Karnataka Business Award: SHRF ಯೋಗ ಬನದ ಮೆಡಿಕಲ್ ಡೈರೆಕ್ಟರ್ ಡಾ. ವಿವೇಕ್ ಉಡುಪಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್

Karnataka Business Award: 1986 ಜನವರಿ 14ರಂದು ಡಾ. ಚಂದ್ರೆಶೇಖರ ಉಡುಪ (ಡಾಕ್ಟರ್‌ಜೀ) ನೇತೃತ್ವದಲ್ಲಿ  ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೋದ್ಧಾರದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಡಿವೈನ್‌ ಪಾರ್ಕ್‌ ಸಂಸ್ಥೆ ಆರಂಭಗೊಂಡಿತು

First Published Jul 1, 2022, 11:18 PM IST | Last Updated Jul 2, 2022, 5:36 PM IST

ಬೆಂಗಳೂರು (ಜು. 30): ಏಷ್ಯಾನೆಟ್ ಸುವರ್ಣನ್ಯೂಸ್ (Asianet Suvarna News) ಹಾಗೂ ಕನ್ನಡಪ್ರಭ (Kannada Prabha)  ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ (Karnataka Business Award) ನೀಡಲಾಗುತ್ತಿದೆ. 

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.  ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಉಡುಪಿಯ ಸಾಲಿಗ್ರಾಮದ ಡಿವೈನ್‌ ಪಾರ್ಕ್‌ ಸಂಸ್ಥೆಯ ಅಂಗ ಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿವೇಕ್‌ ಉಡುಪ.

1986 ಜನವರಿ 14ರಂದು ಡಾ. ಚಂದ್ರೆಶೇಖರ ಉಡುಪ (ಡಾಕ್ಟರ್‌ಜೀ) ನೇತೃತ್ವದಲ್ಲಿ  ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರೋದ್ಧಾರದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಡಿವೈನ್‌ ಪಾರ್ಕ್‌ ಸಂಸ್ಥೆ ಆರಂಭಗೊಂಡಿತು.  ಡಿವೈನ್‌ ಪಾರ್ಕ್‌ ಹಾಗೂ SHRF ಯೋಗಬನ ಬೆಳೆದು ಬಂದ ಹಾದಿ ಬಗ್ಗೆ ಸ್ವತಃ   ಡಾ. ವಿವೇಕ್‌ ಉಡುಪ ವಿವರಿಸಿದ್ದಾರೆ ಕೇಳಿ 

ಇದನ್ನೂ ನೋಡಿ: ಎಂಡಿಬ್ಲ್ಯೂಬಿ ಗ್ರೂಪ್‌ನ ರಮೇಶ್‌ ಬಾಫ್ನಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್

Video Top Stories