‘ಪರಮಾತ್ಮ ಚಿತ್ರಕ್ಕೀಗ 12 ವರ್ಷಗಳ ಸಂಭ್ರಮ: ಬಾಕ್ಸ್ ಆಫೀಸ್‌ನಲ್ಲಿ ಸೋತು ಗೆದ್ದ ಸಿನಿಮಾ..!

ಯೋಗರಾಜ್ ಭಟ್ರ ಸಿನಿ ಕರೆಯರ ಬಗ್ಗೆ ಮತಾಡ್ಬೇಕಾದ್ರೆ, ಇಲ್ಲಾ ಹತ್ತಾರು ಸೂಪರ್ ಹಿಟ್ ಸಿನಿಮಾಗಳ ಸರದಾರ ಅಪ್ಪು ಸಿನಿ ಕೆರಿಯರ್ ಬಗ್ಗೆ ಮಾತಾಡ್ಬೇಕಾದ್ರು, ಈ ಚಿತ್ರದ ಬಗ್ಗೆ ಹೇಳಲಿಲ್ಲಾ ಅಂದ್ರೆ, ಅದು ಪರಿಪೂರ್ಣ ಅನ್ನಿಸೋದಿಲ್ಲಾ. ಹೌದು ಆ ಮಟ್ಟಿಗೆ ಪರಮಾತ್ಮ ಅನ್ನೋ ಈ ಚಿತ್ರ. ಇಬ್ಬರ ಬದುಕಿನಲ್ಲೂ ವಿಶೇಷ ಸ್ಥಾನ ಪಡೆದಿದೆ. ಅಂದಹಾಗೆ ಈ ಚಿತ್ರಕ್ಕೀಗ 12 ವಸಂತಗಳ ಸಂಭ್ರಮ.

First Published Oct 8, 2023, 9:03 AM IST | Last Updated Oct 8, 2023, 9:03 AM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಪರಮಾತ್ಮ(Paramathma). ಜೊತೆಗಿರದ ಜೀವ ಎಂದೆಂದೂ ಜೀವಂತ ಅನ್ನೋ ಹಾಗೆ ಅಪ್ಪು ಇಲ್ಲದ ನೋವು ಕೂಡ ಎಂದೆಂದೂ ಜೀವಂತವೇ. ಆದ್ರೆ ಪವರ್ ಸ್ಟಾರ್ ಬಿಟ್ಟು ಹೋದ ನೆನಪಿನ ಬುತ್ತಿ ಇದೆಯಲ್ಲ ಅದನ್ನ ಸ್ಮರಿಸೋದೆ ಒಂದು ಖುಷಿ. ಅಂತಹ ನೆನಪಿನ ಬುತ್ತಿಯಲ್ಲೊಂದು ಪರಮಾತ್ಮ ಸಿನಿಮಾ. ಯೋಗರಾಜ್ ಭಟ್ರು(Yogaraj Bhat) ಫಾರ್ಮುಲಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(puneeth rajkumar) ಪವರ್ ಬ್ರ್ಯಾಂಡ್ ಸೇರಿ ಆಗಿದ್ದೇ ಪರಮಾತ್ಮ ಸಿನಿಮಾ. ಈ ಸಿನಿಮಾಗೆ ಈಗ 12 ವರ್ಷ. ಅಫ್ಕೋರ್ಸ್, ಪರಮಾತ್ಮ ಸ್ಯಾಂಡಲ್ವುಡ್ ಹಿಟ್ ಸಿನಿಮಾ. ಯಾಕಂದ್ರೆ ಬಿಡುಗಡೆಗೂ ಮೊದ್ಲೆ ಪರಮಾತ್ಮ ಗಳಿಸಿದ್ದು ಬರೋಬ್ಬರಿ 25 ಕೋಟಿಯನ್ನ. ಅಪ್ಪು ಫಸ್ಟ್ ದಿ ಫಸ್ಟ್ ಟೈಂ ಫನ್ ಜೊತೆ ಎಮೋಷನಲ್ ಆಗಿ ನಟಿಸಿದ್ದ ಸಿನಿಮಾ ಪರಮಾತ್ಮ. ಈ ಸಿನಿಮಾ ಬಂದಾಗ ಕ್ರೇಜ್ ಹೇಗಿತ್ತು ಅಂದ್ರೆ ಫಸ್ಟ್ ದಿ ಫಸ್ಟ್ ಟೈಂ ಆಂಧ್ರದ ಸುದ್ದಿ ವಾಹಿನಿಗಳು ಕೂಡ ಕನ್ನಡದ ಪರಮಾತ್ಮ ಚಿತ್ರದ ಬಗ್ಗೆ ವರಧಿ ಮಾಡಿದ್ವು. ಪರಮಾತ್ಮ ಸಿನಿಮಾ ಅಂದು ರೆಕಾರ್ಡ್ಗಳ ಸರದಾರ ಆಗಿತ್ತು. ಎಲ್ಲಿ ನೋಡಿದರಲ್ಲಿ ಪರಮಾತ್ಮ ಹಾಡುಗಳ ಹಾವಳಿ ಇತ್ತು. ಪರಮಾತ್ಮನ ಆಡಿಯೊ ಹಕ್ಕು 77 ಲಕ್ಷಕ್ಕೆ ಸೇಲ್ ಆಗಿತ್ತು. ಆಡಿಯೋ ಸಿಡಿ ಬಂದ 3 ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಆಡಿಯೋ ಸಿಡಿಗಳು ಮಾರಾಟವಾಗಿದ್ವು. ಇನ್ನು ಪರಮಾತ್ಮನ ಸ್ಯಾಟಲೈಟ್ ಹಕ್ಕು 4 ಕೋಟಿಗೆ ಸೇಲ್ ಆಗಿತ್ತು ಅಂದಿಗೆ ಇದು ದೊಡ್ಡ ದಾಖಲೆ. ಪರಮಾತ್ಮ ಸಿನಿಮಾ ಬಗ್ಗೆ ಇಂದಿಗೂ ಇರೋ ದೊಡ್ಡ ಗೊಂದಲ ಹಿಟ್ಟೋ ಫ್ಲಾಪೋ ಅನ್ನೋ ಪ್ರಶ್ನೆ. ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಪರಮಾತ್ಮ ಸೂಪರ್ ಹಿಟ್. ಆದ್ರೆ ಪ್ರೇಕ್ಷಕರೆಲ್ಲ ಪರಮಾತ್ಮನನ್ನ ಒಪ್ಪಿದ್ರಾ ಅಂದ್ರೆ ಉತ್ತರ ನೋ ಅಂತಾನೆ ಬರುತ್ತೆ. ಯಾಕಂದ್ರೆ ಅಪ್ಪುನ ಪವರ್ಸ್ಟಾರ್ ಅಲ್ಲದೆ ನೋಡಿದ ಅಭಿಮಾನಿಗಳು ಮುಖ ಸಿಂಡರಿಸಿಕೊಂಡಿದ್ದಂತು ನಿಜ.. ಹಾಗಾಗಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಭಟ್ ಈಗ ಪರಮಾತ್ಮ ಸಿನಿಮಾ ಎಲ್ಲರ ಫೇವರಿಟ್ ಆಗಿದೆ. 

ಇದನ್ನೂ ವೀಕ್ಷಿಸಿ:  50 ಸಾವಿರದಿಂದ 10 ಕೋಟಿಯವರೆಗೆ ಧ್ರುವ ಸಿನಿಪಯಣ.. ಮೊದಲ ಸಂಭಾವನೆಯಿಂದ ನಟ ಮಾಡಿದ್ದೇನು..?