Asianet Suvarna News Asianet Suvarna News

ಬಿಗ್ ಬಾಸ್ ಮನೆಗೆ ನ್ಯಾಷನಲ್ ಕ್ರಶ್: ಸಲ್ಲು ಜೊತೆ ರಶ್ಮಿಕಾ ಸ್ಟೆಪ್..!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟಿದ್ದು, ಸಲ್ಮಾನ್ ಖಾನ್ ಜೊತೆ 'ಸಾಮಿ ಸಾಮಿ' ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಡೈಲಾಗ್ ಹೊಡೆದು ಸ್ಪರ್ಧಿಗಳನ್ನು ರಂಜಿಸಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಮೊದಲ ಹಿಂದಿ ಚಿತ್ರ 'ಗುಡ್ ಬೈ' ಪ್ರಚಾರದಲ್ಲಿ ನಿರತರಾಗಿದ್ದು, ಇದೀಗ ಅವರು ಹಿಂದಿ ಬಿಗ್ ಬಾಸ್ 16 ಶೋನಲ್ಲಿ ಭಾಗಿಯಾಗಿದ್ದಾರೆ. ನೀನಾ ಗುಪ್ತಾ ಜೊತೆಗೆ ರಶ್ಮಿಕಾ ಮಂದಣ್ಣ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದು, ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ರಶ್ಮಿಕಾ ಮಂದಣ್ಣರನ್ನು ನೋಡಿ ಫುಲ್ ಖುಷಿಯಾಗಿದ್ದಾರೆ. ಇನ್ನು ರಶ್ಮಿಕಾ, ಸಲ್ಲು ಜೊತೆ 'ಸಾಮಿ ಸಾಮಿ' ಸಾಂಗ್‌ಗೆ ಹೆಜ್ಜೆ ಹಾಕಿದ್ದು, ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.

ಮನರಂಜನಾ ವೀಡಿಯೋಗೆ ಇಲ್ಲಿ ಕ್ಲಿಕ್ಕಿಸಿ