ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಜೊತೆ ಕಿಚ್ಚನ ಮಾತುಕಥೆ!ಅಭಿಮಾನಿ ಕೇಳಿದ ಪ್ರಶ್ನೆಗೆ ನಟನ ಉತ್ತರ ಹೀಗಿತ್ತು..?

ಬಾದ್ ಷಾ ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾ ಫ್ರೀಕ್. ಇಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರೋ  ಸುದೀಪ್ ಆಗಾಗ ಪೋಸ್ಟ್ ಹಾಕುತ್ತಿರುತ್ತಾರೆ. ಒಮ್ಮೊಮ್ಮೆ ಫ್ಯಾನ್ಸ್ ಜೊತೆ ಇಲ್ಲೇ ಚರ್ಚೆ ಮಾಡ್ತಾರೆ. ಇದೀಗ ಅಭಿನಯ ಚಕ್ರವರ್ತಿ ಸುದೀಪ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫ್ಯಾನ್ಸ್ ಜೊತೆ ಆಸ್ಕ್ ಕಿಚ್ಚ ಸೆಷನ್ ನಡೆಸಿದ್ದಾರೆ. ಈ ಸೆಷನ್‌ನಲ್ಲಿ ಸುದೀಪ್‌ಗೆ ಮತ್ತೆ ಅದೊಂದು ಪ್ರಶ್ನೆ ಎದುರಾಗಿದೆ. 

First Published Jan 30, 2024, 10:09 AM IST | Last Updated Jan 30, 2024, 10:10 AM IST

ಸುದೀಪ್ ಹಾಗೂ ದರ್ಶನ್ ಇಬ್ಬರು ಸ್ಯಾಂಡಲ್‌ವುಡ್‌ನ(Sandalwood) ದಿಗ್ಗಜರು. ಒಂದ್ ಟೈಂನಲ್ಲಿ ಕುಚಿಕು ದೋಸ್ತಿಗಳು ಅಂತ ನಿಮ್ಗೆಲಾ ಗೊತ್ತು. ಆದ್ರೆ ಇಬ್ಬರ ಸ್ನೇಹ ಸರಿ ಇರಲಿಲ್ಲ ಅನ್ನೋದು ಅಷ್ಟೇ ಸತ್ಯ. ಹೀಗಾಗಿ ಅಭಿಮಾನಿಯೊಬ್ಬ(Fan) ಸರ್, "ನಿಮ್ಮ ಹಾಗೂ ದರ್ಶನ್(Darshan) ನಡುವಿನ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ಳುತ್ತೀರಾ? ಇನ್ನು ಎಷ್ಟು ಸಮಯ ತಗೋತ್ತೀರಾ?" ಎಂದು ಕೇಳಿದ್ದಾನೆ. ಇದಕ್ಕೆ ರಿಪ್ಲೇ ಮಾಡಿರುವ ಸುದೀಪ್, "ಸಮಸ್ಯೆ ಏನು ಅಂತ ಇಬ್ಬರೂ ಹುಡುಕುತ್ತಾ ಇದ್ದೀವಿ" ಅಂತ ನಗುವ ಎಮೋಜಿ ಹಾಕಿ ಉತ್ತರ ಕೊಟ್ಟಿದ್ದಾರೆ. ಸುದೀಪ್(Sudeep) ದರ್ಶನ್ ಮಧ್ಯೆ ಇದ್ದ ಬಿರುಕು ಈಗ ಸರಿ ಹೋಗಿದೆ, ಇಬ್ಬರ ಸ್ನೇಹ(Friendship) ಮತ್ತೆ ಟ್ರ್ಯಾಕ್‌ಗೆ ಬಂದಿದೆ ಅಂತ ಸುದ್ದಿ ಇದೆ. ಇದು ಸಾಧ್ಯವಾಗಿದ್ದು, ಸುಮಲತಾ ಅಂಬರೀಶ್ ಬರ್ತ್ಡೇ ಪಾರ್ಟಿಯಲ್ಲಿ. ಈ ಪಾರ್ಟಿಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ರು. ಆ ಬಳಿಕ ಕಿಚ್ಚನ ಹೆಸರು ಹೇಳಿ ಮಾತನಾಡಿದ್ರು ದರ್ಶನ್. ಸುದೀಪ್ ಕೂಡ ದರ್ಶನ್ ಹೆಸರನ್ನ ಹೇಳುತ್ತಿದ್ರು. ನಟ ಸುದೀಪ್ ದರ್ಶನ್ ನಟನೆಯ ಕಾಟೇರ ಸಿನಿಮಾ ಕೂಡ ನೋಡಿದ್ದಾರೆ. ಹೀಗಾಗಿ ಇಬ್ಬರ ಮಧ್ಯೆ ಇದ್ದ ಸ್ನೇಹ ಈಗ ಸರಿ ಹೋಗಿದೆ ಅಂತ ಹೇಳಲಾಗ್ತಿದೆ. ಈ ಮೂಲಕ ಹಳೇ ಸ್ನೇಹಿತರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳೋ ದಿನ ಹತ್ತಿರದಲ್ಲೇ ಇದೆ ಅನ್ನೋ ಸೂಚನೆಯಂತು ಸಿಗುತ್ತಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಲಲಿತಾ ಸಹಸ್ರನಾಮ ಪಠಿಸಿ

Video Top Stories