಕ್ಕೆ ಯಶ್ ಫಾರ್ಮುಲಾ ಫಾಲೋ ಮಾಡ್ತಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ದೇವರ ಅನ್ನೋ ಮಾಸ್ ಪ್ಯಾನ್ ಇಂಡಿಯಾ ಮೂವಿ(Pan India movie) ಬರ್ತಿದೆ. ಇಂಟ್ರೆಸ್ಟಿಂಗ್ ಏನ್ ಗೊತ್ತಾ..? ಈ ಮೂವಿ ಕೂಡ ಎರಡು ಪಾರ್ಟ್‌ನಲ್ಲಿ ರೆಡಿಯಾಗ್ತಿದೆ. ಒಟ್ಟಿನಲ್ಲಿ ಇನ್ನಷ್ಟು ಸಕ್ಸಸ್ ಸಿನಿಮಾಗಳನ್ನ ಕೊಡೊದಕ್ಕೆ ಹೊರಟಿರೋ ಸೌತ್ ಸೂಪರ್‌ ಸ್ಟಾರ್ಸ್‌, ಯಶ್ ಸಕ್ಸಸ್ ಫಾರ್ಮುಲಾ ಯೂಸ್ ಮಾಡಿ ಇನ್ನೊಂದು ಸಕ್ಸಸ್ ಮೂವಿ ಕೊಡೊದಕ್ಕೆ ಪ್ರಿಪೇರ್ ಆಗ್ತಿದ್ದಾರೆ. ಅಲ್ಲು ಅರ್ಜುನ್ ಈ ಫಾರ್ಮುಲಾ ಬಳಸಿ ಗೆಲ್ಲೋದಂತು ಪಕ್ಕಾ. ಆದ್ರೆ ಜ್ಯೂ. ಎನ್‌ಟಿಆರ್ ಕೂಡ ಸಕ್ಸಸ್ ಆಗ್ತಾರಾ ಎಂದು ಕಾದು ನೋಡ್ಬೇಕು.

ಇದನ್ನೂ ವೀಕ್ಷಿಸಿ:  ‘ಪರಮಾತ್ಮ ಚಿತ್ರಕ್ಕೀಗ 12 ವರ್ಷಗಳ ಸಂಭ್ರಮ: ಬಾಕ್ಸ್ ಆಫೀಸ್‌ನಲ್ಲಿ ಸೋತು ಗೆದ್ದ ಸಿನಿಮಾ..!