ಜಿಮ್‌ನಲ್ಲಿ ನಟ ಚಿರಂಜೀವಿ ಫುಲ್ ವರ್ಕೌಟ್..! ಮತ್ತೆ ಫಿಟ್ AND ಫೈನ್ ಆದ ಮೆಗಾ ಸ್ಟಾರ್..!
ವರ್ಕೌಟ್ ವೀಡಿಯೋ ಹಂಚಿದ ಮೆಗಾಸ್ಟಾರ್!
ಮತ್ತೆ ಫಿಟ್AND ಫೈನ್ ಆದ ಚಿರಂಜೀವಿ..!
ಚಿರಂಜೀವಿ ಫಿಟ್ನೆಸ್ ಮಂತ್ರ ಏನು ಗೊತ್ತಾ.?
ನಮ್ ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಟ್ರಿಕ್ ಹೀರೋ ಎನರ್ಜಿಕಿಂಗ್ ಶಿವಣ್ಣನಿಗೆ(Shivaraj Kumar) ನಿಮ್ಗೆ ವಯಸ್ಸೇ ಆಗಲ್ವಾ ಅಣ್ಣಾ ಅಂತ ಅವರ ಫ್ಯಾನ್ಸ್ ಕೇಳ್ತಾನೆ ಇರ್ತಾರೆ. ಯಾಕಂದ್ರೆ ಶಿವಣ್ಣನಿಗೆ ಈಗ 61 ವರ್ಷ. ಈ ವಯಸ್ಸಲ್ಲು ಚಿರ ಯುವಕನಂತಿದ್ದಾರೆ ಶಿವಣ್ಣ. ಅದೇ ರೀತಿ ಟಾಲಿವುಡ್‌ನ ಮೆಗಾ ಸ್ಟಾರ್ ಕೂಡ ಚಿರ ಯುವಕನ ಹಾಗೇ ಕಾಣಿಸ್ತಾರೆ. 68ರ ಹರೆಯದಲ್ಲು ಚಿರಂಜೀವಿ(Chiranjeevi) ಕಟ್ಟು ಮಸ್ತು ದೇಹದ ಹ್ಯಾಡ್ಸಮ್ ಲುಕ್ನಲ್ಲೇ ಇದ್ದಾರೆ. ಇದಕ್ಕೆ ಕಾರಣ ಚಿರಂಜೀವಿಯ ಪ್ರಾಪರ್ ಡಯೆಟ್ ಹಾಗು ವರ್ಕೌಟ್. 68 ವರ್ಷದ ಚಿರಂಜೀವಿ ಚಿರ ಯುವಕ ಅನ್ನೋದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ. ಚಿರಂಜೀವಿ ಜಿಮ್ನಲ್ಲಿ(Jim) ಸಖತ್ ಆಗಿ ಬೆವರು ಹರಿಸಿದ್ದಾರೆ. ಚಿರಂಜೀವಿ ಚಿತ್ರರಂಗಕ್ಕೆ ಬಂದು 40 ವರ್ಷ ಆಗಿದೆ. ಆದ್ರೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಹೆಚ್ಚು ಕಮ್ಮಿ 10 ವರ್ಷ ಸಿನಿ ರಂಗದಿಂದ ದೂರಾಗಿದ್ರು. ಆಗ ಚಿರಂಜೀವಿ ದಪ್ಪಗೆ ಊದಿಕೊಂಡಿದ್ರು. ಮೆಗಾ ಸ್ಟಾರ್ ಚಿರಂಜೀವಿ ರಾಜಕೀಯದಿಂದ ಮತ್ತೆ ಸಿನಿ ರಂಗದ ಕಡೆ ಮುಖ ಮಾಡಿದ್ಮೇಲೆ ಮತ್ತೆ ಫಿಟ್ ಆ್ಯಂಡ್ ಫೈನ್ ಆಗಿದ್ದು, ಇನ್ನಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ. ಚಿರಂಜೀವಿಯ ಫಿಟ್‌ನೆಸ್ ಸೂತ್ರ ಏನ್ ಗೊತ್ತಾ..? ಹೆಚ್ಚು ನೀರು ಕುಡಿಯೋದು, ಎಲ್ಲಾ ತರದ ಊಟ ಮಾಡೋದು, ಜಿಮ್ನಲ್ಲಿ ಬೆವರು ಹರಿಸೋದು. ಅಷ್ಟೆ ಅಲ್ಲ ಮೆಂಟಲ್ ಹೆಲ್ತ್ಅನ್ನ ಸರಿಯಾಗಿ ಇಟ್ಕೊಳ್ಳೋದು. ಟೆಟ್ಷನ್ ಫ್ರೀ ಆಗಿರೋದು, ಸೆಲ್ಫ್ ಕಾನ್ಫಿಡೆನ್ಸ್ ಕಳೆದುಕೊಳ್ಳಲ್ಲ. ವೆಜಿಟೇರಿಯನ್ ಡಯೆಟ್ ಹೆಚ್ಚು ಮಾಡ್ತಾರೆ. ಹೀಗಾಗಿ ಚಿರಂಜೀವಿ 68ರ ಹರೆಯದಲ್ಲೂ ಚಿರ ಯುವಕನಂತೆ ಕಾಣುತ್ತಾರೆ. ಸದ್ಯ ‘ವಿಶ್ವಂಬರ’ ಸಿನಿಮಾದಲ್ಲಿ ಮೆಗಾ ಸ್ಟಾರ್ ನಟಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ವಿವಾದ..! ಸೋಶಿಯಲ್ ಮೀಡಿಯಾ ಟ್ರೆಂಡ್ ಆದ ಪವಿತ್ರಾ ಗೌಡ..!