ಮೈಸೂರ್ ಬಾಯ್‌‌ಫ್ರೆಂಡ್ ಮೇಲೆ ರಾಖಿ ಸಾವಂತ್ ಕೋಪ; ಆದಿಲ್‌ಗಾಗಿ ಮಾಡಿದ್ದೆಲ್ಲಾ ವೇಸ್ಟ್ ಎಂದ ನಟಿ

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಬಾಯ್ ಫ್ರೆಂಡ್ ವಿಚಾರವಾಗಿ ಸದ್ದು ಮಾಡುತ್ತಿರುವ ನಟಿ ರಾಖಿ ಸಾವಂತ್ ಮೈಸೂರ್ ಮೂಲದ ಆದಿಲ್ ಖಾನ್ ಜೊತೆ ಪ್ರೀತಿಯಲ್ಲಿದ್ದಾರೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಇದೀಗ ದೂರ ಆಗಿದೆ. ರಾಖಿ ಸಾವಂತ್ ಏರ್ಪೋರ್ಟ್ ನಲ್ಲಿ ಸಿಂಗಲ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳ ಜೊತೆ ಮಾತನಾಡಿದ ರಾಖಿ ತಾನು ಆದಿಲ್ ಆಗಿ ಸುಂದರವಾಗಿ ರೆಡಿಯಾಗಿ ಬಂದಿದ್ದೆ ಆದರೆ ಆದಿಲ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದಿದ್ದಾರೆ. 

First Published Jul 20, 2022, 1:10 PM IST | Last Updated Jul 20, 2022, 1:10 PM IST

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಬಾಯ್ ಫ್ರೆಂಡ್ ವಿಚಾರವಾಗಿ ಸದ್ದು ಮಾಡುತ್ತಿರುವ ನಟಿ ರಾಖಿ ಸಾವಂತ್ ಮೈಸೂರ್ ಮೂಲದ ಆದಿಲ್ ಖಾನ್ ಜೊತೆ ಪ್ರೀತಿಯಲ್ಲಿದ್ದಾರೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಇದೀಗ ದೂರ ಆಗಿದೆ. ರಾಖಿ ಸಾವಂತ್ ಏರ್ಪೋರ್ಟ್ ನಲ್ಲಿ ಸಿಂಗಲ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳ ಜೊತೆ ಮಾತನಾಡಿದ ರಾಖಿ ತಾನು ಆದಿಲ್ ಆಗಿ ಸುಂದರವಾಗಿ ರೆಡಿಯಾಗಿ ಬಂದಿದ್ದೆ ಆದರೆ ಆದಿಲ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಆತ ಮೈಸೂರಿನಲ್ಲಿ ಇದ್ದಾನೆ. ನನ್ನ ಉದ್ದವಾದ ಕೂದಲು ಅವನಿಗೆ ತುಂಬಾ ಇಷ್ಟ. ಆದರೀಗ ಅವನಿಲ್ಲ. ಅವನ ಮೇಲೆ ಕೋಪ ಬಂದಿದೆ ಎಂದು ಕೇಳಿದರು. ಬಳಿಕ ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿದರು.  
 

Video Top Stories