Asianet Suvarna News Asianet Suvarna News

ಕರಣ್‌ ಜೋಹಾರ್ ಶೋನಲ್ಲಿ ನಟ ಯಶ್- ರಿಷಬ್ ಶೆಟ್ಟಿ?

ರಿಷಬ್‌ ಶೆಟ್ಟಿ ಮತ್ತು ನಟ ಯಶ್‌  8ನೇ ಸೀಸನ್‌ನ ಕಾಫಿ ವಿತ್ ಕರಣ್‌ ಮೊದಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ರಿಷಬ್‌ ಶೆಟ್ಟಿ ಮತ್ತು ನಟ ಯಶ್‌  8ನೇ ಸೀಸನ್‌ನ ಕಾಫಿ ವಿತ್ ಕರಣ್‌ ಮೊದಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.ಟಾಕ್‌ ಶೋ ಕಾಫಿ ವಿತ್‌ ಕರಣ್‌ ಮೂಲಕವೇ ಪೇಮಸ್‌ ಆದ  ಕರಣ್‌ ಜೋಹಾರ್.‌ ಪ್ರತಿ ಸೀಸನ್‌ನಲ್ಲಿಯೂ ಏನಾದರೊಂದು ವಿಶೇಷತೆ ಹೊತ್ತು ಬರುತ್ತಾರೆ. ನೇರ ಮಾತು, ವಿವಾದ, ಪ್ರೀತಿ.. ಹೀಗೆ ಎಲ್ಲ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆಂದೇ ಈ ವೇದಿಕೆ ಹುಟ್ಟು ಹಾಕಿದ್ದಾರೆ ಕರಣ್‌. ಇನ್ನು  ಸೀಸನ್‌ 8ರ ತಯಾರಿ ಕೆಲಸಗಳು ನಡೆದಿದ್ದು,  ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇ ಇನ್ನೊಂದು ವಿಶೇಷತೆ ಏನೆಂದರೆ ಈ ಕಾಫಿ ವಿತ್ ಕರಣ್‌ ಶೋನಲ್ಲಿ ಸೌತ್‌ನ ಈ ಸ್ಟಾರ್‌ಗಳು ಮಾತ್ರವಲ್ಲ, ಅವರೊಂದಿಗೆ ಪತ್ನಿಯರಿಗೂ ಆಹ್ವಾನ ಹೋಗಿದೆಯಂತೆ. ಅಂದರೆ ಯಶ್‌ ಜತೆಗೆ ರಾಧಿಕಾ ಪಂಡಿತ್‌, ರಿಷಬ್‌ ಶೆಟ್ಟಿ ಜತೆಗೆ ಪ್ರಗತಿ ಶೆಟ್ಟಿ ಸಹ ಭಾಗವಹಿಸಲಿದ್ದಾರೆ.

Video Top Stories