Asianet Suvarna News Asianet Suvarna News

Kabzaa: ಶಿವರಾತ್ರಿಗೆ ಬರಲಿದ್ದಾಳೆ 'ಕಬ್ಜ'ನ ರಾಣಿ: ನಾಳೆ ಶ್ರೇಯಾ ಶರಣ್ ಹಾಡು ರಿಲೀಸ್

ಕಬ್ಜ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನಾಯಕಿ ಶ್ರೇಯಾ ಶರಣ್‌ ಅವರ ಕಬ್ಜದ ಹಾಡು ಶಿವರಾತ್ರಿ ಹಬ್ಬದ ಪ್ರಯುಕ್ತ ನಾಳೆ ಬಿಡುಗಡೆ ಆಗುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಭಾರತದ ಬಾಕ್ಸಾಫೀಸ್ ದುನಿಯಾವನ್ನು ಕಬ್ಜ ಮಾಡೋದಕ್ಕೆ ರೆಡಿಯಾಗಿದ್ದಾರೆ. ಈಗಾಗ್ಲೆ ರಿಲೀಸ್ ಆಗಿರೋ ಟೀಸರ್ ಮತ್ತು ಟೈಟಲ್ ಹಾಡಿನಿಂದ 'ಕಬ್ಜ' ಖದರ್ ಎಂತಹದ್ದು ಅಂತ ನೋಡಿದ್ದೀರಾ. ಈಗ ಕಬ್ಜದ ರಾಣಿ ಶ್ರೇಯಾ ಶರಣ್ ಸರದಿ ಬಂದಿದ್ದು, ಶ್ರೇಯಾ ಅವರ ಕಬ್ಜದ ಹಾಡು ಇದೇ ತಿಂಗಳು 16ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗುತ್ತಿದೆ. ಚೆನ್ನೈನಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶ್ರೇಯಾ ಶರಣ್ ಶಿವರಾತ್ರಿ ಹಬ್ಬ ಮಾಡುತ್ತಿದ್ದಾರೆ. ಯಾಕಂದ್ರೆ ಚೆನ್ನೈನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿ ಕಬ್ಜ ಸಿನಿಮಾದ ಹಾಡು ಬಿಡುಗಡೆ ಮಾಡಲಾಗ್ತಿದೆ. ಈ ಕಾರ್ಯಕ್ರಮಕ್ಕೆ ವಿಶಾಲ್ ಸೇರಿದಂತೆ ತಮಿಳು ಚಿತ್ರರಂಗದ ಬಿಗ್ ಸ್ಟಾರ್ ಬರ್ತಾರೆ ಅಂತ ಹೇಳಲಾಗ್ತಿದೆ. 

Bheema: 'ಭೀಮಾ' ಸಿನಿಮಾ ನಾಯಕಿಯ ಫಸ್ಟ್ ಲುಕ್ ರಿವೀಲ್: ನಾಟಿ ಕ್ರಶ್ ನೋಡಿ ಫ್ಯಾನ್ಸ್ ಫಿದಾ

Video Top Stories