Asianet Suvarna News Asianet Suvarna News

ನೀವು ಮನಿ ಪ್ಲಾಂಟ್ ನೆಡಬೇಕೇ..ಹಾಗಿದ್ದರೆ ಈ ತಪ್ಪು ಮಾಡಬೇಡಿ..!!!

ಮನೆಯಲ್ಲಿ ಸದಾ ಲಕ್ಷ್ಮೀ ದೇವಿ ನೆಲೆಸಿರಬೇಕು ಎಂಬುದು ಎಲ್ಲರ ಬಯಕೆ. ಮನೆಯಲ್ಲಿ ಯಾವಾಗಲೂ ಸಮೃದ್ಧಿಯನ್ನು ಇರಬೇಕೆಂಬ ನಿಟ್ಟಿನಲ್ಲಿ ಹಲವರು ಮೊನಿ ಪ್ಲಾಂಟ್ (money plant) ನೆಡುತ್ತಾರೆ. ಆ ಮೂಲಕ ಆರ್ಥಿಕ ಪ್ರಗತಿ ಕಾಣುತ್ತಾರೆ. ಆದರೆ, ಕೆಲವರು ನೆಟ್ಟರೆ ಯಾವುದೇ ಪರಿಣಾಮ ಬೀರದು ಎನ್ನುತ್ತಾರೆ. ಇದಕ್ಕೋಸ್ಕರ ನೆಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಆ ತಪ್ಪುಗಳು ಯಾವುವು ಎಂಬುದರ ಬಗ್ಗೆ ನೋಡೋಣ ಬನ್ನಿ.

whould you plant a money plant, don't make these mistakes
Author
Bangalore, First Published Nov 3, 2021, 5:25 PM IST

ದುಡ್ಡು ಯಾರಿಗೆ ಬೇಡ ಹೇಳಿ,,, ದುಡ್ಡಿದ್ದೋನೇ ದೊಡ್ಡಪ್ಪ ಅನ್ನೋ ಈ ಕಾಲದಲ್ಲಿ ಎಲ್ರಿಗೂ ದುಡ್ಡು ಬೇಕು. ಈ ನಿಟ್ಟಿನಲ್ಲಿ ಶ್ರಮ ಹಾಕಿ ದುಡೀತಾರೆ. ಆದ್ರೂ ದುಡ್ ನಿಲ್ಲೋಲ್ಲ. ಹಾಗಾದ್ರೆ ಇದಕ್ಕೆ ಪರಿಹಾರವೇ ಇಲ್ಲವೇ ಅಂತ ನೋಡಿದ್ರೆ ಖಂಡಿತಾ ಇದೆ. ಮನಿ ಪ್ಲಾಂಟ್ (money plant) ಅನ್ನು ಮನೆಯಲ್ಲಿ ನೆಟ್ಟರೆ ಆರ್ಥಿಕ (Economy) ಪ್ರಗತಿ ಆಗಲಿದೆ. ಮನೆ ಅಥವಾ ಕಚೇರಿಗಳಲ್ಲಿ ಎಲ್ಲಿ ಬೇಕಿದ್ದರೂ ಇದನ್ನು ನೆಡಬಹುದಾಗಿದ್ದು, ಇದನ್ನು ನೆಡೋಕೆ, ಆರೈಕೆ ಮಾಡೋಕೆ ತೀರಾ ಕಷ್ಟಪಡಬೇಕಿಲ್ಲ. ಹೂವಿನ ಪಾಟ್, ಬಾಟಲಿಗಳಲ್ಲೂ ಇದನ್ನು ನೆಡಬಹುದಾಗಿದೆ. ಹಾಗಾಗಿ ಸುಲಭವಾಗಿ ಮನೆಯಲ್ಲಿ ಬೆಳೆಸಬಹುದಾಗಿದೆ.
ಹಾಗಾದರೆ ಮೊನಿ ಪ್ಲಾಂಟ್ ನೆಟ್ಟ ಕೂಡಲೇ ದುಡ್ಡು ಬರಲಿದೆಯಾ..? ಮನೆಯ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತಾ..? ಖಂಡಿತಾ ಇಲ್ಲ. ಮನಿ ಪ್ಲಾಂಟ್ ಅನ್ನು ವಾಸ್ತು ಪ್ರಕಾರ ಕ್ರಮಬದ್ಧವಾಗಿ ನೆಟ್ಟರಷ್ಟೇ ಒಳ್ಳೇದಾಗುತ್ತದೆ. ಒಳ್ಳೇ ಸುದ್ದೀನೂ ಸಿಗತ್ತೆ.  ಹೀಗಾಗಿ ಮೊನಿ ಪ್ಲಾಂಟ್ ನೆಡುವಾಗ ಕೆಲವು ವಿಷಯಗಳನ್ನು ಪರಿಗಣಿಸಲೇಬೇಕು. ಈ ತಪ್ಪುಗಳನ್ನು ಖಂಡಿತ ಮಾಡ್ಬೇಡಿ. ಇಲ್ಲದಿದ್ದರೆ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಈ ಅಂಶಗಳು ಯಾವುವು ಎಂಬುದರ ಬಗ್ಗೆ ನೋಡೋಣ ಬನ್ನಿ.... 

ನೆಲಕ್ಕೆ (Ground) ತಾಕದಂತೆ ನೋಡಿಕೊಳ್ಳಿ...
ಈ ವಿಷಯ ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಗಿಡ ಎಂದ ಮೇಲೆ ನೆಲಕ್ಕೆ ತಾಕಿಕೊಂಡೇ ಇರುತ್ತದೆ. ಇದೂ ತಾಕಿದರೆ ಏನು ಎಂಬ ಪ್ರಶ್ನೆ ಹಾಕುತ್ತಾರೆ. ಆದರೆ, ಮನಿ ಪ್ಲಾಂಟ್ ವಿಷಯದಲ್ಲಿ ಹಾಗಲ್ಲವಂತೆ. ಇದು ವೇಗವಾಗಿ ಬೆಳೆಯುವುದರಿಂದ (Grows rapidly) ನೆಲಕ್ಕೆ ಮುಟ್ಟುವ ಸಾಧ್ಯತೆ ಹೆಚ್ಚು. ಹಾಗಾಗಿ ಆಗಾಗ ಗಮನಿಸುತ್ತಿರಿ, ನೆಲಕ್ಕೆ ಮುಟ್ಟದಂತೆ (not touch) ನೋಡಿಕೊಳ್ಳಿ. ವಾಸ್ತುವಿನ ಅನುಸಾರ ಬೆಳೆಯುವ ಬಳ್ಳಿಗಳು ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತ. ಮನಿ ಪ್ಲಾಂಟ್ ಅನ್ನು ಲಕ್ಷ್ಮೀ ದೇವಿಯ (Goddess Lakshmi) ಒಂದು ರೂಪವೆಂಬ ನಂಬಿಕೆ ಇದೆ. ಈ ನೆಲವನ್ನು ಸ್ಪರ್ಶಿಸಲು ಬಿಡಬಾರದು.

ಇದನ್ನು ಓದಿ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಈ ಹುಡುಗಿಯರು ಪತಿಯನ್ನು ಗೊಂಬೆಯಂತೆ ಆಡಿಸ್ತಾರಂತೆ..!!!

ಒಣಗಲು (Dry) ಬಿಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಮೊನಿ ಪ್ಲಾಂಟ್ ಒಣಗಿದರೆ ದುರದೃಷ್ಟದ ಸಂಕೇತ (Symbol of misfortune). ಇದು ಆ ಮನೆಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ (Affect) ಬೀರುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ನಿಯಮಿತವಾಗಿ ಗಿಡಕ್ಕೆ ನೀರು (Water) ಹಾಕುತ್ತಿರಬೇಕು. ಯಾವುದೇ ಕಾರಣಕ್ಕೂ ಎಲೆಗಳು (leaves) ಒಣಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಎಲೆಗಳು ಒಣಗುತ್ತಿದ್ದರೆ ಕತ್ತರಿಸಿ ತೆಗೆಯಬೇಕು. (cut and remove).

ಬೇರೆಯವರಿಗೆ ಮನಿ ಪ್ಲಾಂಟ್ ಕೊಡಬೇಡಿ (Don’t give)
ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಅನ್ನು ಎಂದಿಗೂ ಬೇರೆಯವರಿಗೆ ನೀಡಬಾರದು. ಇನ್ನೊಬ್ಬರಿಗೆ ನೀಡಿದರೆ ಶುಕ್ರ ಗ್ರಹದ (Venus) ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಶುಕ್ರ ಸಮೃದ್ಧಿ ಮತ್ತು ಯೋಗಕ್ಷೇಮದ ಸಂಕೇತವಾಗಿದ್ದು, ಮೊನಿ ಪ್ಲಾಂಟ್ ಅನ್ನು ಸಮೃದ್ಧವಾಗಿ ಬೆಳೆಸಿದರೆ ಆಶೀರ್ವಾದ (Blessing) ದೊರೆಯಲಿದೆ. 

ಮನೆಯ (Home) ಹೊರಗೆ ಇಡಬೇಡಿ / ಬೆಳೆಯಬೇಡಿ
ಮೊನಿ ಪ್ಲಾಂಟ್ ಅನ್ನು ಮನೆಯ ಹೊರಗೆ ಬೆಳೆಯಬೇಡಿ, ಇಲ್ಲವೇ ಇಡಬೇಡಿ. ಈ ಸಸ್ಯಕ್ಕೆ ಹೆಚ್ಚಿನ ಸೂರ್ಯನ ಬೆಳಕು (sunlight) ಬೇಕಿಲ್ಲ. ಹೀಗಾಗಿ ಇದು ಒಳಾಂಗಣದಲ್ಲಿ ಇದ್ದರೆ ಒಳಿತು. ವಾಸ್ತು ಪ್ರಕಾರ ಮನೆಯ ಹೊರಗೆ ಈ ಪ್ಲಾಂಟ್ ಅನ್ನು ಬೆಳೆಯುವುದು ಶುಭವಲ್ಲ (auspicious). ಹೊರಗೆ ನೆಟ್ಟರೆ ಬಿಸಿಲಿಗೆ ಬೇಗ ಒಣಗುತ್ತದೆ. ಅಲ್ಲದೆ, ಬೆಳವಣಿಗೆಯೂ ಕುಂಠಿತವಾಗುತ್ತದೆ. ಹೀಗಾದಲ್ಲಿ ಅಶುಭವುಂಟಾಗಿ ಆರ್ಥಿಕ ಕೊರತೆಗೆ (Financial scarcity) ಕಾರಣವಾಗುತ್ತದೆ.

ಇದನ್ನು ಓದಿ: ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ

ದಿಕ್ಕು ನೋಡಿ ನೆಡಿ, ಈ ದಿಕ್ಕಿನಲ್ಲಿ (Direction) ನೆಡಲೇ ಬೇಡಿ (Don’t plant)
ಮೊನಿ ಪ್ಲಾಂಟ್ ನೆಡಬೇಕಾದರೆ ದಿಕ್ಕು ಪ್ರಮುಖ ಪಾತ್ರ ವಹಿಸುತ್ತದೆ. ಎಂದೂ ಸಹ ಈಶಾನ್ಯ (North-East) ದಿಕ್ಕಿನಲ್ಲಿ ನೆಡಲೇಬೇಡಿ. ಒಂದು ವೇಳೆ ಈ ದಿಕ್ಕಿನಲ್ಲಿ ನೆಟ್ಟರೆ ಆರ್ಥಿಕ ನಷ್ಟ ಆಗಲಿದೆ ಎಂದು ಹೇಳಲಾಗಿದೆ. ಜೊತೆಗೆ ಮನೆಯಲ್ಲಿ ಸಹ ನಕಾರಾತ್ಮಕತೆ (Negativity) ಹೆಚ್ಚುತ್ತದೆ. ಮೊನಿ ಪ್ಲಾಂಟ್ ಅನ್ನು ಸದಾ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇಲ್ಲಿಟ್ಟರೆ ಆರೋಗ್ಯ (Health) ಹಾಗೂ ಸಮೃದ್ಧಿ ನೆಲೆಸುತ್ತದೆ. ಅಲ್ಲದೆ, ವಿಘ್ನನಿವಾರಕ ಗಣೇಶನ ಆಶೀರ್ವಾದವೂ ಲಭ್ಯವಾಗಲಿದೆ. 

ಇದನ್ನು ಓದಿ: ಈ ರಾಶಿಯವರಲ್ಲೇ ವಿಚ್ಚೇದನ ಹೆಚ್ಚು: ಅವು ಯಾವ್ಯಾವ ರಾಶಿ ಗೊತ್ತಾ..?

 

whould you plant a money plant, don't make these mistakes


 

Follow Us:
Download App:
  • android
  • ios