Asianet Suvarna News Asianet Suvarna News

ಪ್ರೇಮ್ 'KD' ಅಡ್ಡದಿಂದ ಬಂತು ಭರ್ಜರಿ ಸುದ್ದಿ! ಸಿನಿಮಾ ರಂಗು ಹೆಚ್ಚಿಸಲು ಬಂದ ನೋರಾ ಫತೇಹಿ..!

ಈ ವರ್ಷ ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡೋಕೆ ರೆಡಿಯಾಗುತ್ತಿರೋ ಕನ್ನಡ ಸಿನಿಮಾ KD. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಸಂಜಯ್ ದತ್ ಮಾಸ್ ಕಿಕ್ ಕೊಡೋಕೆ ಕೆಡಿ ಸಿನಿಮಾದಲ್ಲಿ ತೊಡೆ ತಟ್ಟಿರೋದು ನಿಮ್ಗೆಲ್ಲಾ ಗೊತ್ತೇ ಇದೆ. 

ಇದೀಗ ಕೆಡಿ ಅಡ್ಡಾದಿಂದ ಬಿಗ್ ಬ್ಯಾಂಗಿಂಗ್ ಸುದ್ದಿ ಹಲ್‌ಚಲ್‌ ಎಬ್ಬಿಸಿದೆ. ಕೆಡಿ ಡೈರೆಕ್ಟರ್ ಜೋಗಿ ಪ್ರೇಮ್(Jogi Prem) ಹಾಟ್ ನ್ಯೂಸ್ ಕೊಟ್ಟಿದ್ದಾರೆ. ಅದೇ ಕೆಡಿ ಸಿನಿಮಾದಲ್ಲಿ(KD movie) ಬಾಲಿವುಡ್ ಬಳುಕೋ ಬಳ್ಳಿ ನೋರಾ ಫತೇಹಿ(Nora Fatehi) ರಂಗು ತುಂಬಲಿದ್ದಾರೆ ಅನ್ನೋದು. KVN ಪ್ರೊಡಕ್ಷನ್‌ನಲ್ಲಿ ನಿರ್ಮಾಣ ಆಗುತ್ತಿರೋ ಕೆಡಿ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಈ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‌ಗಳ ದಂಡೇ ಇದೆ. ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ ರವಿಚಂದ್ರನ್, ರಮೇಶ್ ಅರವಿಂದ್ ಪ್ರಮುಖ ರೋಲ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಕೆಡಿ ಸ್ಪೆಷಲ್ ಡ್ಯಾನ್ಸ್ ನಂಬರ್‌ನಲ್ಲಿ ನೋರಾ ಫತೇಹಿ ಸೊಂಟ ಬಳುಕಿಸುತ್ತಿದ್ದಾರೆ. ಈ ಡ್ಯಾನ್ಸ್ ಮೇರಿ ರಾಣಿ ಕೆಡಿ ಶೂಟಿಂಗ್ ಸೆಟ್ಗೆ ಬಂದಿರೋ ವಿಡಿಯೋವನ್ನ ನಿರ್ದೇಶಕ ಪ್ರೇಮ್ ರಿವೀಲ್ ಮಾಡಿದ್ದಾರೆ. 

ನಿರ್ದೇಶಕ ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಹಿಟ್ ಆಗೋ ಹಾಡುಗಳಿಗೆ ಕೊರತೆ ಇರಲ್ಲ. ಅದ್ಭುತ ಮೆಲೋಡಿ ಜೊತೆ ಒಂದು ಸ್ಪೆಷಲ್ ಸಾಂಗ್ ಇರುತ್ತೆ. ಆ ಸ್ಪೆಷಲ್ ಹಾಡುಗಳಿಗೆ ಪೋಲಿ ಪೋಲಿ ಲಿರಿಕ್ಸ್ ಕೂರಿಸೋದೇ ಪ್ರೇಮ್. ಈಗ ನೋರಾ ನೃತ್ಯ ಮಾಡೋ ಹಾಡು ಬರೆದಿರೋದು ಕೂಡ ಜೋಗಿ ಪ್ರೇಮ್ ಅವರೇ. ಆದ್ರೆ ಈ ಹಾಡಿನಲ್ಲಿ ನೋರಾ ಜೊತೆ ಡ್ಯಾನ್ಸ್ ಮಾಡೋರು ಯಾರು? ಧ್ರುವ ಜತೆಗಾ ಅಥವ ಸಂಜಯ್ ದತ್ ಜೊತೆಗಾ ಅನ್ನೋದೇ ಸೀಕ್ರೆಟ್ ಆಗಿದೆ. ಬಟ್ ಕೆಡಿ ಅಡ್ಡದಿಂದ ಸಿಕ್ಕಿರೋ ಮಾಹಿತಿ ಪ್ರಕಾರ ನೂರಾ ಧ್ರುವ ಹಾಗು ಸಂಜಯ್ ದತ್ ಇಬ್ಬರ ಜೊತೆಗೂ ಕುಣಿಯಲಿದ್ದಾರಂತೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಬನದ ಹುಣ್ಣಿಮೆ ಇದ್ದು, ಬನಶಂಕರಿ ಅಮ್ಮನವರ ಪ್ರಾರ್ಥನೆ ಮಾಡಿ..