Asianet Suvarna News Asianet Suvarna News

ಜೀವನದ ಪ್ರತಿ ಕ್ಷಣ ಎಂಜಾಯ್ ಮಾಡೋಕೆ ಈ ನಾಲ್ಕು ರಾಶಿಗಳಿಗೆ ಮಾತ್ರ ಸಾಧ್ಯ

ಕ್ಲಬ್ಬುಗಳಲ್ಲಿ ಸೇರುವುದು, ಪಾರ್ಟಿ ಮಾಡುವುದು ಕೆಲವರಿಗೆ ಭಾರೀ ಖುಷಿ. ಎಲ್ಲರೂ ಸಿಕ್ಕಾಗ ನಲಿಯುವುದು, ಅಂತಹ ಸನ್ನಿವೇಶಗಳನ್ನು ಮತ್ತೆ ಮತ್ತೆ ಸೃಷ್ಟಿಸಿಕೊಳ್ಳುವುದೂ ಅವರಿಗೆ ಇಷ್ಟ. ಆದರೆ, ಎಲ್ಲರಿಗೂ ಇದು ಸಾಧ್ಯವಿಲ್ಲ. ಏಕೆಂದರೆ, ಕೆಲವೇ ರಾಶಿಗಳ ಜನರು ಜೀವನವನ್ನು ಕ್ಷಣಕ್ಷಣವೂ ಅನುಭವಿಸುವ ಧೋರಣೆ ಹೊಂದಿರುತ್ತಾರೆ. 
 

Zodiac Signs Aries Taurus  Leo Sagittarius would be happy always
Author
Bangalore, First Published Jul 20, 2022, 5:47 PM IST | Last Updated Jul 20, 2022, 5:47 PM IST

ನಾಲ್ಕು ಜನ ಸೇರುವ ಜಾಗ ಎಂದರೆ ಕೆಲವರಿಗೆ ಬೇಸರ. ವಾರಪೂರ್ತಿ ಕೆಲಸ ಮಾಡಿದ ಬಳಿಕ, ವೀಕೆಂಡ್ ನಲ್ಲಿ ಮನೆಯಲ್ಲೇ ಆರಾಮಾಗಿರಬೇಕು ಎನ್ನುವ ಮನಸ್ಥಿತಿ ಅವರದ್ದು. ಆದರೆ, ಇನ್ನು ಕೆಲವರು ಹಾಗಲ್ಲ. ಅದೆಷ್ಟೇ ಸುಸ್ತಾಗಿರಲಿ, ವಾರಪೂರ್ತಿ ದುಡಿದು ಹೈರಾಣಾಗಿರಲಿ, ವಾರಾಂತ್ಯಗಳಲ್ಲಿ ಎಲ್ಲಾದರೂ ಹೊರಗೆ ಹೋಗಲು, ಜನರೊಂದಿಗೆ ಸೇರಲು, ಪಾರ್ಟಿ ಮಾಡಲು, ಸದಾ ಸಿದ್ಧರಾಗಿರುತ್ತಾರೆ. ಅಷ್ಟೇ ಏಕೆ? ಪ್ರತಿದಿನವೂ ಅವರದ್ದು ಅಷ್ಟೇ ಉತ್ಸಾಹ. ದಿನವೂ ಬೆಳಗ್ಗೆ ಏಳುವಾಗ ದೊಡ್ಡದೊಂದು ನಗುವಿನ ಮೂಲಕ ಏಳುವುದು, ದಿನವನ್ನು ಉತ್ಸಾಹದಿಂದ ಬರಮಾಡಿಕೊಳ್ಳುವುದು, ಖುಷಿಯಾಗಿರುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವೇ ಕೆಲವು ಜನರಿಗೆ ಅಂಥದ್ದೊಂದು ಅದೃಷ್ಟ ಒಲಿದಿರುತ್ತದೆ. ಅಷ್ಟಕ್ಕೂ ಅದು ಅದೃಷ್ಟವಲ್ಲ. ಅವರ ರಾಶಿಫಲ ಹಾಗಿರುತ್ತದೆ. ಹೌದು, ಆಯಾ ರಾಶಿಗಳನ್ನು ಆಧರಿಸಿ ಇಂತಹ ಮನೋಸ್ಥಿತಿ ರೂಪುಗೊಂಡಿರುತ್ತದೆ. ಇವರು ಸಾಕಷ್ಟು ಧನಾತ್ಮಕ ದೃಷ್ಟಿಕೋನ ಹೊಂದಿರುತ್ತಾರೆ. ತಮ್ಮ ಹಾದಿಯಲ್ಲಿರುವ ಎಲ್ಲವನ್ನೂ ಅನುಭವಿಸುವ ಅದಮ್ಯ ನಿಲುವು ಹೊಂದಿರುತ್ತಾರೆ. ಜೀವನದ ಪ್ರತಿಯೊಂದು ಕ್ಷಣವನ್ನೂ ಪೂರ್ತಿಯಾಗಿ ಅನುಭವಿಸಿಬಿಡಬೇಕು ಎನ್ನುವುದು ಇವರ ನಿಲುವು. ಹೀಗಾಗಿ, ಜನರೊಂದಿಗೆ ಬರೆಯಲು ಹಿಂದೇಟು ಹಾಕುವುದಿಲ್ಲ. ಸ್ನೇಹಿತರ ಜತೆಗೂಡಿ ನಲಿಯಲು, ಪಾರ್ಟಿಗಳಲ್ಲಿ ಭಾಗವಹಿಸಲು ಸದಾ ಸಿದ್ಧರಾಗಿರುತ್ತಾರೆ. ಅಂತಹ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.

•    ಮೇಷ (Aries)
ಮೇಷ ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು (Freedom) ಎಂಜಾಯ್ (Enjoy) ಮಾಡುತ್ತಾರೆ. ಇರುವುದೊಂದೇ ಜೀವನ (Life), ಅದನ್ನು ಖುಷಿಯಾಗಿ ಕಳೆಯಬೇಕು ಎನ್ನುವುದು ಇವರ ಧೋರಣೆ. ಹೀಗಾಗಿ, ಜನರೊಂದಿಗೆ ಬೆರೆಯಲು, ಕ್ಲಬ್ಬು(Club)ಗಳಲ್ಲಿ ಹೆಜ್ಜೆ ಹಾಕಲು, ನರ್ತಿಸಲು ಸದಾ ಸಿದ್ಧರಾಗಿರುತ್ತಾರೆ. ಈ ರಾಶಿಗೆ ಸೇರಿದ ಜನರಿಗೆ ಧೈರ್ಯ (Bold) ಹೆಚ್ಚು. ಸಾಹಸಮಯಿ ಆಗಿದ್ದು, ಉತ್ಸಾಹಿ ಆಗಿರುತ್ತಾರೆ. ಹೊಸ ವಿಚಾರಗಳಿಗೆ ಬೇಗ ತೆರೆದುಕೊಳ್ಳುತ್ತಾರೆ. 

•    ವೃಷಭ (Taurus)
ವೃಷಭ ರಾಶಿಯವರು ಆಶಾವಾದಿಗಳು (Optimistic). ಜೀವನದ ಪ್ರತಿ ಅಂಶವನ್ನೂ ಸಾಧ್ಯತೆಯ (Possibility) ದೃಷ್ಟಿಕೋನದೊಂದಿಗೇ ನೋಡುತ್ತಾರೆ. ನಕಾರಾತ್ಮಕ (Negative) ಸನ್ನಿವೇಶಗಳನ್ನು ಎದುರಿಸುವುದು ಅವರಿಗೆ ಇಷ್ಟವಾಗುವುದಿಲ್ಲ. ಹಾಗೆಯೇ, ಸ್ನೇಹಿತರೊಂದಿಗೆ ಸೇರುವ, ಪಾರ್ಟಿ (Party) ಮಾಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಈ ರಾಶಿಯ ಜನ ಹೊರಗೆ ಹೋದಾಗ ತಮ್ಮಷ್ಟಕ್ಕೆ ತಾವು ಭಾರೀ ಎಂಜಾಯ್ ಮಾಡುತ್ತಾರೆ. ಬೇರೆ ಯಾರೂ ಇವರಷ್ಟು ಎಂಜಾಯ್ ಮಾಡುವುದು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಬಾಹ್ಯ ಪ್ರಪಂಚದೊಂದಿಗೆ ಖುಷಿಪಡುಸುವುದು ಇವರಿಂದ ಮಾತ್ರ ಸಾಧ್ಯ. ವೃಷಭ ರಾಶಿಯವರ ಜತೆಗೆ ಹೊರಾಂಗಣ ಪ್ರವಾಸಕ್ಕೆ ಹೋದರೆ ಖುಷಿಯ ಅನುಭವ ಗ್ಯಾರೆಂಟಿ. 

ಈ ರಾಶಿಯವರು ಮನೆಯಲ್ಲಿ ನೋಡಿದವರನ್ನೇ ಮದುವೆಯಾಗೋದು

•    ಸಿಂಹ (Leo)
ಸಿಂಹ ರಾಶಿಯವರಿಗೆ ಯಾವುದೇ ಸನ್ನಿವೇಶವನ್ನಾದರೂ ಪಾರ್ಟಿ ಸಮಯವನ್ನಾಗಿ ಮಾಡಿಕೊಳ್ಳುವ ಕಲೆ ಗೊತ್ತು. ಪ್ರತಿ ಕ್ಷಣವನ್ನೂ ವಿನೋದವಾಗಿ ಕಳೆಯುವುದು, ನಗುನಗುತ್ತ ಸಾಗುವುದು ಇವರಿಗೆ ಇಷ್ಟ. ತಮ್ಮೊಂದಿಗೆ ಇರುವ ಜನ ತಮ್ಮ ನೋವನ್ನು ಮರೆತು ನಗುವಂತೆ ಮಾಡುತ್ತಾರೆ. ವಿನೋದದ (Fun) ಸ್ವಭಾವದಿಂದ ಇತರರನ್ನು ನಗಿಸುತ್ತಾರೆ. ಬದುಕಿನ ಧನಾತ್ಮಕ ಅಂಶವನ್ನು ಮಾತ್ರ ಪರಿಗಣಿಸುವ ಅದ್ಭುತ ಸಿದ್ಧಿ ಇವರಿಗೆ ಒಲಿದಿರುತ್ತದೆ. 

•    ಧನು (Sagittarius)
ಧನು ರಾಶಿಯವರದ್ದು ಸದಾಕಾಲ ಧನಾತ್ಮಕ ಮನೋಭಾವ ಮತ್ತು ಭರವಸೆಯ ನೋಟ. ಯಾವತ್ತೂ ಖುಷಿಯಾಗಿರುತ್ತಾರೆ. ಪ್ರತಿಕ್ಷಣವನ್ನೂ ಜೀವಿಸಬೇಕು ಎನ್ನುವ ತುಡಿತ ಹೊಂದಿರುತ್ತಾರೆ. ಸ್ವಯಂ ತೃಪ್ತಿ (Satisfaction), ಉತ್ಸಾಹ (Enthusiasm), ಸ್ಫೂರ್ತಿ (Motivation) ಯಿಂದ ಕೂಡಿರುವ ಇವರು ಪ್ರತಿದಿನವೂ ಏನಾದರೂ ವಿಶೇಷ ಕೆಲಸ ಮಾಡಬೇಕು, ಸಾಹಸಮಯ ಕೆಲಸದಲ್ಲಿ ಭಾಗಿಯಾಗಬೇಕು ಎನ್ನುವುದನ್ನು ದೃಢವಾಗಿ ನಂಬುತ್ತಾರೆ. ಹೊಸ ವಿಚಾರಗಳು ಇವರಲ್ಲಿ ಇನ್ನಷ್ಟು ಉತ್ಸಾಹ ತುಂಬುತ್ತವೆ. ಹಾಸ್ಯಮಯ (Humorous) ಮಾತುಗಳ ಮೂಲಕ ಪ್ರತಿದಿನವನ್ನು ಉತ್ಸಾಹದಿಂದ ಕಳೆಯಲು ಮುಂದಾಗುತ್ತಾರೆ. 

ದುಡ್ಡೆಂದರೆ ಬಾಯಿ ಬಿಡೋ ರಾಶಿಗಳು ಇವು

Latest Videos
Follow Us:
Download App:
  • android
  • ios