Asianet Suvarna News Asianet Suvarna News

KD movie: ಆಕ್ಷನ್ ಪ್ರಿನ್ಸ್ 'KD' ಅಡ್ಡದಿಂದ ಬಂತು ಬಿಗ್ ನ್ಯೂಸ್..! ಶೂಟಿಂಗ್ ಹಂತದಲ್ಲೇ ಬಿಗ್ ಆಫರ್..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಧೀರ ಸಂಜಯ್ ಮಹಾ ಸಂಗಮದ ಸಿನಿಮಾ ಕೆಡಿ. ನಿರ್ದೇಶಕ ಜೋಗಿ ಪ್ರೇಮ್ ಕಲ್ಪನೆಯಲ್ಲಿ ಹುಟ್ಟಿರೋ ಕೆಡಿ ಸಿನಿಮಾ 1970ರ ದಶಕದ ರೆಟ್ರೋ ಸ್ಟೈಲ್‌ನಲ್ಲಿ ಸಿದ್ಧವಾಗುತ್ತಿದೆ. ಇನ್ನೂ ಶೂಟಿಂಗ್‌ನಲ್ಲಿರೋ ಕೆಡಿಗೆ ಬಿಗ್ ಆಫರ್ ಒಂದು ಸಿಕ್ಕಿದೆ. 

ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ರಂತಹ ದೊಡ್ಡ ಸ್ಟಾರ್ಕಾಸ್ಟ್ ಇದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿದ್ಧವಾಗುತ್ತಿರೊ ಕೆಡಿ ಅಡ್ಡದಿಂದ ಈಗ ಬಿಗ್ ನ್ಯೂಸ್ ಒಂದು ಬಂದಿದೆ. ಕೆಡಿ ಶೂಟಿಂಗ್ ಇನ್ನೂ ನಡೆಯುತ್ತಿದೆ. ಫೆಬ್ರವರಿಯಲ್ಲಿ ಕೆಡಿ ಶೂಟಿಂಗ್‌ಗೆ ಕುಂಬಳಕಾಯಿ ಒಡೆಯಲಿದ್ದಾರೆ. ಶೂಟಿಂಗ್ ಹಂತದಲ್ಲೇ ಈ ಸಿನಿಮಾದ ಆಡಿಯೋ ರೈಟ್ಸ್ಗೆ(Audio rights) ಭಾರಿ ಡಿಮ್ಯಾಂಡ್ ಬಂದಿದೆ. ಯಾಕಂದ್ರೆ ಇದು ಜೋಗಿ ಪ್ರೇಮ್(Prem) ಸಿನಿಮಾ. ಪ್ರೇಮ್ ಸಿನಿಮಾದಲ್ಲಿ ಹಾಡುಗಳ ಹಬ್ಬ ಹೇಗಿರುತ್ತೆ ಅಂತ ಈ ಹಿಂದೆ ಬಂದಿರೋ ಎಲ್ಲಾ ಸಿನಿಮಾಗಳನ್ನ ಒಮ್ಮೆ ತಿರುವಿ ಹಾಕಿದ್ರೆ ಗೊತ್ತಾಗ್ಬಿಡುತ್ತೆ. ಹೀಗಾಗೆ ಕೆಡಿ ಆಡಿಯೋ ಹಕ್ಕಿಗೂ ದೊಡ್ಡ ಬೇಡಿಕೆ ಬಂದಿದ್ದು ಧ್ರುವ ಸರ್ಜಾ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಆಲ್ಟೈಂ ರೆಕಾರ್ಡ್ ಬರೆಯೋ ಎಲ್ಲಾ ಚಾನ್ಸ್ ಇದೆ.

ಪ್ಯಾನ್ ಇಂಡಿಯಾ ಸಿನಿಮಾಗೆ ಬೂನಾದಿ ಹಾಕಿದ್ದು ಯಶ್ ನಟಿಸಿರೋ ಕೆಜಿಎಫ್. ಹೀಗಾಗಿ ಈ ಸಿನಿಮಾದ ಎಲ್ಲಾ ಭಾಷೆಯ ಆಡಿಯೋ ರೈಟ್ಸ್ 16 ಕೋಟಿಗೆ ಮಾರಾಟ ಆಗಿತ್ತು. ಇಗ ಇದೇ ಪ್ಯಾನ್ ಇಂಡಿಯಾ ರೂಟ್‌ನಲ್ಲೇ ಹೊರಟಿರೋ ಕೆಡಿ ಸಿನಿಮಾದ(KD movie) ಆಡಿಯೋ ಹಕ್ಕಿಗೆ 18 ಕೋಟಿ ಕೊಡೋದಾಗಿ ಆಡಿಯೋ ಕಂಪೆನಿಯೊಂದು ಆಫರ್ ಮಾಡಿದೆ. ಕನ್ನಡ ಸಿನಿ ರಂಗದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮೊತ್ತ ಆಡಿಯೋ ರೈಟ್ಸ್ಗೆ ಸಿಗುತ್ತಿರೋದು ಇದೇ ಮೊದಲು. ಆದ್ರೆ ಕೆಡಿ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಇನ್ನು ಹೆಚ್ಚಿನ ರೇಟ್ ನಿರೀಕ್ಷೆ ಮಾಡುತ್ತಿದೆ. ಯಾಕಂದ್ರೆ ಈ ಸಿನಿಮಾದಲ್ಲಿ ಅದ್ಭುತ ಹಾಡುಗಳಿವೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ಲೇ ನೂರಾ ಫತೇಹಿ ಕೆಡಿ ಡಾನ್ಸ್ ಧಮಾಕದಲ್ಲಿ ಮಿಂಚುತ್ತಿರೋದು. ಹೀಗಾಗಿ ಕನ್ನಡದ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಕೆಡಿಗಾಗಿ ಎಂಥಾ ಟ್ಯೂನ್ ಹಾಕಿದ್ದಾರೆ ಅನ್ನೋ ನಿರೀಕ್ಷೆ ಈಗ ಸಂಗೀತ ಪ್ರೀಯರಲ್ಲಿ ಹುಟ್ಟಿಕೊಳ್ಳುತ್ತಿದೆ.

ಇದನ್ನೂ ವೀಕ್ಷಿಸಿ:  ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಜೊತೆ ಕಿಚ್ಚನ ಮಾತುಕಥೆ!ಅಭಿಮಾನಿ ಕೇಳಿದ ಪ್ರಶ್ನೆಗೆ ನಟನ ಉತ್ತರ ಹೀಗಿತ್ತು..?