Asianet Suvarna News Asianet Suvarna News

Deepika Padukone: 'ವಿಶ್ವಕಪ್ ಟ್ರೋಫಿ ಕೆ ಸಾಥ್ ಮೇರಿ ಟ್ರೋಫಿ': ದೀಪಿಕಾರನ್ನು ಹೊಗಳಿದ ರಣವೀರ್ ಸಿಂಗ್

ನಟಿ ದೀಪಿಕಾ ಪಡುಕೋಣೆ ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಅವರನ್ನು ಅವರ ಪತಿ ನಟ ರಣವೀರ್‌ ಸಿಂಗ್ ಪ್ರೀತಿಯಿಂದ ಹೊಗಳಿದ್ದಾರೆ. 
 

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕತಾರ್‌ನ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿದ್ದಾರೆ. ಪಂದ್ಯಕ್ಕೂ ಮುನ್ನ ದೀಪಿಕಾ ಸ್ಪೇನ್‌ನ ಮಾಜಿ ಆಟಗಾರ ಇಕರ್ ಕ್ಯಾಸಿಲಾಸ್ ಜೊತೆಗೂಡಿ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಆ ಫೋಟೋಗಳನ್ನು ಹಂಚಿಕೊಂಡಿರುವ ನಟ ರಣವೀರ್ ಸಿಂಗ್, ಹೆಮ್ಮೆಯ ಕ್ಷಣ ಇದಾಗಿದೆ ಎಂದು ಬರೆದುಕೊಂಡಿದ್ದಾರೆ. ಹಾಗೂ 'ವಿಶ್ವಕಪ್ ಟ್ರೋಫಿ ಕೆ ಸಾಥ್ ಮೇರಿ ಟ್ರೋಫಿ' ಎಂದು ಹೇಳುವ ವೀಡಿಯೊವನ್ನು ರಣವೀರ್‌ ಹಂಚಿಕೊಂಡಿದ್ದಾರೆ.

Video Top Stories