Asianet Suvarna News Asianet Suvarna News

ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

ಲಾಕ್‍ಡೌನ್ ಪರಿಣಾಮವಾಗಿ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದ್ರೆ ಮನೆಯಲ್ಲಿ ಎಲ್ಲಿ ಕೂತ್ರೆ ಯಾವುದೇ ಅಡೆತಡೆಯಿಲ್ಲದೆ ಕೆಲ್ಸ ಮಾಡ್ಬಹುದು ಎಂಬುದೇ ದೊಡ್ಡ ಯಕ್ಷಪ್ರಶ್ನೆ.ವಾಸ್ತುಶಾಸ್ತ್ರದಲ್ಲಿ ಈ ಪ್ರಶ್ನೆಗೆ ಉತ್ತರವಿದೆ.

Which place is good for office work at home as per vaastu
Author
Bangalore, First Published Apr 28, 2020, 6:15 PM IST

ಲಾಕ್‍ಡೌನ್ ಪರಿಣಾಮವಾಗಿ ಈಗ ಎಲ್ಲರೂ ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮನೆಯಿಂದಲೇ ಕೆಲಸ ಮಾಡೋದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಮನೆಯಲ್ಲಿ ಎಲ್ಲಿ ಕೂತು ಕೆಲಸ ಮಾಡೋದು ಬೆಸ್ಟ್? ಡೈನಿಂಗ್ ರೂಮ್, ಬೆಡ್‍ರೂಮ್, ಹಾಲ್ ಹೀಗೆ ಯಾವ ಪ್ಲೇಸ್ ಆಗಬಹುದು ಎಂಬ ಬಗ್ಗೆ ಯೋಚಿಸಿಯೇ ಒಂದು ಸ್ಥಳ ಆಯ್ದುಕೊಳ್ಳುತ್ತೇವೆ.ಆದ್ರೆ ಕೆಲಸ ಪ್ರಾರಂಭಿಸಿದ ತಕ್ಷಣ ಈ ಸ್ಥಳದಲ್ಲಿ ಸರಿಯಾಗಿ ಕೆಲ್ಸ ಮಾಡೋಕೆ ಆಗುತ್ತಿಲ್ಲ, ತುಂಬಾ ಡಿಸ್ಟರ್ಬೆನ್ಸ್ ಎಂಬ ಭಾವನೆ ಮೂಡುತ್ತೆ. ಮರುದಿನ ಮತ್ತೆ ಬೇರೆ ಸ್ಥಳದಲ್ಲಿ ಕೂತು ಕೆಲ್ಸ ಮಾಡಲು ಪ್ರಾರಂಭಿಸುತ್ತೀರಿ, ಆದ್ರೆ ಆ ಸ್ಥಳ ಕೂಡ ಸರಿಬರಲ್ಲ. ಹೀಗೆ ಮನೆಯ ಮೂಲೆ ಮೂಲೆಗಳಲ್ಲಿ ಕುಳಿತು ಕೆಲಸ ಮಾಡಿ, ಅಂತೂ ಇಂತೂ ಒಂದು ಸ್ಥಳವನ್ನು ಫಿಕ್ಸ್ ಮಾಡುವಾಗ ವಾರವೇ ಕಳೆಯುತ್ತೆ. ಆದ್ರೆ ಕೆಲವೊಂದು ಸ್ಥಳದಲ್ಲಿ ಕೂತ್ರೆ ಕೆಲಸ ಮಾಡೋಕೆ ಇಂಟ್ರೆಸ್ಟ್ ಬರೋಲ್ಲ, ನಾನಾ ಅಡ್ಡಿಗಳು. ಇದೇ ಕಾರಣಕ್ಕೆ ಇಲ್ಲೇನೋ ವಾಸ್ತು ದೋಷವಿದೆ ಎಂದು ನೀವು ನಿಮ್ಮ ಮನೆ ಸದಸ್ಯರ ಜೊತೆ ಜೋಕ್ ಮಾಡಿಕೊಂಡು ನಕ್ಕಿರುತ್ತೀರಿ ಕೂಡ. ಆದ್ರೆ ಕೆಲವು ಸ್ಥಳಗಳಲ್ಲಿ ಕೆಲಸಕ್ಕೆ ನಿಜವಾಗಲೂ ವಾಸ್ತುದೋಷ ಇರುತ್ತೆ ಎನ್ನುತ್ತಾರೆ ವಾಸ್ತು ತಜ್ಞರು. ಹಾಗಾಗಿ ಮನೆಯನ್ನೇ ಆಫೀಸ್ ಮಾಡಿಕೊಂಡು ಕೆಲಸ ಮಾಡುವಾಗ ಒಂದಿಷ್ಟು ವಾಸ್ತು ನಿಯಮಗಳನ್ನು ಅರಿತುಕೊಂಡ್ರೆ ಯಾವುದೇ ಕಿರಿಕಿರಿ ಇರುವುದಿಲ್ಲ.

ಸೋಂಕು ಯಾವ ದಿಕ್ಕಿನಿಂದ ಪ್ರವೇಶಿಸುತ್ತೆ? ನಿಮ್ಮ ಮನೆ ಸೇಫಾ?

-ಬಹುತೇಕರು ಮಾಡುವ ದೊಡ್ಡ ತಪ್ಪೆಂದ್ರೆ ಆಫೀಸ್ ಹಾಗೂ ಮನೆ ಎರಡೂ ಕಡೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸೋದು. ಹೀಗೆ ಮಾಡೋದ್ರಿಂದ ಆಫೀಸ್ ಕೆಲಸವನ್ನು ನಿಗದಿತ ಅವಧಿಗೆ ಪೂರ್ಣಗೊಳಿಸಲು ಸಾಧ್ಯವಾಗೋದಿಲ್ಲ. ಆದಕಾರಣ ಆಫೀಸ್ ಹಾಗೂ ಮನೆಕೆಲಸಗಳ ನಡುವೆ ನಿಮಗೆ ನೀವೇ ಲಕ್ಷಣ ರೇಖೆ ಎಳೆದುಕೊಳ್ಳಿ. ಅಂದರೆ ಮನೆಯಲ್ಲಿ ಯಾರೂ ನಿಮ್ಮ ಕೆಲಸಕ್ಕೆ ಅಡ್ಡಿಯುಂಟು ಮಾಡದಂತಹ ಸ್ಥಳವನ್ನು ಆರಿಸಿಕೊಳ್ಳಿ.
-ಮನೆಯ ಉತ್ತರ ಭಾಗದಲ್ಲಿರುವ ಪ್ರದೇಶ ಕೆಲಸ ಅಥವಾ ಉದ್ಯೋಗಕ್ಕೆ ಸೂಕ್ತವಾದ ಸ್ಥಳ. ನೀವು ಭವಿಷ್ಯದಲ್ಲಿ ಸಾಧಿಸಲು ಬಯಸುವ ಗುರಿ ಅಥವಾ ಕನಸಿಗೆ ಸಂಬಂಧಿಸಿದ ಫೋಟೋವನ್ನು ಆ ಭಾಗದಲ್ಲಿ ತೂಗು ಹಾಕಿ.
-ಮನೆಯಲ್ಲಿ ನೀವು ಕುಳಿತು ಕೆಲಸ ಮಾಡುವ ಸ್ಥಳದಲ್ಲಿರುವ ಬಣ್ಣಗಳು, ಚಿತ್ರಗಳು ಹಾಗೂ ಮೂರ್ತಿಗಳು ಖುಷಿ ಕೊಡುವ ಜೊತೆಗೆ ನಿಮ್ಮಲ್ಲಿನ ಸೃಜನಶೀಲತೆಯನ್ನು ಪ್ರೇರೇಪಿಸುತ್ತವೆ.
-ಆಗ್ನೇಯ ಭಾಗ ಬೆಂಕಿಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಈ ಭಾಗದಲ್ಲಿ ಕಂಪ್ಯೂಟರ್, ಲೈಟ್ಸ್ ಅಥವಾ ಲ್ಯಾಂಪ್‍ಗಳನ್ನಿಡಿ. ನೀರನ್ನು ಹೊಂದಿರುವ ವಸ್ತುಗಳು ಉದಾಹರಣೆಗೆ ಫೌಂಟೇನ್, ಅಕ್ವೇರಿಯಂ ಅಥವಾ ಜಲಪಾತದ ಚಿತ್ರಗಳನ್ನು ಆಗ್ನೇಯ ಮೂಲೆಯಲ್ಲಿಡಬಾರದು. ಇವು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಲ್ಲವು. ಆದಕಾರಣ ನೀವು ಆಗ್ನೇಯ ಮೂಲೆಯನ್ನು ಕೆಲಸಕ್ಕೆ ಆರಿಸಿಕೊಂಡರೆ ಈ ಎಲ್ಲ ವಿಷಯಗಳ ಬಗ್ಗೆ ಗಮನ ನೀಡಿ.

ಗೋಡೆ ಅಂದ ಹೆಚ್ಚಿಸುವ ಗಡಿಯಾರಕ್ಕೂ ಇದೆ ವಾಸ್ತು ನಂಟು!

-ನೀವು ಕೆಲಸ ಮಾಡುವಾಗ ಡೆಸ್ಕ್ ಅಥವಾ ಟೇಬಲ್ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿಯಿಡಿ.
-ನೀವು ಕೆಲಸಕ್ಕೆ ಕುಳಿತುಕೊಳ್ಳುವ ಸ್ಥಳದ ಸುತ್ತಮುತ್ತಲಿನ ವಸ್ತುಗಳೆಲ್ಲವೂ ಅವುಗಳ ಸ್ಥಾನದಲ್ಲಿದ್ದು, ಆ ಪ್ರದೇಶ ನೀಟಾಗಿರಲಿ. ಇದ್ರಿಂದ ಕೆಲಸ ಮಾಡಲು ಶಕ್ತಿ, ಉತ್ಸಾಹ ಹೆಚ್ಚುತ್ತೆ. 
-ಮನೆಯ ಮಧ್ಯಭಾಗ ಅಥವಾ ಬ್ರಹ್ಮಸ್ಥಾನವನ್ನು ಖಾಲಿಯಿಡಬೇಕು. ಇಲ್ಲಿ ಕುಳಿತು ಆಫೀಸ್ ಕೆಲಸ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ಮನೆಯ ಮಧ್ಯಭಾಗದಲ್ಲಿ ಕುಳಿತು ಕೆಲಸ ಮಾಡುತ್ತೇನೆ ಅಂದ್ರೆ ಅಲ್ಲಿ ಹತ್ತಾರು ಅಡ್ಡಿಗಳು ಎದುರಾಗೋದು ಪಕ್ಕಾ. ಮನೆಯ ಸದಸ್ಯರ ಓಡಾಟ, ಮಾತುಗಳು, ಟಿವಿ, ಗಲಾಟೆ ಎಲ್ಲವೂ ನಿಮ್ಮ ಕೆಲಸಕ್ಕೆ ಭಂಗ ತರೋದು ಗ್ಯಾರಂಟಿ.
-ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ವಸ್ತುಗಳನ್ನೆಲ್ಲ ಗುಡ್ಡೆ ಹಾಕಿಡಬಾರದು.
-ಮನೆಯ ಈಶಾನ್ಯ ಭಾಗವನ್ನು ನೀವು ಆಫೀಸ್ ಕೆಲಸಕ್ಕೆ ಬಳಸಿಕೊಂಡ್ರೆ ನಿಮ್ಮ ಹೆಗಲಿಗೇರುವ ಜವಾಬ್ದಾರಿಗಳು ಹೆಚ್ಚುತ್ತವೆಯಾದ್ರೂ ಕೆಲಸ ಸಮರ್ಪಕವಾಗಿ ಪೂರ್ಣಗೊಳ್ಳೋದಿಲ್ಲ. 

Follow Us:
Download App:
  • android
  • ios