ಗೋಡೆ ಅಂದ ಹೆಚ್ಚಿಸುವ ಗಡಿಯಾರಕ್ಕೂ ಇದೆ ವಾಸ್ತು ನಂಟು!

ಮನೆಯ ಗೋಡೆಗೆ ತೂಗು ಹಾಕುವ ಗಡಿಯಾರಕ್ಕೂ ವಾಸ್ತುವಿದೆಯಾ? ಇದೆ ಎನ್ನುತ್ತೆ ವಾಸ್ತುಶಾಸ್ತ್ರ. ಗಡಿಯಾರವನ್ನು ಯಾವ ದಿಕ್ಕಿಗೆ ಹಾಕಬೇಕು,ಮನೆಯಲ್ಲಿ ಎಲ್ಲೆಲ್ಲ ಗಡಿಯಾರ ಅಳವಡಿಸಬೇಕು, ಬೇಡ ಎಂಬ ಬಗ್ಗೆ ವಾಸ್ತುಶಾಸ್ತ್ರದಲ್ಲಿ ವಿವರಣೆಯಿದೆ. 

Vaastu tips for hanging wall clock in the house

ಮನೆಯಲ್ಲಿರುವ ಗಡಿಯಾರ ಸರಿಯಾದ ಸಮಯ ತೋರಿಸಿದ್ರೆ ಮಾತ್ರ ನಮ್ಮ ಟೈಮೂ ನೆಟ್ಟಗಿರುತ್ತೆ. ಗಡಿಯಾರ ಕೆಟ್ಟು ನಿಂತಿರೋದನ್ನು ಗಮನಿಸದೆ ಇನ್ನೂ ಸಮಯವಿದೆ ಎಂದ್ಕೊಂಡು ಉದಾಸೀನ ಮಾಡಿದ ದಿನ ಮನೆಮಂದಿಯ ಟೈಮ್ ಕೆಡೋದು ಗ್ಯಾರಂಟಿ. ಇನ್ನು ಗಡಿಯಾರವನ್ನು ಯಾವ ಗೋಡೆಗೆ ತೂಗು ಹಾಕಿದ್ರೂ ನಡೆಯುತ್ತೆ, ಯಾವ ದಿಕ್ಕಿನಲ್ಲಿದ್ರೂ ನಡೆಯುತ್ತೆ ಎಂದೇ ಭಾವಿಸುತ್ತೇವೆ. ಆದ್ರೆ ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರವನ್ನು ಯಾವ ದಿಕ್ಕಿನಲ್ಲಿರುವ ಗೋಡೆ ಮೇಲೆ ಹೇಗೆ ಹಾಕಬೇಕು ಎಂಬ ಬಗ್ಗೆಯೂ ನೀತಿ-ನಿಯಮವಿದೆ. ಗಡಿಯಾರವನ್ನು ಹೆಚ್ಚಾಗಿ ಲಿವಿಂಗ್ ರೂಮ್‍ನಲ್ಲಿ ತೂಗು ಹಾಕುತ್ತೇವೆ. ಗೋಡೆ ಗಡಿಯಾರದ ಬಗ್ಗೆ ವಾಸ್ತುಶಾಸ್ತ್ರ ಏನು ಹೇಳುತ್ತೆ ಗೊತ್ತಾ?

ಆ್ಯಂಟಿಕ್ ಅಂತ ಮನೇನಲ್ಲಿ ಏನೇನೋ ಇಟ್ಕೋಬೇಡಿ!

-ವಾಲ್ ಕ್ಲಾಕ್ ಯಾವಾಗಲೂ ಪೂರ್ವ ದಿಕ್ಕಿಗೆ ಮುಖ ಮಾಡಿರುವಂತೆ ತೂಗು ಹಾಕೋದು ಶುಭ ಸೂಚಕ.
- ಉತ್ತರ ದಿಕ್ಕಿಗೆ ಮುಖ ಮಾಡಿರುವಂತೆ ವಾಲ್ ಕ್ಲಾಕ್ ಅಳವಡಿಸೋದು ಜಾಣತನದ ಯೋಚನೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣ, ಸಂಪತ್ತು ಹಾಗೂ ಖುಷಿ ಹೆಚ್ಚುತ್ತದೆ.
- ನಿಮ್ಮ ಮನೆಯಲ್ಲಿ ವಾಲ್ ಕ್ಲಾಕ್ ಪಶ್ಚಿಮಾಭಿಮುಖವಾಗಿದ್ರೆ ಇಂದೇ ಅದನ್ನು ಅಲ್ಲಿಂದ ತೆಗೆಯುವ ಕೆಲಸ ಮಾಡಿ. ಪಶ್ಚಿಮ ದಿಕ್ಕಿನತ್ತ ಮುಖ ಮಾಡಿರುವಂತೆ ವಾಲ್ ಕ್ಲಾಕ್ ಅಳವಡಿಸೋದು ವಾಸ್ತುಶಾಸ್ತ್ರದ ಪ್ರಕಾರ ಅಷ್ಟು ಶುಭಕರವಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖವಿರುವಂತೆ ವಾಲ್ ಕ್ಲಾಕ್ ತೂಗು ಹಾಕಲು ಯಾವುದೇ ಅವಕಾಶವಿಲ್ಲ ಎಂದಾದ್ರೆ ಮಾತ್ರ ಪಶ್ಚಿಮಾಭಿಮುಖವಾಗಿ ತೂಗು ಹಾಕಿ.
-ಕೆಲವು ಮನೆಗಳಲ್ಲಿ ವಾಲ್ ಕ್ಲಾಕ್ ಅನ್ನು ಮನೆ ಹೊರಗಿನ ಗೋಡೆಗೆ ತೂಗು ಹಾಕುತ್ತಾರೆ. ವಾಸ್ತುಪ್ರಕಾರ ಇದು ಮನೆಗೆ ಒಳ್ಳೆಯದ್ದಲ್ಲ. 
- ಗಡಿಯಾರ ನಿಂತಿರುವುದು ಕಂಡುಬಂದ ತಕ್ಷಣ ಅದರ ಬ್ಯಾಟರಿ ಅಥವಾ ಸೆಲ್ ಬದಲಾಯಿಸಬೇಕು. ನಿಂತ ಗಡಿಯಾರ ಮನೆಗೆ ಅಶುಭವನ್ನುಂಟು ಮಾಡುತ್ತದೆ ಎಂಬ ನಂಬಿಕೆಯಿದೆ. ನಕಾರಾತ್ಮಕ ಶಕ್ತಿಗಳನ್ನು ಇದು ಆಕರ್ಷಿಸುವ ಸಾಧ್ಯತೆಯೂ ಇದೆ. ಅಲ್ಲದೆ, ಮನೆಮಂದಿಯಲ್ಲಿ ಆಲಸ್ಯ ಮೂಡಿಸುವ ಸಾಧ್ಯತೆಯೂ ಇದೆ.

ಈ ಸ್ಮಾರ್ಟ್ ಐಡಿಯಾ ಪಾಲಿಸಿ ಮನೆ ಚಿಕ್ಕದೆಂಬ ಚಿಂತೆ ಬಿಡಿ

-ಗಡಿಯಾರದ ಗ್ಲಾಸ್ ಒಡೆದಿರುವುದು ಕಂಡುಬಂದ ತಕ್ಷಣ ಅದನ್ನು ಬದಲಾಯಿಸಬೇಕು ಇಲ್ಲವೆ ಸರಿಪಡಿಸಬೇಕು.
-ಮನೆಯಲ್ಲಿರುವ ಎಲ್ಲ ಗಡಿಯಾರಗಳು ಸರಿಯಾದ ಸಮಯವನ್ನೇ ತೋರಿಸಬೇಕು. ಒಂದೊಂದು ಗಡಿಯಾರ ಒಂದೊಂದು ಸಮಯವನ್ನು ತೋರಿಸೋದು ಶುಭ ಸೂಚಕವಲ್ಲ. ಆದಕಾರಣ ಮನೆಯಲ್ಲಿರುವ ಎಲ್ಲ ಗಡಿಯಾರಗಳೂ ಸರಿಯಾದ ಹಾಗೂ ಒಂದೇ ಸಮಯವನ್ನು ಸೂಚಿಸುವಂತೆ ನೋಡಿಕೊಳ್ಳಿ.
-ಇತ್ತೀಚಿನ ದಿನಗಳಲ್ಲಿ ಬಹುತೇಕ ಗಡಿಯಾರಗಳಲ್ಲಿ ಫೋಟೋಗಳಿರುವುದು ಕಾಮನ್. ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಅಥವಾ ನಗುತ್ತಿರುವ ಮಗುವಿನ ಫೋಟೋಗಳಿರುವ ಗಡಿಯಾರಗಳನ್ನು ಖರೀದಿಸಿ. ಇವು ಸಂತಸವನ್ನು ಸೂಚಿಸುತ್ತವೆ. ಏಕಾಂಗಿ, ಯುದ್ಧ, ಬೇಸರ, ದುಃಖ, ಕಷ್ಟಗಳನ್ನು ಸೂಚಿಸುವ ಚಿತ್ರಗಳಿರುವ ಗಡಿಯಾರಗಳನ್ನು ಖರೀದಿಸಬೇಡಿ. ಇವು ನಕಾರಾತ್ಮಕ ಭಾವನೆಗಳನ್ನು ಹುಟ್ಟುಹಾಕುತ್ತವೆ. ಖುಷಿಯನ್ನು ಸೂಚಿಸುವ ಫೋಟೋಗಳಿರುವ ಗಡಿಯಾರಗಳು ಮನೆ ಸದಸ್ಯರಲ್ಲಿ ಸಕಾರಾತ್ಮಕ ಮನೋಭಾವವನ್ನು ಹೆಚ್ಚಿಸುತ್ತವೆ.
-ಗಡಿಯಾರವನ್ನು ಸದಾ ಸ್ವಚ್ಛಗಾಗಿಟ್ಟುಕೊಳ್ಳಿ. ವಾರ ಅಥವಾ ತಿಂಗಳಿಗೊಮ್ಮೆ ಗಡಿಯಾರದ ಗ್ಲಾಸ್ ಹಾಗೂ ಅದರ ಹಿಂಭಾಗವನ್ನು ಕ್ಲೀನ್ ಮಾಡೋದಕ್ಕೆ ಮರೆಯಬೇಡಿ.

ಮನೆಯ ಪವಿತ್ರ ಸ್ಥಳ ದೇವರ ಮನೆಗೆ ವಾಸ್ತು ಟಿಪ್ಸ್‌!

-ಯಾವುದೇ ಬಾಗಿಲಿನ ಮೇಲ್ಭಾಗದಲ್ಲಿ ಗಡಿಯಾರಗಳನ್ನು ತೂಗು ಹಾಕಬೇಡಿ. ವಾಲ್ ಕ್ಲಾಕ್ ಅನ್ನು ಗೋಡೆಗೆ ಅಳವಡಿಸಬೇಕು, ಯಾವುದೇ ಬಾಗಿಲಿನ ಮೇಲ್ಭಾಗದಲ್ಲಿ ಅಲ್ಲ.
-ಕೆಲವು ಮನೆಗಳಲ್ಲಿ ಪೆಂಡಲ್ಯೂಮ್ ವಾಲ್ ಕ್ಲಾಕ್ ಅಥವಾ ಸ್ಟ್ಯಾಂಡ್ ಕ್ಲಾಕ್‍ಗಳನ್ನು ಹಾಕಿರುತ್ತಾರೆ. ಪೆಂಡಲ್ಯೂಮ್ ವಾಲ್ ಕ್ಲಾಕ್‍ಗಳನ್ನು ಪೂರ್ವ ದಿಕ್ಕಿಗೆ ಮುಖ ಮಾಡಿರುವಂತೆ ಅಳವಡಿಸುವುದರಿಂದ ಮನೆಯಲ್ಲಿ ಖುಷಿ ಹೆಚ್ಚುತ್ತದೆ. 
-ವಾಲ್ ಕ್ಲಾಕ್ ಅನ್ನು ಡೈನಿಂಗ್ ರೂಮ್‍ನಲ್ಲಿಡುವುದು ಒಳ್ಳೆಯದ್ದಲ್ಲ. ಲಿವಿಂಗ್ ಅಥವಾ ಬೆಡ್ ರೂಮ್‍ನಲ್ಲಿಡುವುದು ಉತ್ತಮ.
-ಕೆಲವರು ಬೆಡ್‍ರೂಮ್‍ನಲ್ಲಿ ಕೂಡ ವಾಲ್ ಕ್ಲಾಕ್ ಅಳವಡಿಸಿರುತ್ತಾರೆ. ಬೆಡ್‍ರೂಮ್‍ನಲ್ಲಿ ನೀವು ದಕ್ಷಿಣಕ್ಕೆ ತಲೆ ಹಾಕಿ ಮಲಗೋದಾದ್ರೆ ಉತ್ತರ ಅಥವಾ ಪೂರ್ವ ದಿಕ್ಕಿಗಿರುವಂತೆ ಗಡಿಯಾರ ತೂಗು ಹಾಕಿ. ಒಂದು ವೇಳೆ ನೀವು ಪೂರ್ವಕ್ಕೆ ತಲೆಹಾಕಿ ಮಲಗೋದಾದ್ರೆ ಉತ್ತರ ದಿಕ್ಕಿನಲ್ಲಿರುವ ಗೋಡೆ ಅಥವಾ ಪೂರ್ವ ಭಾಗದ ಗೋಡೆಗೆ ಗಡಿಯಾರ ತೂಗು ಹಾಕಿ.

Latest Videos
Follow Us:
Download App:
  • android
  • ios