Asianet Suvarna News Asianet Suvarna News

ರಾಕಿಭಾಯ್ ಕಮಾಲ್: ಕೊರೋನಾ ನಂತರ ಹೆಚ್ಚು ಲಾಭ ಮಾಡಿದ ಸಿನಿಮಾ ಕೆಜಿಎಫ್-2

ಕೊರೋನಾ ನಂತರ ಬಂದ ಸಿನಿಮಾಗಳಲ್ಲಿ ಕೆಜಿಎಫ್ 2 ಅತೀ ಹೆಚ್ಚು ಲಾಭ ಮಾಡಿದ ಚಿತ್ರವಾಗಿದೆ. 1200 ಕೋಟಿ ರೂಪಾಯಿ ಗಳಿಕೆ ಮಾಡಿರುವ ಕೆಜಿಎಫ್-2 ಬರೋಬ್ಬರಿ 900 ಕೋಟಿಗಿಂತ ಹೆಚ್ಚಿನ ಲಾಭದ ಪಾಲನ್ನು ಒಳಗೊಂಡಿದೆ ಎನ್ನಲಾಗಿದೆ. 

ಆರ್‌ ಆರ್‌ ಆರ್‌ ಪಠಾಣ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ತಯಾರಾದ ಸಿನಿಮಾವಾಗಿದೆ.  ಆದರೆ ಈ ಎರಡು ಸಿನಿಮಾಗಳಿಗೆ ಹೋಲಿಕೆ ಮಾಡಿದ್ರೆ KGF 2  ಕಡಿಮೆ ಬಜೆಟ್’ನಲ್ಲಿ ಬಂದ ಸಿನಿಮಾ. ಆರ್‌ ಆರ್‌ ಆರ್‌ಸಿನಿಮಾ 500 ಕೋಟಿ ರೂಪಾಯಿಯಲ್ಲಿ ತಯಾರಾದ ಸಿನಿಮಾ ಎನ್ನಲಾಗಿದೆ. ಪಠಾಣ್ 300 ಕೋಟಿ ರೂಪಾಯಿಯಲ್ಲಿ ತಯಾರಾದ ಚಿತ್ರವಾಗಿದೆ. ಆದರೆ ಕೆಜಿಎಫ್-2 100 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚದಲ್ಲಿ ಬಂದ ಚಿತ್ರವಾಗಿದೆ. ಹಾಗಾಗಿ ಅದರ ಲಾಭದ ಪಾಲು ದೊಡ್ಡದಾಗಿದೆ ಎಂದು ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದಾರೆ. ಪಠಾಣ್ ಸಿನಿಮಾ 1,050 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ನಿರ್ಮಾಪಕರ ಜೇಬು ಸೇರಿದ್ದು ಕೇವಲ 600 ಕೋಟಿ. ಇನ್ನು ಆರ್‌ ಆರ್‌ ಆರ್‌ ಸಿನಿಮಾ ಬಿಜಿನೆಸ್ ಮಾಡಿದ್ದು 1200 ಕೋಟಿ, ಆದರೆ ಖರ್ಚು ವೆಚ್ಚ ಹೋಗಿ ಲಾಭ ಮಾಡಿದ್ದು, 600 ಕೋಟಿ ರೂಪಾಯಿಗಳಿಗಿಂತ ಕಡಿಮೆ ಎನ್ನಲಾಗಿದೆ. ಆದರೆ ಕೆಜಿಎಫ್ 900 ಕೋಟಿಗಿಂತ ಹೆಚ್ಚಿನ ಲಾಭ ಮಾಡಿದೆ ಎನ್ನಲಾಗಿದೆ.

Video Top Stories