News Hour: ‘ಮೋದಿ ವಿಪಕ್ಷಗಳಿಗೆ ಮಾತ್ರವಲ್ಲ ಬಿಜೆಪಿಗೂ ಸರ್ವಾಧಿಕಾರಿ’: ಅರವಿಂದ್ ಕೇಜ್ರಿವಾಲ್
ಲೋಕಸಭಾ ಸಂಗ್ರಾಮಕ್ಕೆ ಕೇಜ್ರಿವಾಲ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನವೇ ದೆಹಲಿಯಲ್ಲಿ ಎರಡು ರೋಡ್ ಷೋ ನಡೆಸಿದ್ದಾರೆ. ಬಿಜೆಪಿಗರಿಗೂ ಮೋದಿ ಸರ್ವಾಧಿಕಾರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಮೇ.11): ದೆಹಲಿ ಅಕ್ರಮ ಮದ್ಯ ನೀತಿ ಹಗರಣದಲ್ಲಿ ನಿನ್ನೆಯಷ್ಟೇ ಜಾಮೀನು ಪಡೆದು ನಿನ್ನೆ ಜೈಲಿನಿಂದ ಹೊರಬಂದಿರೋ ಅರವಿಂದ್ ಕೇಜ್ರಿವಾಲ್, ಇಂದು ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ.. ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಕೇಜ್ರಿವಾಲ್ ಮೊದಲ ದಿನವೇ ಕೇಂದ್ರ ಸರ್ಕಾರದ ವಿರುದ್ಧ ತೊಡೆತಟ್ಟಿದ್ದಾರೆ.
ಇಂದು ಬೆಳಗ್ಗೆ ಪತ್ನಿ ಸುನೀತಾ ಜೊತೆ ಹನುಮಾನ್ ದೇಗುಲಕ್ಕೆ ತೆರಳಿದ ದೆಹಲಿ ಸಿಎಂ ಕೇಜ್ರಿವಾಲ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಪ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಅರವಿಂದ್ ಕೇಜ್ರಿವಾಲ್‌ಗೆ ಆಪ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
75 ವರ್ಷ ದಾಟಿದ್ರೂ, ಮೋದಿಯೇ ದೇಶದ ಪ್ರಧಾನಿ, ಕೇಜ್ರಿವಾಲ್‌ಗೆ ಉತ್ತರ ನೀಡಿದ ಅಮಿತ್ ಶಾ!
ಕಾರ್ಯಕರ್ತರ ಅಭಿಮಾನಕ್ಕೆ ಮನಸೋತ ದೆಹಲಿ ಸಿಎಂ, ಫ್ಲೈಯಿಂಗ್ ಕಿಸ್ ಕೊಡುವ ಮೂಲಕ ಧನ್ಯವಾದ ತಿಳಿಸಿದರು. ಈ ವೇಳೆ ಮಾತಾಡಿದ ಕೇಜ್ರಿವಾಲ್, ಸುಪ್ರೀಂ ಕೋರ್ಟ್ ನೀಡಿರುವ ಅವಕಾಶ ಬಳಸಿಕೊಳ್ತೀನಿ.. ದಿನಕ್ಕೆ 24 ಗಂಟೆ ಅಲ್ಲ.. ನಾನು 36 ಗಂಟೆ ಕೆಲಸ ಮಾಡ್ತೀನಿ ಎಂದಿದ್ದಾರೆ.